ಸಿಂಧನೂರು | ಡಿಜಿಟಲ್ ಸ್ವಾತಂತ್ರ ಜಾಗೃತಿ ಅಭಿಯಾನ

Date:

Advertisements

“ಡಿಜಿಟಲ್ ಸ್ವಾತಂತ್ರ” ಅಭಿಯಾನದ ಅಂಗವಾಗಿ ರಾಜ್ಯವ್ಯಾಪಿಯಾಗಿ ಕೈಗೊಂಡಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಶುಕ್ರವಾರ ಸಿಂಧನೂರಿನ ಬಸವ ವೃತ್ತ ಹಾಗೂ ಟಿಪ್ಪು ಸುಲ್ತಾನ್ ವೃತ್ತ ಬಡಿಬಸ್‌ನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹ್ಯಾಕಿಂಗ್, ಕಳ್ಳತನ ಹಾಗೂ ಡಿಜಿಟಲ್ ಮೋಸಗಳಿಂದ ಎಚ್ಚರಿಸುವುದು ಮತ್ತು ಸುರಕ್ಷಿತವಾಗಿ ಆನ್‌ಲೈನ್ ವಲಯವನ್ನು ಬಳಸಲು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಗರದ ಕೆಲವು ವೃತ್ತಗಳಲ್ಲಿ ಜಾಗೃತ ಮೂಡಿಸುವ ಮಳಿಗೆಗಳು ವಿಶೇಷವಾಗಿ ಸ್ಥಾಪಿಸಲಾಯಿತು.

ರಾಜ್ಯದಲ್ಲಿ ಸೈಬರ್ ವಂಚನೆ, ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಹಾಗೂ ಗೇಮಿಂಗ್ ವ್ಯಸನದಿಂದ ಹೆಚ್ಚುತ್ತಿರುವ ಅಪಾಯಗಳ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇವು ಕೇವಲ ಮನರಂಜನೆ ಎಂಬ ನೆಪದಲ್ಲಿ ಪ್ರವೇಶಿಸಿ, ಜೀವನವನ್ನು ಹಾಳುಮಾಡುವುದು, ಕುಟುಂಬದ ಉಳಿತಾಯವನ್ನು ನಾಶಮಾಡುವುದು, ಜನರನ್ನು ಸಾಲದ ಬಲೆಗೆ ಸಿಲುಕಿಸುವುದು ಹಾಗೂ ಆತ್ಮಹತ್ಯೆಗಳ ಮಟ್ಟಿಗೆ ಕರೆದೊಯ್ಯುತ್ತಿದೆ ಇಂತಹ ಜಾಲೆಯಿಂದ ದೂರವನ್ನಾಗಿಡುವುದು ಜಾಗೃತಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಘಟಕರು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್

ಸ್ಥಳೀಯ ಜನರು ಈ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಇಂತಹ ಅಭಿಯಾನಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕು. ಇಂತಹ ಕಾರ್ಯಕ್ರಮದಿಂದ ಡಿಜಿಟಲ್ ಜಾಗೃತಿಯನ್ನು ಬೆಳೆಸಲು ಸಹಾಯಕವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲ್ಲೂಕು ಅಧ್ಯಕ್ಷ ಅಬ್ಯುಲೈಸ್ ನಾಯ್ಕ, ಡಾ. ವಾಸೀಮ್, ತನ್ವೀರ್, ಸಿರಾಜ್ ಪಾಷಾ, ನಯೀಮ್, ಇರ್ಫಾನ್, ಫಾರೂಖ್ ಅತ್ತರ್ ಇಂತಿಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2025 10 03 at 5.45.13 PM
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | 5 ಕೋಟಿ ವಿಮಾ ಹಣ ದೋಚಲು ಅಮಾಯಕನ ಕೊಲೆ; ಆರೋಪಿಗಳ ಬಂಧನ

ನಕಲಿ ದಾಖಲೆ ಸೃಷ್ಟಿಸಿ 5.25 ಕೋಟಿ ಅಪಘಾತ ವಿಮೆ ದೋಚಲು ಅಮಾಯಕನ...

ಶಿವಮೊಗ್ಗ | ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರ ದಂಪತಿ

ಶಿವಮೊಗ್ಗ, ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ...

ಶಿವಮೊಗ್ಗ | ಅಮ್ಜದ್ ಹತ್ಯೆ ಯತ್ನ, ಐವರು ಸೆರೆ : ಪೊಲೀಸ್ ವರಿಷ್ಟಧಿಕಾರಿ ಮಿಥುನ್ ಕುಮಾರ್ ಮಾಹಿತಿ

ಶಿವಮೊಗ್ಗ, ನಿನ್ನೆ ಸಂಜೆ ನಗರದಲ್ಲಿ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜಾದ್ ಸೇರಿದಂತೆ ಇಬ್ಬರ...

ಶಿವಮೊಗ್ಗ | ಶ್ರೀ ಮೈಲಾರೇಶ್ವರ ದಸರಾ ಹಾಗೂ ರಾಜಬೀದಿ ಉತ್ಸವ

ಶಿವಮೊಗ್ಗ ನಗರದ ಬಿ, ಹೆಚ್, ರಸ್ತೆಯಲ್ಲಿ ಇರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ...

Download Eedina App Android / iOS

X