‘ಸಾಹಿತ್ಯದ ಕೆಲಸ ಸ್ಥಗಿತಗೊಂಡ ಜನರ ಬದುಕನ್ನು ಚಲನಶೀಲನಗೊಳಿಸುವಂತದ್ದಾಗಿದ್ದು, ಈ ದಿಸೆಯಲ್ಲಿ ಉದಯೋನ್ಮುಖ ಕವಿಗಳು ಕವನ ರಚಿಸಲು ಆದ್ಯತೆ ನೀಡಬೇಕು’ ಎಂದು ಕೊಪ್ಪಳದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.
ಕೊಪ್ಪಳ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದ ದಸರಾ ಕಾವ್ಯ ಸಂಭ್ರಮ-2025ರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, “ದಾರ್ಶನಿಕರ ಆದರ್ಶ, ಕವನಗಳನ್ನು ಉದಾಹರಿಸಿ ಜನರಿಗೆ ಸಾಹಿತಿಗಳು ಹೇಗೆ ದಾರಿದೀಪವಾಗಬಹುದು ಎಂಬುದನ್ನು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಎಂ ವೆಂಕಟೇಶ್ವರುಲು ಮಾತನಾಡಿ, “ಕವಿ ಹಾಗೂ ವಿಜ್ಞಾನಿಗಳ ಆಲೋಚನೆ ಒಂದೇಯಾಗಿದ್ದು, ವಿಜ್ಞಾನಿಗೆ ಪ್ರಯೋಗಾಲಯ ಬೇಕಿದ್ದರೆ, ಕವಿಗೆ ಮನಸ್ಸೇ ಪ್ರಯೋಗಾಲಯ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವದ್ಯಾಲಯದ ಕುಲಪತಿ ಪ್ರೊ. ಬಿ ಕೆ ರವಿಯವರು ಮಾತನಾಡಿ, “ವಿಜ್ಞಾನ ತಂತ್ರಜ್ಞಾನದ ಭರಾಟೆಯ ಈ ದಿನಗಳಲ್ಲಿ, ಯುವ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಇದು ಬದಲಾಗಬೇಕಿದೆ. ಪುಸ್ತಕ ಓದುವ ಹವ್ಯಾಸವನ್ನು ಬೆಳಸಬೇಕಿದೆ” ಎಂದರು.
ಕಲ್ಯಾಣವಾಣಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈ ವೇಳೆ 50ಕ್ಕೂ ಅಧಿಕ ಕವಿಗಳು ಕವನ ಓದಿದರು. ಈ ವೇಳೆ ವಿವಿಯ ವಿದ್ಯಾರ್ಥಿಗಳು ಆಕರ್ಷಕ ಸಂವಿಧಾನ ನೃತ್ಯ ಮಾಡಿ ಗಮನ ಸೆಳೆದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ, ರಾಯಚೂರು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ, ವಿಜಾಪುರ ಅಕ್ಕಮಹಾದೇವಿ ವಿಶ್ವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ ವಸುಂದರಾ ಭೂಪತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್ ಎಲ್ ಪುಷ್ಪಾ, ಸಾಹಿತಿ ಬಂಡಾಯ ಅಲ್ಲಮಪ್ರಭು ಬೆಟ್ಟದೂರು, ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಂಗೀತ ಕಲಾವಿದ ರಾಮಚಂದ್ರ ಗೊಂಡಬಾಳ, ಬಾಷಾ ಸಂಗಡಿಗರು, ಕೊಪ್ಪಳ ವಿ ವಿ ಕುಲಸಚಿವ ಕೆವಿಕೆ ಪ್ರಸಾದ, ಉಪನ್ಯಾಸಕಿ ಡಾ. ಪಾರ್ವತಮ್ಮ, ಪ್ರವೀಣ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು.
ಈ ವೇಳೆ ವೀರೇಶ್ ಎಂಬುವವರು ನಿರೂಪಿಸಿದರು.