ಶಿರೋಡಾ ಕಡಲತೀರದಲ್ಲಿ ಭೀಕರ ದುರಂತ; ಏಳು ಮಂದಿ ನೀರುಪಾಲು, ಓರ್ವನ ಸ್ಥಿತಿ ಗಂಭೀರ

Date:

Advertisements

ಪಕ್ಕದ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಶಿರೋಡಾ ಸಮುದ್ರ ತೀರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲೋಂಡಾ ಗ್ರಾಮದ ಒಂದೇ ಕುಟುಂಬದ ಎಂಟು ಮಂದಿ ಸಮುದ್ರದಲ್ಲಿ ಈಜಲು ಇಳಿದಾಗ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

ದಸರಾ ರಜೆಯ ಪ್ರಯುಕ್ತ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿ ಎಂಟು ಮಂದಿ ಕಾಣೆಯಾಗಿದ್ದು, ಇದರಲ್ಲಿ ಮೂವರ ಶವ ಪತ್ತೆಯಾಗಿವೆ. ಫರಿನ್ ಇರ್ಫಾನ್ ಕಿತ್ತೂರ (34), ಇಬಾದ್ ಕಿತ್ತೂರ (13), ಅಳ್ನಾವರ ಮೂಲದ ನಮೀರಾ ಅಕ್ತರ್ (16) ಮೃತರು.

ಇದನ್ನೂ ಓದಿ: ಬೆಳಗಾವಿ | ಗುಂಡುರಾವ ಕರಿಗಾರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ

Advertisements

ಲೋಂಡಾದ ಪ್ರಹಾನಾ ಕಿತ್ತೂರ (34) ಅವರನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರಸ್ತುತ ಅವರು ಗಂಭೀರ ಸ್ಥಿತಿಯಲ್ಲಿ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಐವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಧರಣಿ ಕುಳಿತವರು ಯಾರೂ ಅಜ್ಞಾನಿಗಳಲ್ಲ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರವಿಂದ ಕುಲಕರ್ಣಿ ತಿರುಗೇಟು

ಧರಣಿ ಕುಳಿತವರು ಯಾರೂ ಅಜ್ಞಾನಿಗಳಲ್ಲ, ಎಲ್ಲರೂ ಉನ್ನತ ಶಿಕ್ಷಣ ಅಧ್ಯಯನ ಮಾಡಿದಂಥವರು....

ಯಾದಗಿರಿ: ಲಂಚಕ್ಕೆ ಬೇಡಿಕೆ; ಲೋಕಾ ಬಲೆಗೆ ಬಿದ್ದ ಬಿಲ್‌ ಕಲೆಕ್ಟರ್

ನಗರಸಭೆಯಲ್ಲಿ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು ಲಂಚ ಬೇಡಿಕೆ ಇಟ್ಟಿದ್ದ...

ಕಲಬುರಗಿ | ಕಾರಾಗೃಹದಲ್ಲಿ ಕೈದಿಗಳ ಗಲಾಟೆ; ಒಬ್ಬನಿಗೆ ಗಂಭೀರ ಗಾಯ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಗಲಾಟೆ ನಡೆದು, ಒಬ್ಬ ಕೈದಿ...

ಬೀದರ್‌ | ಸಾಲಬಾಧೆ : ಮನೆಯಲ್ಲಿ ನೇಣಿಗೆ ಶರಣಾದ ರೈತ

ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಟಗುಪ್ಪಾ...

Download Eedina App Android / iOS

X