ಶಿವಮೊಗ್ಗ | ಮಗಳನ್ನು ಕೊಂದು, ಶವದ ಮೇಲೆ ನಿಂತು ನೇಣು ಬಿಗಿದುಕೊಂಡ ತಾಯಿ

Date:

Advertisements

ಶಿವಮೊಗ್ಗ, ನಗರದ ಮೆಗ್ಗಾನ್​ ಆಸ್ಪತ್ರೆಗೆ ಸೇರಿದ ಮೆಗ್ಗಾನ್​ ನರ್ಸಿಂಗ್​​ ಕ್ವಾಟ್ರಸ್​ನಲ್ಲಿ ಸ್ವಂತ ತಾಯಿಯೇ ತನ್ನ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆರನೇ ತರಗತಿ ಓದುತ್ತಿದ್ದ ಮಗಳ ತಲೆಗೆ ಮಚ್ಚಿನಿಂದ ಹೊಡೆದ ಸಾಯಿಸಿದ ತಾಯಿ ಬಳಿಕ ಆಕೆಯ ಮೇಲೆ ನಿಂತುಕೊಂಡ ಪ್ಯಾನ್​ಗೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಲೆಯಾದ ಬಾಲಕಿ ಪೂರ್ವಿಕಾ ಹಾಗೂ ಮೃತ ಮಹಿಳೆ 38 ವರ್ಷದ ಶೃತಿ. ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ನಿನ್ನೆ ರಾತ್ರಿ ತನ್ನ ಮಗಳನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾಳೆ.

ಬಳಿಕ ಮಗಳ ದೇಹವನ್ನು ಪ್ಯಾನಿನ ಕೆಳಗೆ ಎಳೆದು, ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾಗಿದ್ದಾಳೆ. ಇವರು ಮೆಗ್ಗಾನ್ನಲ್ಲಿ ಕೆಲಸ ಮಾಡುವ ರಾಮಣ್ಣ ಎನ್ನುವವರ ಪತ್ನಿಯಾಗಿದ್ದು,

ಘಟನೆ ಸಂದರ್ಭದಲ್ಲಿ ಪತಿಯು ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಬೆಳಗ್ಗೆ ಡ್ಯೂಟಿ ಮುಗಿಸಿ ಕ್ವಾಟ್ರಸ್​​ಗೆ ಬಂದಾಗ ವಿಷಯ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರ ರಾಜಕಾರಣದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಸ್ಥಾನ

ಹಾಸನ ಲೋಕಸಭಾ ಕ್ಷೇತ್ರದ ಯುವ ಸಂಸದ ಶ್ರೇಯಸ್ ಎಂ. ಪಟೇಲ್ ಅವರು...

ಬೀದರ್‌ | ಬಸವಾದಿ ಶರಣರ ತ್ಯಾಗ,ಬಲಿದಾನ ಮರೆಯದಿರಿ : ಬಸವಲಿಂಗ ಪಟ್ಟದ್ದೇವರು

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟಿದ್ದರು ಎಂದು...

ವಿಜಯನಗರ | 5 ಕೋಟಿ ವಿಮಾ ಹಣ ದೋಚಲು ಅಮಾಯಕನ ಕೊಲೆ; ಆರೋಪಿಗಳ ಬಂಧನ

ನಕಲಿ ದಾಖಲೆ ಸೃಷ್ಟಿಸಿ 5.25 ಕೋಟಿ ಅಪಘಾತ ವಿಮೆ ದೋಚಲು ಅಮಾಯಕನ...

Download Eedina App Android / iOS

X