ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಕುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ 157ನೇ ವರ್ಷದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ‘ರೈತ ಚಳವಳಿಯೂ ಗಾಂಧೀ ಮಾರ್ಗದ ತತ್ವ ಸಿದ್ಧಾಂತದಲ್ಲಿ ನಡೆಯುತ್ತಿದೆ’ ಎಂದು ತಿಳಿಸಿದರು.
ಶಾಂತಿ ಮಾರ್ಗದ ಹೋರಾಟದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ರೈತ ಚಳವಳಿ ಎಂದಿಗೂ ದುರುಪಯೋಗ ಆಗದಂತೆ ನಡೆದುಕೊಳ್ಳಬೇಕಾದ ಕರ್ತವ್ಯ ಕಾರ್ಯಕರ್ತರ ಮೇಲಿದೆ. ಚಳವಳಿಯನ್ನು ಮೊನ್ನೆಡೆಸುವ ಜವಾಬ್ದಾರಿ ಗ್ರಾಮ ಪದಾಧಿಕಾರಿಗಳದ್ದಾಗಿದೆ. ಸ್ಥಳೀಯವಾಗಿ ಸಾಂಘಿಕ ಹೋರಾಟದ ಮೂಲಕ ನೊಂದವರಿಗೆ ನ್ಯಾಯ ಒದಗಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ರೈತ ಚಳವಳಿ ಎಂದೆಂದಿಗೂ ಗಾಂಧೀಯವರನ್ನು ನೆನೆಯುವ ಅತ್ಯಗತ್ಯವಿದೆ. ಅವರ ಆಶಯಗಳನ್ನು ಹೋರಾಟದಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ. ಜಡ್ಡು ಗಟ್ಟಿದ ಆಡಳಿತ ವ್ಯವಸ್ಥೆ, ಸರ್ಕಾರಗಳಿಗೆ ಹೋರಾಟವೊಂದೇ ಬಿಸಿ ಮುಟ್ಟಿಸಲಿರುವ ಏಕೈಕ ದಾರಿ. ಆದ್ದರಿಂದ, ಸಂಘಟಿತರಾಗಿ ಪ್ರಬಲ ಹೋರಾಟ ನಡೆಸಬೇಕಿದೆ ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಸತ್ಯ, ಸರಳತೆ, ಸೌಹಾರ್ದತೆ, ಸಹಿಷ್ಣುತೆ ವರ್ತಮಾನದ ಭಾರತಕ್ಕೆ ಅಗತ್ಯ : ಕೆ ಟಿ ವೀರಪ್ಪ
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಈಶ್ವರ್, ಜಿಲ್ಲಾ ಪದಾಧಿಕಾರಿಗಳಾದ ಬಸವರಾಜೆ ಗೌಡ, ಅಗ್ರಹಾರ ರಾಮೇಗೌಡ, ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಧ್ಯಕ್ಷ ಚಂದ್ರೆಗೌಡ, ಕಟ್ಟೆಮಳಲವಾಡಿ ಮಹದೇವು, ರವಿ, ಮಹೇಶ್, ಗ್ರಾಮ ಅಧ್ಯಕ್ಷ ಮಹದೇವು, ಶಂಕರ್, ಮಾದೇವು, ವೆಂಕಟೇಶ್, ಅಣ್ಣೆಗೌಡ ಸೇರಿದಂತೆ ಇನ್ನಿತರರು ಇದ್ದರು.