ಶಿವಮೊಗ್ಗ | ಅ. 6ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ

Date:

Advertisements

ಶಿವಮೊಗ್ಗ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 20651 / 20652) ನಿಲುಗಡೆಗೆ ಸೌಲಭ್ಯ ಒದಗಿಸಲು ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ನಿಲುಗಡೆ ಸೌಲಭ್ಯವನ್ನು 2025ರ ಅಕ್ಟೋಬರ್ 6 ರಿಂದ 2026ರ ಜನವರಿ 5 ರವರೆಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೊಳಿಸಿ ರೈಲ್ವೆ ಇಲಾಖೆಯು ಆದೇಶ ನೀಡಿದೆ.

ಈ ಹಿಂದೆ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇರಲಿಲ್ಲ. ಇದರಿಂದಾಗಿ ಈ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಂದ ರೈಲು ನಿಲುಗಡೆಗಾಗಿ ಬಹುದಿನಗಳಿಂದ ಬಲವಾದ ಬೇಡಿಕೆ ಮತ್ತು ಒತ್ತಡವಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ, ಸಂಸದ ಬಿ.ವೈ. ರಾಘವೇಂದ್ರ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥುರ್ ಅವರನ್ನು ಭೇಟಿ ಮಾಡಿ ಈ ಕುರಿತು ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು.

Advertisements

ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ರೈಲನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಸದರು ಮನವಿ ಮಾಡಿಕೊಂಡಿದ್ದರು.

ಸಂಸದರ ನಿರಂತರ ಪ್ರಯತ್ನದ ಫಲವಾಗಿ ನೈರುತ್ಯ ರೈಲ್ವೆ ವಲಯದಿಂದ ಇದೀಗ ಅನುಮತಿ ದೊರೆತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರ ದಂಪತಿ

ಶಿವಮೊಗ್ಗ, ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ...

ಶಿವಮೊಗ್ಗ | ಅಮ್ಜದ್ ಹತ್ಯೆ ಯತ್ನ, ಐವರು ಸೆರೆ : ಪೊಲೀಸ್ ವರಿಷ್ಟಧಿಕಾರಿ ಮಿಥುನ್ ಕುಮಾರ್ ಮಾಹಿತಿ

ಶಿವಮೊಗ್ಗ, ನಿನ್ನೆ ಸಂಜೆ ನಗರದಲ್ಲಿ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜಾದ್ ಸೇರಿದಂತೆ ಇಬ್ಬರ...

ಶಿವಮೊಗ್ಗ | ಶ್ರೀ ಮೈಲಾರೇಶ್ವರ ದಸರಾ ಹಾಗೂ ರಾಜಬೀದಿ ಉತ್ಸವ

ಶಿವಮೊಗ್ಗ ನಗರದ ಬಿ, ಹೆಚ್, ರಸ್ತೆಯಲ್ಲಿ ಇರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ...

ವಾಲ್ಮೀಕಿ ಸಮುದಾಯದವರು ಒಟ್ಟಾಗಿ ಸೇರಿ ವಾಲ್ಮೀಕಿ ಜಯಂತಿ ಆಚರಿಸೋಣ

ಚಿಂತಾಮಣಿ : ಎಲ್ಲಾ ವಾಲ್ಮೀಕಿ ಸಮುದಾಯದವರು ರಾಜಕೀಯವನ್ನು ಮೆರೆತು ಒಟ್ಟುಗೂಡಿ ಎಲ್ಲರೂ...

Download Eedina App Android / iOS

X