ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಎಂದೇ ಪ್ರಸಿದ್ಧಿಯಾಗಿರುವ ಅನನ್ಯ ಭಟ್ ಅವರ ಹಾಡುಗಳನ್ನು ಕೇಳಿ ಇಮ್ಮಡಿಯಾಯಿತು.
ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಬುಧವಾರ ಸಂಜೆ ಜರುಗಿದ ದಸರಾ ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ಅನನ್ಯ ಭಟ್ ಅವರು ಪ್ರಸ್ತುತಪಡಿಸಿದ ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಚಲನಚಿತ್ರ ಗೀತೆಗಳು ಜನ-ಮನ ರಂಜಿಸಿದವು.

ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರದ ಮೆಹಬೂಬಾ, ಮೇಲೆ ನೀಲಿ ಅಂಬರ, ನನ್ ಗಂಗಿ ರೂಪಾ, ಬಿಳಿಗಿರಿ ರಂಗನ ಕೊಂಡಾಡುವ ತಂದನ್ನಾ ತಾನನ, ಮಾದೇವೋ ಮಾದೇವೋ ಕಂಸಾಳೆ ಪದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ದ ಡೆವಿಲ್ ಚಿತ್ರದ ಇದ್ರೆ ನೆಮ್ದಿಯಾಗಿರ್ಬೇಕ್, ಪುನೀತ್ ರಾಜ್ ಕುಮಾರ್ ನಟಿಸಿರುವ ಅಣ್ಣಾಬಾಂಡ್ ಚಿತ್ರದ ತುಂಬಾ ನೋಡ್ಬೇಡಿ, ಹುಡುಗರು ಚಿತ್ರದ ತೊಂದ್ರೇ ಇಲ್ಲಾ ಪಂಕಜಾ, ಏನೋ ಮಾದೇವ, ಸೋಜುಗಾದ ಸೂಜು ಮಲ್ಲಿಗೆ ಹಾಡುಗಳು ಪ್ರೇಕ್ಷಕರ ಮನ ಸೆಳೆದವು.