ಹಾವೇರಿ | ಗಾಂಧೀಜಿಯವರ ಮೌಲ್ಯಗಳನ್ನು ಮತ್ತೆ ಮತ್ತೆ ಜನರಡೆಗೆ ಒಯುತ್ತೇವೆ: ಸಾಹಿತಿ ಸತೀಶ್ ಕುಲಕರ್ಣಿ

Date:

Advertisements

“ಗಾಂಧಿಜೀಯವರನ್ನು ಅಪಮೌಲ್ಯ ಮಾಡುತ್ತಿರುವ ಈ ಕಾಲದಲ್ಲಿ ಗಾಂಧಿಯವರ ಮೌಲ್ಯಗಳನ್ನು, ವಿಚಾರಧಾರೆಗಳನ್ನು ಮತ್ತೆ ಮತ್ತೆ ಜನರಡೆಗೆ ಒಯುತ್ತೇವೆ” ಎಂದು ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಹೇಳಿದರು.

ಹಾವೇರಿ ಪಟ್ಟಣದ ಎಸ್ಎಫ್ಐ, ಡಿವೈಎಫ್ಐ, ಬಾಲ ಸಂಘಂ, ಸಾಹಿತ್ಯ ಕಲಾವಿದರು ಬಳಗ, ಪ್ರಗತಿಪರ ಸಂಘಟನೆಗಳ ವತಿಯಿಂದ ಗಾಂಧಿ ವೃತ್ತದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧಿಜೀ ಜಯಂತಿಯನ್ನು ಅವರ ಪ್ರತಿಮೆಗೆ ಪುಷ್ಪ ನಮನ ಗೌರವ ಸಲ್ಲಿಸಿ ಮಾತನಾಡಿದರು.

“ವಿದ್ಯಾರ್ಥಿ- ಯುವಜನರಿಗೆ, ನಾಡಿನ ಜನರಿಗೆ ಗಾಂಧಿಜೀಯವರ ವಿಚಾರಗಳನ್ನು ತಿಳಿಸಬೇಕಾಗಿದೆ. ಆ ಕೆಲಸವನ್ನು ಕಾರ್ಯಕ್ರಮ ಆಯೋಜನೆ ಸಂಘಟನೆಗಳು ಮಾಡುತ್ತಿವೆ. ಜಯಂತಿಯನ್ನು ಕೇವಲ ಆಚರಣೆಯಾಗಿ ಮಾಡುವುದಲ್ಲದೆ ಒಂದು ಮೌಲ್ಯ, ಶಾಂತಿ ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಗುತ್ತದೆ” ಎಂದರು.

ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ್ ಮಾತನಾಡಿ, “ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಪಣಕಿಟ್ಟು ಹೋರಾಡಿದ ಮಹಾನ್ ತ್ಯಾಗಿ ಗಾಂಧಿ, ಅವರ ಅಹಿಂಸೆ ತತ್ವಗಳು ಬೇಕಾಗಿದೆ. ಸತ್ಯದ ದಾರಿ ಬೇಕಾಗಿದೆ. ನಮ್ಮಲ್ಲಿ ಯಾವುದೇ ಜಾತಿ, ಧರ್ಮ, ಮತ ಬೇದವಿಲ್ಲದೆ ನಾವೇಲ್ಲ ಒಂದೇ ಎಂಬ ತತ್ವದಡಿ ಬದುಕುಬೇಕಾಗಿದೆ. ಈ ನಿಟ್ಟಿನಲ್ಲಿ ಗಾಂಧಿ ಎಂದಿಗೂ ಅಜರಾಮರವಾಗಿರುತ್ತಾರೆ” ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಗಾಂಧಿಯವರ ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಸಮಾಜಕ್ಕೆ ಹಲವು ಮೌಲ್ಯಗಳನ್ನು ನೀಡಿದ್ದಾರೆ. ಮಾನವೀಯತೆಯ ಮೌಲ್ಯಗಳೆಡೆಗೆ ಸಾಗಬೇಕು” ಎಂದು ಕರೆ ನೀಡಿದರು.

“ಯುಗಪುರುಷ ಗಾಂಧಿಯವರ ವಿಚಾರಧಾರೆಗೆ ವಿರುದ್ಧವಾಗಿರುವ ವಿಭಿನ್ನ ಶಕ್ತಿಗಳು ಬಹಳಷ್ಟು ವಿಜೃಂಭಿಸುತ್ತಿರುವ ಕಾಲದ ಮಧ್ಯೆಯು ನಾವು ಸತ್ಯದ ದಾರಿಯಲ್ಲಿ ಸಾಗುತ್ತಿದ್ದೇವೆ. ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಮಾತ್ರ ಗಾಂಧಿ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುವ ಸರ್ಕಾರ ಅವರನ್ನು ಗುಂಡಿಟ್ಟು ಕೊಂದ ದಿನವನ್ನು ಯಾಕೆ? ಮರೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಲ ಸಂಘಂನ ಧನುಷ್ ದೊಡ್ಡಮನಿ ಗಾಂಧಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಸ್ವಾಗತಸಿ ನಿರೂಪಿಸಿದರು, ಶ್ರೀಶಕ್ತಿ ತೆರದ ತಂಗುದಾಣ ಮುಖ್ಯಸ್ಥ ಪುಟ್ಟಪ್ಪ ಹರವಿ ವಂದಿಸಿದರು. 

ಈ ಸಂದರ್ಭದಲ್ಲಿ ವಕೀಲರು ನಾರಾಯಣ ಕಾಳೆ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ,  ಡಿಎಸ್ಎಸ್ ಮುಖಂಡರು ಉಡಚಪ್ಪ ಮಾಳಗಿ, ಸಾಹಿತಿ ರಾಜೇಂದ್ರ ಹೆಗಡೆ, ಎಸ್ಎಫ್ಐ ಮುಖಂಡರು ಅರುಣ್ ನಾಗವತ್, ಚೈತ್ರ ಕೊರವರ, ಬಾಲ ಸಂಘಂನ ತೇಜಸ್ ದೊಡ್ಡಮನಿ, ಪ್ರಜ್ವಲ್, ಮೈನುದೀನ್ ಇಲಿಬುಡ್ಡಿ, ಆಧ್ಯಾ ಎನ್ ಆರ್, ಆರ್ಯ್ಯ ಎನ್ ಆರ್, ಪ್ರೇಮ್, ಅಭಿ ಬಂಡಿವಡ್ಡರ, ಮಣಿಕಂಠ ಪಾಟೀಲ, ಸಂದೀಪ್ ಓಲೆಕಾರ, ಗೌಸಿಯಾ ಅಗಡಿ, ತಸ್ಮೀಯಾ ಅಗಡಿ  ಸೇರದಂತೆ ಇತರರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ಮಾಜಿ ಅರೆ ಸೈನಿಕರಿಂದ ಗಾಂಧಿ ಜಯಂತಿ ಆಚರಣೆ

ಬಳ್ಳಾರಿ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಗಾಂಧಿ ಪ್ರತಿಮೆಗೆ ಪುಷ್ಪಮಾಲೆ...

ಈದಿನ ಗ್ರೌಂಡ್‌ ರಿಪೋರ್ಟ್‌ | ಪ್ರವಾಹ ಇಳಿದುಹೋದ ಮೇಲೆ… ಬದುಕೆಲ್ಲ ಬರಿದಾಗಿದೆ!

ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹ ತಗ್ಗಿದೆ. ಇಷ್ಟು ದಿನ ಆರ್ಭಟಿಸಿದ...

ಕಲಬುರಗಿ | ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಕನ್ನಡ, ವಿದ್ಯಾರ್ಥಿ,...

ಕಲಬುರಗಿ | ಅಶೋಕ ವಿಜಯದಶಮಿ ಅಂಗವಾಗಿ ಪಂಚಶೀಲ ಧ್ವಜಾರೋಹಣ

ನಗರದ ಶಕ್ತಿನಗರ ಬಡಾವಣೆಯಲ್ಲಿ ಜೈಭೀಮ್ ತರುಣ್ ಸಂಘ (ರಿ) ವತಿಯಿಂದ ಗುರುವಾರ...

Download Eedina App Android / iOS

X