ದಾವಣಗೆರೆ | ಮಹರ್ಷಿ ವಾಲ್ಮೀಕಿ ಜಯಂತೋತ್ಸವ: ಐತಿಹಾಸಿಕ ಬೈಕ್‌ ರ‍್ಯಾಲಿ 

Date:

Advertisements

ʼʼಜಿಲ್ಲಾ ವಾಲ್ಮೀಕಿ ಯುವ ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ  ಅಕ್ಟೋಬರ್ 7ರಂದು ದಾವಣಗೆರೆಯಲ್ಲಿ ನಡೆಯಲಿದ್ದು  ಇದರ ಪ್ರಯುಕ್ತ ಜನಜಾಗೃತಿಗಾಗಿ ಎಂಟನೇ ವರ್ಷದ ಐತಿಹಾಸಿಕ ಬೃಹತ್ ಬೈಕ್‌ ರ‍್ಯಾಲಿಯನ್ನು ಅ. 5ರ ಭಾನುವಾರ  ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆʼʼ ಎಂದು ದಾವಣಗೆರೆ ಜಿಲ್ಲಾ ವಾಲ್ಮೀಕಿ ಯುವ ಘಟಕದ  ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ʼʼಭಾನುವಾರ  ನಡೆಯಲಿರುವ ಬೈಕ್‌ ರ‍್ಯಾಲಿಯನ್ನು ರಾಜನಹಳ್ಳಿ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಗಳೂರು ಶಾಸಕರಾದ ದೇವೇಂದ್ರಪ್ಪ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರ. ಹೆಚ್ ಪಿ ರಾಜೇಶ್. ಜಿಲ್ಲಾ ಅಧ್ಯಕ್ಷ ಬಿ ವೀರಣ್ಣ ಹದಡಿ ಹಾಲಪ್ಪ ನಿಟ್ಟುವಳ್ಳಿ ಆರ್. ಎಸ್. ಶೇಖರಪ್ಪ ಸೇರಿದಂತೆ ಸಮಾಜದ ಅನೇಕ ಗಣ್ಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆʼʼ ಎಂದು ತಿಳಿಸಿದರು.

WhatsApp Image 2025 10 03 at 7.48.06 PM

ಜಿಲ್ಲಾಧ್ಯಕ್ಷ ತೋಟದ ಬಸವರಾಜ್ ಮಾತನಾಡಿ  ʼʼಬೈಕ್‌ ರ‍್ಯಾಲಿಯು ರಾಜವೀರ ಮದಕರಿನಾಯಕ ವೃತ್ತದಿಂದ ಹೊಂಡದ ವೃತ್ತ, ದುರ್ಗಾಂಬಿಕ ದೇವಿ ದೇವಸ್ಥಾನ. ಹಗೆದಿಬ್ಬ ಸರ್ಕಲ್. ಅರಳಿಮರ ವೃತ್ತ. ಬಂಬೂ ಬಜಾರ್. ಎಪಿಎಂಸಿ. ಪಿಬಿ ರಸ್ತೆ. ಅರುಣಾ ಟಾಕೀಸ್. ವಿನೋಬನಗರ ಎರಡನೇ ಕ್ರಾಸ್, ಚರ್ಚ್ ರಸ್ತೆ. ರಾಂ ಅಂಡ್ ಕೋ ಸರ್ಕಲ್. ಅಂಬೇಡ್ಕರ್ ಸರ್ಕಲ್. ಶಿವಪ್ಪಯ್ಯ ಸರ್ಕಲ್. ಕೆ.ಟಿ.ಜೆ ನಗರ. ಎಚ್ ಕೆ ಆರ್ ಸರ್ಕಲ್. ನಿಟ್ವುವಳ್ಳಿ ದುರ್ಗಾಂಬಿಕಾ ದೇವಿ ದೇವಸ್ಥಾನ. ಬಳಿ ಕೊನೆಗೊಳ್ಳಲಿದೆʼʼ ಎಂದು ತಿಳಿಸಿದರು.

Advertisements

ʼʼಬೃಹತ್  ಬೈಕ್‌ ರ‍್ಯಾಲಿಗೆ ಸಮಾಜದ ಎಲ್ಲಾ ಯುವಕರು, ಮುಖಂಡರು,  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಬೈಕ್ ರಾಲಿ ಮುಗಿದ ನಂತರ ಸಮಾಜದ ಯುವಕರಿಗೆ ಸಮಾಜದ ಸ್ಥಿತಿಗತಿ ಆಗು ಹೋಗುಗಳು ಮತ್ತು ಆರ್ಥಿಕ , ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಸಂಘಟನೆಯ ಹಿತದೃಷ್ಟಿಯಿಂದ  ಅವರನ್ನು ಜಾಗೃತಿ ಗೊಳಿಸಲಾಗುವುದು ಎಂದು ಆರ್.  ಲಕ್ಷ್ಮಣ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಿಗಮ ಮಂಡಳಿಗೆ ಪರಿಗಣಿಸದೇ ಅನ್ಯಾಯ: ಕಾಂಗ್ರೆಸ್ಸಿನ ಆರ್ ಕೆ ಸರ್ದಾರ್ ಬೆಂಬಲಿಗರ ಆಕ್ರೋಶ

ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಪಚ್ಚಿ, ಮಾಜಿ ಮಹಾಪೌರರಾದ ವಿನಾಯಕ ಪೈಲ್ವಾನ್, ಪ್ರವೀಣ್ ಹುಲುಮನಿ, ಪ್ರವೀಣ್ ಶಾಮನೂರು, ಜಗದೀಶ್ ಎನ್. ಎಚ್., ಹಾಲೇಶ್, ಪ್ರವೀಣ್ ದೇವರಮನಿ, ನಾಗೇಶ್ ಅವರಗೆರೆ, ಸುರೇಶ್, ಶಶಿ, ಸತೀಶ್, ಪರಶುರಾಮ್ ಪಣಿಯಾಪುರ, ಲಿಂಗರಾಜ್  ಸೇರಿದಂತೆ  ಮುಖಂಡರು ಉಪಸ್ಥಿತರಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು

ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಈವರೆಗೆ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ...

ಜನರಿಂದ ಪಡೆದ ಹೆಚ್ಚಿನ ಜಿಎಸ್ ಟಿಯನ್ನು ಕೇಂದ್ರ ಸರ್ಕಾರ ಮರಳಿ ನೀಡುವುದೇ: ಸಿಎಂ ಪ್ರಶ್ನೆ

ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ...

ಚಿತ್ರದುರ್ಗ | ನಿಗಮ ಮಂಡಳಿಗೆ ಪರಿಗಣಿಸದೇ ಅನ್ಯಾಯ: ಕಾಂಗ್ರೆಸ್ಸಿನ ಆರ್ ಕೆ ಸರ್ದಾರ್ ಬೆಂಬಲಿಗರ ಆಕ್ರೋಶ

ʼʼಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಹಾಗೂ ಚಿತ್ರದುರ್ಗದ ಹಿರಿಯ ಮುಖಂಡರು ಮುಸ್ಲಿಂ ನಾಯಕರಾದ...

ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?

ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ...

Download Eedina App Android / iOS

X