RO ಘಟಕಗಳಿಗೆ ಡಿಜಿಟಲ್‌ ರೂಪ; ಬೆಂಗಳೂರಿನ ಕಿಯೋಸ್ಕ್‌ಗಳಲ್ಲಿ QR ಕೋಡ್ ಪಾವತಿ ಸೌಲಭ್ಯ

Date:

Advertisements

ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ನಗರವಾಸಿಗಳು ನೀರಿಗಾಗಿ ಅವಲಂಬಿಸಿರುವ RO ಕಿಯೋಸ್ಕ್ಗಳ ವ್ವಯಸ್ಥೆಯಲ್ಲಿ ಮಹತ್ತರ ಬದಲಾವಣೆಯೊಂದು ಆಗಿದೆ. ಮೊದಲು 20 ಲೀಟರ್ ನೀರಿಗಾಗಿ 5 ರೂ. ನಾಣ್ಯಗಳನ್ನು ಹಾಕಬೇಕಾಗಿತ್ತು. ಈಗ Bengaluru Water Supply and Sewerage Board (BWSSB) ಸಹಾಯದಿಂದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಹಣ ಪಾವತಿಸಿ ನೀರು ಪಡೆಯಬಹುದಾಗಿದೆ.

ಪ್ರದೇಶಗಳಲ್ಲಿ RO ಕಿಯೋಸ್ಕ್‌ಗಳನ್ನು ಅಳವಡಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಅವುಗಳ ನಿರ್ವಹಣೆಯಲ್ಲಿ ಹಲವು ಲೋಪದೋಷಗಳಿದ್ದವು. ಹಲವು ಕಿಯೋಸ್ಕ್ಗಳು ಕಾರ್ಯ ರ್ನಿಹಿಸುತ್ತಲೇ ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಬಳಿಕ 1184 RO ಘಟಕ​ಗಳನ್ನು BWSSB ಸುಪರ್ದಿಗೆ ಒಪ್ಪಿಸಲಾಗಿತ್ತು. ಈಗ ಈ ಮಂಡಳಿ ಎಲ್ಲಾ ಕಿಯೋಸ್ಕ್‌ಗಳನ್ನು ಸ್ವಾವಲಂಬಿ ಘಟಕಗಳನ್ನಾಗಿ ನವೀಕರಿಸಿದ್ದು, ಡಿಜಿಟಲ್ ಕಿಯೋಸ್ಕ್‌ಗಳೆಂದು ಮರುನಾಮಕರಣ ಮಾಡಿದೆ.

ಈ ಹೊಸ ವ್ಯವಸ್ಥೆಯಲ್ಲಿ, 5 ರೂ. ನಾಣ್ಯ ಹಾಕುವ ಅವಶ್ಯಕತೆ ಇಲ್ಲ. ಬಳಕೆದಾರರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ನೇರವಾಗಿ BWSSBಗೆ ಹಣ ಪಾವತಿಸಿ, ನೀರು ತುಂಬಿಸಿಕೊಳ್ಳಬಹುದು. ಸ್ಮಾರ್ಟ್‌ಫೋನ್ ಇಲ್ಲದವರು BWSSB ಸರ್ವಿಸ್ ಸೆಂಟರ್‌ಗಳಿಗೆ ಹೋಗಿ, ಮೊದಲಿಗೆ ಹಣ ಪಾವತಿಸಿ ಕಾರ್ಡ್ ಪಡೆಯಬಹುದು. ಬಳಿಕ ಅದನ್ನು ಸ್ವೈಪ್ ಮಾಡಿ ನೀರು ತುಂಬಿಸಿಕೊಳ್ಳಬಹುದು.

Advertisements

ಇದನ್ನೂ ಓದಿ: ಬೆಂಗಳೂರು | ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು: ಅಧಿಕಾರಿಗಳಿಗೆ ಡಿ ಎಸ್ ರಮೇಶ್ ಎಚ್ಚರಿಕೆ

ಡಿಜಿಟಲ್ ಘಟಕ​ಗಳನ್ನು ಸರ್ಕಾದಿಂದ ದೂರವಿಟ್ಟಿರುವ ಸರಬರಾಜು ಮಂಡಳಿ, ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದೆ. ಅಲ್ಲದೆ, ಬರುವ ಆದಾಯದ 60ರಷ್ಟು ಭಾಗವನ್ನು ಗುತ್ತಿಗೆದಾರರಿಗೆ ನೀಡುವುದಾಗಿ ಹೇಳಿದೆ. ಮೊದಲಿಗೆ BBMP ಘಟಕ​ಗಳು ನಿರ್ವಹಣೆ ಮಾಡುತ್ತಿದ್ದಾಗ ಹಣಕಾಸು ವ್ಯವಹಾರದ ಯಾವ ದಾಖಲೆಗಳೂ ಇರಲಿಲ್ಲ. ಸರಬರಾಜು ಮಾಡುತ್ತಿದ್ದ ನೀರು ಸಹ ಕಳಪೆ ಗುಣಮಟ್ಟದ್ದಾಗಿತ್ತು. ಘಟಕಗಳ ಒಳಗಿದ್ದ ಫಿಲ್ಟರ್​ಗಳನ್ನು ಬದಲಾಯಿಸದೇ ತಿಂಗಳುಗಟ್ಟಲೆ ಇಡಲಾಗುತ್ತಿತ್ತು. ಇದನ್ನೆಲ್ಲ ಗಮನಿಸಿದ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರ ‘ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’

ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರವಾಗಿ 2025ನೇ ಸಾಲಿನ ಡಾ....

ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?

ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ...

ಶಿವಮೊಗ್ಗ | ಮನೆಯಲ್ಲಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ

ಮಾರಕಾಸ್ತ್ರದಿಂದ ಚುಚ್ಚಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕು...

ಮೈಸೂರು | ರೈತ ಚಳವಳಿಯೂ ಗಾಂಧೀ ಮಾರ್ಗದ ತತ್ವ ಸಿದ್ಧಾಂತದಲ್ಲಿ ನಡೆಯುತ್ತಿದೆ : ಹೊಸೂರು ಕುಮಾರ್

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಕುಪ್ಪೆ ಗ್ರಾಮದಲ್ಲಿ ಕರ್ನಾಟಕ...

Download Eedina App Android / iOS

X