ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಳಿಸಿದ ಶಿಕ್ಷಕ ಪಿ.ಎಫ್. ಗುಡೇನಕಟ್ಟಿ ಇವರಿಗೆ ನೀಡಲಾಗಿದ್ದ ಮಹಾವೀರ ನಗರ, ರಾಮರಹೀಮ್ ಕಾಲನಿ, ಕರವೀರ ಕಾಲನಿ, ಆಜಾದ ಕಾಲನಿ, ಸಾಯಿ ಲೇಔಟ್, ಚರಂತಿಮಠ ಗಾರ್ಡನ್ ಹತ್ತಿರದ ಬ್ಲಾಕ್‍ನಲ್ಲಿ ಒಟ್ಟು 134 ಮನೆಗಳ ಗಣತಿಯನ್ನು ಪೂರ್ಣಗೊಳಿಸಿ, ಶೇ.100 ರಷ್ಟು ಸಾಧನೆ ಮಾಡಿದ್ದಾರೆ ಎಂದು ಸನ್ಮಾನಿಸಿದ್ದಾರೆ.
ಇವರನ್ನು ಅ.3ರ ಮಧ್ಯಾಹ್ನ ಧಾರವಾಡದ ಮಹಾನಗರ ಪಾಲಿಕೆಯ ಅಮೃತಮಹೋತ್ಸವ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಿದ್ದು, ನಿಗದಿತ ಅವಧಿ ಮೊದಲೇ ಸಮೀಕ್ಷೆ ಪೂರ್ಣಗೊಳಿಸಿರುವುದಕ್ಕೆ ಅಧಿಕಾರಿಗಳು ಸಂತೋಷ ಪಟ್ಟರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಗಾಂಧಿ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಿರಿ: ಇಸ್ಮಾಯಿಲ್ ತಮಟಗಾರ್
ಈ ವೇಳೆ ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ ಹಾಗೂ ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತ ಶಂಕರ ಪಾಟೀಲ, ಬಿಇಓ ಅಶೋಕ ಸಿಂದಗಿ, ಸಮನ್ವಯಾಧಿಕಾರಿ ಮಂಜು ಅಡವೇರ್ ಹಾಗೂ ಮೇಲ್ವಿಚಾರಕ ಜಿ.ಬಿ. ಶೆಟ್ಟರ್, ಸುಮಿತಾ ಹಿರೇಮಠ, ಎಸ್.ಬಿ.ಅರಮನಿ, ಎಂ.ಆರ್. ಕಬ್ಬೇರ, ಮಹೇಶ ಬಾಳಗಿ, ಆಸಿಫ್ ಸವಣೂರ, ವಿ.ಎಂ. ಪಾಟೀಲ, ಇರ್ಫಾನ್ ಕವಲಗೇರಿ ಉಪಸ್ಥಿತರಿದ್ದರು.