ಖ್ಯಾತ ಪತ್ರಕರ್ತ ಟಿಜೆಎಸ್ ಜಾರ್ಜ್‌ ನಿಧನಕ್ಕೆ ಸರ್ಕಾರ ಸಂತಾಪ, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಆದೇಶ

Date:

Advertisements

ಶುಕ್ರವಾರ (ಅ.3) ಬೆಂಗಳೂರಿನಲ್ಲಿ ನಿಧನರಾದ ನಾಡಿನ ಧೀಮಂತ ಪತ್ರಕರ್ತ, ದೇಶ ವಿದೇಶಗಳ ಹಲವಾರು ಇಂಗ್ಲಿಷ್‌ ಪತ್ರಿಕೆಗಳಿಗೆ ಸಂಪಾದಕರಾಗಿದ್ದ ಟಿಜೆಎಸ್ ಜಾರ್ಜ್‌ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ಆದೇಶಿಸಿದೆ.

ಹಿರಿಯ ಪತ್ರಕರ್ತರು ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಟಿ.ಜೆ.ಎಸ್ ಜಾರ್ಜ್ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್‌ ಆರ್‌ ಆದೇಶ ಹೊರಡಿಸಿದ್ದಾರೆ.

ಭಾನುವಾರ ಹೆಬ್ಬಾಳದಲ್ಲಿ ಅಂತ್ಯ ಸಂಸ್ಕಾರ ನಡೆಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.

ಥಾಯಿಲ್‌ ಜೇಕಬ್ ಸೋನಿ ಜಾರ್ಜ್‌ ಅವರ ಪೂರ್ಣ ಹೆಸರು. ಜಾರ್ಜ್‌ ಅವರಿಗೆ 97 ವಯಸ್ಸಾಗಿತ್ತು. ಭಾರತೀಯ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ ಆಗಿದ್ದರು. ಏಷ್ಯಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಜರ್ನಲಿಸಮ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೇರಳದಲ್ಲಿ ಜನಿಸಿದ ಜಾರ್ಜ್‌ ಅವರು ತಮ್ಮ ಜೀವಿತಾವಧಿಯ ಜೀವನವನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಕಳೆದರು. ಅವರಿಗೆ ಶಿಭಾ ಥಾಯಿಲ್ ಮತ್ತು ಜೀತ್‌ ಥಾಯಿಲ್‌ ಇಬ್ಬರು ಮಕ್ಕಳಿದ್ದಾರೆ.

ಫ್ರೀ ಪ್ರೆಸ್ ಜರ್ನಲ್, ಇಂಟರ್‌ನ್ಯಾಷನಲ್‌ ಪ್ರೆಸ್‌ ಇನ್ಸ್ಟಿಟ್ಯೂಟ್‌, ದಿ ಸರ್ಚ್‌ ಲೈಟ್‌, ಹಾಂಕಾಂಗ್‌ ಏಷ್ಯಾ ವೀಕ್‌ ಪತ್ರಿಕೆಗಳನ್ನು ಮುನ್ನಡೆಸಿದ್ದಾರೆ. ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಸಂಪಾದಕೀಯ ಸಲಹೆಗಾರರಾಗಿದ್ದರು. ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಧಾರ್ಮಿಕ ಅಸಹಿಷ್ಣುತೆ ಹಾಗೂ ಜನತಾಂತ್ರಿಕ ಮೌಲ್ಯಗಳ ಪತನದ ವಿರುದ್ಧ ಜಾರ್ಜ್‌ ಬಹುದೊಡ್ಡ ಧ್ವನಿಯಾಗಿದ್ದವರು.

‘ಫಾಯಿಂಟ್‌ ಆಫ್‌ ವ್ಯೂವ್’ ಅವರ ದೀರ್ಘ ಕಾಲ ಪ್ರಕಟವಾದ ಅವರ ಅಂಕಣ. ಇದು 25 ವರ್ಷಗಳ ಕಾಲ ಪ್ರಕಟವಾಗಿದ್ದು, 2022ರಲ್ಲಿ ಕೊನೆಯಾಯಿತು. ಈ ಅಂಕಣ ಕನ್ನಡಪ್ರಭದಲ್ಲಿ ʼನೇರಮಾತುʼ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.

ನಿರ್ಭೀತ ಪತ್ರಿಕೋದ್ಯಮಕ್ಕೆ ಜೀವನವಿಡಿ ಬದ್ಧರಾಗಿದ್ದರು ಜಾರ್ಜ್.‌ 1965 ರಲ್ಲಿ ಬಿಹಾರ ಸರ್ಕಾರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಹೀಗಾಗಿ ಸ್ವತಂತ್ರ ಭಾರತದಲ್ಲಿ ಬಂಧನಕ್ಕೊಳಗಾದ ಪತ್ರಿಕಾ ಸಂಪಾದಕರು ಜಾರ್ಜ್‌ ಆಗಿದ್ದಾರೆ. ಅಂದಿನ ಕೇಂದ್ರ ಸರ್ಕಾರದ ರಕ್ಷಣಾ ಸಚಿವ ವಿ ಕೆ ಕೃಷ್ಣ ಮೆನನ್‌ ಅವರು ಜಾರ್ಜ್‌ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷಿ ನುಡಿದಿದ್ದರು.

ವಿ ಕೆ ಕೃಷ್ಣ ಮೆನನ್, ಚರಿತ್ರಾರ್ಹ ಚಿತ್ರನಟಿ ನರ್ಗಿಸ್‌, ಮಹಾನ್ ಶಾಸ್ತ್ರೀಯ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ರಚಿಸಿದ್ದಾರೆ. ಪತ್ರಿಕೋದ್ಯಮಿಯಾಗಿ ಅವರ ಅನುಭವಗಳನ್ನು ದಾಖಲಿಸಿದ ಪುಸ್ತಕ ‘ಘೋಷಯಾತ್ರಾ’.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ; ಇಂದಿಗೆ ಗುರಿ ಮುಟ್ಟಿದ್ದೆಷ್ಟು?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮಗ್ರ ಸಾಮಾಜಿಕ, ಆರ್ಥಿಕ...

ಸಿನಿಮಾ ಟಿಕೆಟ್‍ ದರ ಮಿತಿ | ತಡೆಯಾಜ್ಞೆ ಮುಂದುವರಿಕೆ, ಮೇಲ್ಮನವಿ ಅರ್ಜಿ ಅಂತಿಮ ತೀರ್ಪಿನಲ್ಲಿ ಸಿಲುಕಿದರೆ ಹಣ ವಾಪಸ್!

ರಾಜ್ಯದ ಎಲ್ಲ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ.ಗಳ...

ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ಸ್ಥಿತಿಯಲ್ಲಿ RSS; ದೇವನೂರರ ಮನೋಜ್ಞ ವಿಶ್ಲೇಷಣೆ

“ನೂರು ವರ್ಷಗಳಾದರೂ ಆರ್‌ಎಸ್‌ಎಸ್ ಸಂಘಟನೆಯನ್ನು ರಿಜಿಸ್ಟ್ರೆಷನ್ ಮಾಡಿಸದೇ ಇರುವುದು ಹಾಗೂ ಸಾರ್ವಜನಿಕರಿಂದ...

ಕೊಪ್ಪಳ | ದಶಕದ ಹಿಂದಿನ ಯಲ್ಲಾಲಿಂಗನ ಕೊಲೆ ಪ್ರಕರಣ: 9 ಆರೋಪಿಗಳ ಖುಲಾಸೆ

ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ತೀರ್ಪು...

Download Eedina App Android / iOS

X