ʼʼಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಹಾಗೂ ಚಿತ್ರದುರ್ಗದ ಹಿರಿಯ ಮುಖಂಡರು ಮುಸ್ಲಿಂ ನಾಯಕರಾದ ಆರ್ ಕೆ ಸರ್ದಾರ್ ರವರಿಗೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳದೆ, ಇವರಿಗೆ ಮೋಸ ಮಾಡುತ್ತಿದೆ. ನಿಗಮ ಮಂಡಳಿ ನೇಮಕಕ್ಕೆ ಪರಿಗಣಿಸದೇ ಅನ್ಯಾಯ ಮಾಡಿದೆʼʼ ಎಂದು ಆರ್ ಕೆ ಸರ್ದಾರ್ ಬೆಂಬಲಿಗರು ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲಿಗರೊಬ್ಬರು ಮಾತನಾಡಿ ʼʼಚಿತ್ರದುರ್ಗದ ಮುಖಂಡರಾದ ಆರ್ ಕೆ ಸರ್ದಾರ್ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸುವ ಮೂಲಕ ಸಾಕಷ್ಟು ದುಡಿದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬದಲು ಕಡೆಗಣಿಸಲಾಗಿದೆ. ಮುಂದೆ ಬರುವ ಪಂಚಾಯಿತಿ ಮತ್ತು ಕೌನ್ಸಿಲರ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆರ್ ಕೆ ಸರ್ದಾರ್ ರವರಿಗೆ ಯಾವುದಾದರೂ ಉನ್ನತಮಟ್ಟದ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡಬೇಕುʼʼ ಎಂದು ಒತ್ತಾಯಿಸಿದರು.

ʼʼಸೂಕ್ತ ಸ್ಥಾನಮಾನ ನೀಡದಿದ್ದಲ್ಲಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೈತಿಕ ರಾಜಕಾರಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಮಾದರಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ

ಚಿತ್ರದುರ್ಗದ ಪ್ರವಾಸಿ ಬಂಗಲೆಯಿಂದ ಕಾಂಗ್ರೆಸ್ ಪಕ್ಷದ ಕಛೇರಿಯವರೆಗೆ ನಡೆದ ಮೌನ ಪ್ರತಿಭಟನೆಯಲ್ಲಿ ಆರ್ ಕೆ ಸರ್ದಾರ್ ಬೆಂಬಲಿಗರಾದ ರೆಹಮಾನ್ ಖಾನ್, ನಿವೃತ್ತ ಡಿವೈಎಸ್ಪಿ ಮೆಹಬೂಬ್ ಖಾನ್, ದಾದಾ ಪೀರ್ ಭರಮಸಾಗರ, ರೈತ ವಿಭಾಗದ ಅಧ್ಯಕ್ಷ ರಾಘವೇಂದ್ರ , ಓಬಳೇಶ್, ಜಾಕೀರ್ ಹುಸೇನ್, ನಯಾಜ್ ಬಾಬು, ಯುವ ಕಾಂಗ್ರೆಸ್ ಅಸೆಂಬ್ಲಿ ಸೆಕ್ರೆಟರಿ ಎಂ ಡಿ ಯಾಸೀನ್, ಪ್ರಸನ್ನ ಕುಮಾರ್, ಚೇತನ್, ವಸೀಂ, ರಿಯಾಜ್, ಆರ್ ಕೆ ಅಲಿ, ಸಿರಾಜ್, ಯೂಸುಫ್, ನಿಜಾಮ್ ಮುಬಾರಕ್ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.