ಬಳ್ಳಾರಿ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಗಾಂಧಿ ಪ್ರತಿಮೆಗೆ ಪುಷ್ಪಮಾಲೆ ಹಾಕುವ ಮೂಲಕ ಮಾಜಿ ಅರೆ ಸೈನಿಕರು ಸತ್ಯ, ಶಾಂತಿ, ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧಿಯವರ 156ನೇ ಜಯಂತಿ ಹಾಗೂ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121ನೇ ಜನ್ಮದಿನವನ್ನು ಆಚರಿಸಿದರು.
ಮಾಜಿ ಅರೆಸೇನಾ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಎನ್.ಪ್ರಲ್ಹಾದ ರೆಡ್ಡಿ ಮಾತನಾಡಿ, “ಗಾಂಧಿಯ ಸತ್ಯ ನ್ಯಾಯ ನೀತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳ ಜೀವನವನ್ನು ನಾವುಗಳು ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಆಧುನಿಕ ಯುಗದಲ್ಲಿ ಮೋಜಿಗೆ ಬಿದ್ದು ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಗಾಂಧೀಜಿ ಮತ್ತು ಶಾಸ್ತ್ರಿಯವರಂತೆ ಸರಳ ಜೀವನವನ್ನು ನಡೆಸಿದಲ್ಲಿ ಜೀವನ ಸುಂದರವಾಗಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ಜನತಾದರ್ಶನದಲ್ಲಿ ನೂಕು ನುಗ್ಗಲು: ಅಹವಾಲು ನೀಡಲು ಹೈರಾಣಾದ ಜನತೆ
ಬಳ್ಳಾರಿ ನಗರದ ಮಹಾನಗರ ಪಾಲಿಕೆಯ ಮೇಯರ್ ಮೂಲಂಗಿ ನಂದೀಶ್, ಮಾಜಿ ಅರೆ ಸೈನಿಕ ಬಿ ಎನ್ ಪ್ರಹ್ಲಾದ ರೆಡ್ಡಿ, ಈಶ್ವರ ರೆಡ್ಡಿ ಲಕ್ಷ್ಮಣ್, ವೀರೇಶ್ ಗೋವಿಂದ, ಎಂಆರ್ ರೆಡ್ಡಿ ಹಾಗೂ ಇತರರಿದ್ದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.