ತುಮಕೂರು ಸಮೀಪದ ಭೀಮಸಂದ್ರದಲ್ಲಿ ಸಮೀಕ್ಷೆಗೆ ಹೋಗಿದ್ದ ಮುಸ್ಲಿಂ ಸಮುದಾಯದ ಶಿಕ್ಷಕಿಯೊಬ್ಬರ ಮೇಲೆ ಕೆಲವರು ಗಲಾಟೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಮೀಕ್ಷೆ ಮಾಡಲು ನೀನು ಯಾರು?, ಮುಸ್ಲಿಂ ಆಗಿ ಸಮೀಕ್ಷೆಗೆ ಹೇಗೆ ಮನೆ ಬಳಿ ಬಂದಿದ್ದೀಯಾ? ಮುಸ್ಲಿಮರನ್ನು ಮನೆ ಹತ್ತಿರ ಬಿಟ್ಟುಕೊಳ್ಳಬಾರದು. ಮನೆ ಬಳಿಗೆ ಏಕೆ ಬರುತ್ತೀರಾ? ಸಮೀಕ್ಷೆಗೆ ಬರುವಾಗ ಗುರುತಿನ ಕಾರ್ಡ್ ಏಕೆ ತಂದಿಲ್ಲ?’ ಎಂದೆಲ್ಲ ಪ್ರಶ್ನಿಸಲಾಗಿದೆ. ಮುಸ್ಲಿಂ ಸಮುದಾಯದ ಶಿಕ್ಷಕಿ ಎಂಬ ಕಾರಣಕ್ಕೆ ಸಮೀಕ್ಷೆಗೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿ ದೂರು ನೀಡಿದ್ದಾರೆ.
ನಮ್ಮ ಮನೆ ಸಮೀಪದಲ್ಲೇ ಇದ್ದು, ಐ.ಡಿ ಕಾರ್ಡ್ ತರುತ್ತೇನೆ. ಸಮೀಕ್ಷೆಗೆ ಅವಕಾಶ ಮಾಡಿಕೊಡಿ’ ಎಂದು ಶಿಕ್ಷಕಿ ಮನವಿ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.