ಸೋನಮ್ ವಾಂಗ್‌ಚುಕ್ ಬಂಧನ ಪ್ರಶ್ನಿಸಿ ಪತ್ನಿಯಿಂದ ಸುಪ್ರೀಂ ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

Date:

Advertisements

ಲಡಾಖ್‌ನ ಪರಿಸರ ಕಾರ್ಯಕರ್ತ ಹಾಗೂ ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 26ರಂದು ಲಡಾಖ್‌ಗೆ ರಾಜ್ಯ ಹಕ್ಕು ಹಾಗೂ ಸಂವಿಧಾನಿಕ ಭದ್ರತೆಗಾಗಿ ನಡೆದ ಪ್ರತಿಭಟನೆಗಳ ಹಿನ್ನೆಲೆ, ರಾಷ್ಟ್ರೀಯ ಭದ್ರತಾ ಕಾಯ್ದೆ (NSA)ಅಡಿಯಲ್ಲಿ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರನ್ನು ರಾಜಸ್ಥಾನದ ಜೋಧ್‌ಪುರ ಕಾರಾಗೃಹದಲ್ಲಿ ವಶದಲ್ಲಿರಿಸಲಾಗಿದೆ.

ಗೀತಾಂಜಲಿ ಆಂಗ್ಮೋ ಅವರು ಸಂವಿಧಾನದ 32ನೇ ವಿಧಿಯಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಪತಿಯ ಬಂಧನ ಅಸಂವಿಧಾನಿಕ ಎಂದು ಆಕ್ಷೇಪಿಸಿದ್ದಾರೆ. ತುರ್ತು ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ಕೋರಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನರಮೇಧ ನಡೆಸಿದವರೊಂದಿಗೆ ಭಾರತ ನಿಲ್ಲುವುದು ಅಕ್ಷಮ್ಯ ಅಪರಾಧ

ಬಂಧನ ಪ್ರಶ್ನಿಸುವ ಹಿನ್ನಲೆಯಲ್ಲಿ ಸಲ್ಲಿಸಲಾದ ಕಾರಣಗಳ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ದಸರಾ ರಜೆಯ ನಂತರ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆ ಮರುಪ್ರಾರಂಭವಾದಾಗ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆ ಇದೆ.

ನವೋದ್ಯಮಿ ಹಾಗೂ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಸೋನಮ್ ವಾಂಗ್‌ಚುಕ್, ಲಡಾಖ್‌ನ ಪರಿಸರ ಸಂರಕ್ಷಣೆ, ಹಿಮಾಲಯದ ಪರಿಸ್ಥಿತಿ ಮತ್ತು ಸ್ಥಳೀಯ ಜನರ ಹಕ್ಕುಗಳ ವಿಷಯಗಳಲ್ಲಿ ದೀರ್ಘಕಾಲದಿಂದ ಸಕ್ರಿಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

RSSಅನ್ನು ‘ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ’ ಎಂದಿದ್ದರು ಗಾಂಧಿ

ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್‌ಅನ್ನು ಹೊಗಳಿರುವ ಪ್ರಧಾನಿ ಮೋದಿ ಅವರು,...

ಭಾರತದಲ್ಲಿ ಪ್ರತಿ ಗಂಟೆಗೆ ಓರ್ವ ರೈತ ಆತ್ಮಹತ್ಯೆ: NCRB ವರದಿ

ಭಾರತದಲ್ಲಿನ ಅಪರಾಧ ಪ್ರಕರಣಗಳ ಕುರಿತಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)...

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

Download Eedina App Android / iOS

X