ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಇಂದಿಗೆ ಶೇ. 63.03ರಷ್ಟು ಪ್ರಗತಿ ಸಾಧಿಸಿದೆ. ಜಾತಿಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಸುವ ಈ ಸಮೀಕ್ಷೆಯು ಆರಂಭದಲ್ಲಿ ತಾಂತ್ರಿಕ ದೋಷಗಳಿಂದ ನಿಧಾನಗತಿಯಲ್ಲಿ ನಡೆದರೂ ನಂತರದ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟುತ್ತಿದೆ.
03-10-2025ಕ್ಕೆ ಅನ್ವಯಿಸುವಂತೆ (GBA/BBMP ಹೊರತುಪಡಿಸಿ) ರಾಜ್ಯದ ಸಮೀಕ್ಷಾ ಪ್ರಗತಿಯನ್ನು ಆಯೋಗವು ಬಿಡುಗಡೆ ಮಾಡಿದ್ದು ಇಂದು (ಶುಕ್ರವಾರ) 9,35,044 (ಒಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತ ನಾಲ್ಕು) ಮನೆಗಳ ಸಮೀಕ್ಷೆಯಾಗಿದೆ.
ಒಟ್ಟು 1,43,77,978 (ಒಂದು ಕೋಟಿ ನಲವತ್ತಮೂರು ಲಕ್ಷದ ಎಪ್ಪತ್ತೇಳು ಸಾವಿರದ ಒಂಬೈನ್ನೂರ ಎಪ್ಪತ್ತೆಂಟು) ಮನೆಗಳ ಸಮೀಕ್ಷಾ ಗುರಿಹೊಂದಲಾಗಿದ್ದು, ಗುರುವಾರದವರೆಗೆ 81,27,206 (ಎಂಬತ್ತೊಂದು ಲಕ್ಷದ ಇಪ್ಪತ್ತೇಳು ಸಾವಿರದ ಇನ್ನೂರ ಆರು) ಮನೆಗಳ ಸಮೀಕ್ಷೆ ಮುಗಿಸಲಾಗಿತ್ತು.
ಇದನ್ನೂ ಓದಿರಿ: ಸಮೀಕ್ಷೆಯ ಸಮೀಕ್ಷೆ; ನಗರವಾಸಿಗಳ ಜಾತಿ ಮನಸ್ಥಿತಿ ಅನಾವರಣ
ಈವರೆಗೆ 90,61,880 (ತೊಂಬತ್ತು ಲಕ್ಷದ ಅರವತ್ತೊಂದು ಸಾವಿರದ ಎಂಟನೂರ ಎಂಬತ್ತು) ಮನೆಗಳ ಸಮೀಕ್ಷೆ ಪ್ರಗತಿ ಸಾಧಿಸಲಾಗಿದೆ. 3,42,31,444 (ಮೂರು ಕೋಟಿ ನಲವತ್ತೆರಡು ಲಕ್ಷದ ಮೂವತ್ತೊಂದು ಸಾವಿರದ ನಾಲ್ಕುನೂರ ನಲವತ್ತ ನಾಲ್ಕು) ಜನರು ಸಮೀಕ್ಷೆಗೆ ಒಳಪಟ್ಟಿದ್ದು, 63.03% ಪ್ರಗತಿ ಸಾಧಿಸಿದಂತಾಗಿದೆ.
