ಬಾಗೇಪಲ್ಲಿ : ಜಿ.ವಿ ಶ್ರೀ ರಾಮರೆಡ್ಡಿ ಬಡಾವಣೆಗೆ ತಾಲೂಕು ದಂಡಾಧಿಕಾರಿ ಮನೀಷಾ ಎಸ್ ಪತ್ರಿರವರು ಭೇಟಿ ನೀಡಿ ಮೂಲಭೂತ ಸೌಕರ್ಯ ಸಮಸ್ಯೆಗಳ ಪರಿಶೀಲನೆ.
ಬಾಗೇಪಲ್ಲಿ ತಾಲೂಕಿನ ತಿಮಾಕಲಪಲ್ಲಿ ಕ್ರಾಸ್ ಬಲಿ ಇರುವ ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಗೆ ನಿವಾಸಿಗಳು ಹಾಗೂ ಸಿ ಪಿ ಐ ಎಂ ಮುಖಂಡರು ಸೇರಿ 20 ದಿನಗಳ ಹಿಂದೆ ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಇಲ್ಲದೆ ಕಾರಣ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಆದರಿಂದ ಇಂದು ತಾಲೂಕು ದಂಡಾಧಿಕಾರಿ ಮನಿಷಾ ಎಸ್ ಪತ್ರಿ, ಇ ಓ ರಮೇಶ್, ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್, ರವರು ಈ ಬಡಾವಣೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ,ವಿದ್ಯುತ್,ಕುಡಿಯುವ ನೀರಿನ, ಈ ಎಲ್ಲಾ ಸೌಲಭ್ಯಗಳು ಹಾಗೂ ಸಮಸ್ಯೆಗಳು ಪರಿಶೀಲಿಸಿದರು.
ಈ ವೇಳೆ ತಾಲೂಕು ದಂಡಾಧಿಕಾರಿ ಮನಿಷಾ ಎಸ್ ಪತ್ರಿರವರು ಮಾತನಾಡಿ ಮೂಲಭೂತ ಸೌಕರ್ಯಗಳು ಏನು ಇಲ್ಲ ಹಾಗೂ ಏನು ಸಮಸ್ಯೆ ಆಗಿದೆ ಕುಲಂಕುಶವಾಗಿ ಪರಿಶೀಲನೆ ಮಾಡಿ ನೋಡಿದ್ದೇವೆ. ಈ ಬಡಾವಣೆಯಲ್ಲಿ ಸುಮಾರು ದಿನಗಳಿಂದ ಕೆಲವೊಂದು ಸಮಸ್ಯೆಗಳು ಇವೆ ಇಲ್ಲಿರುವ ರಾಜಕಾಲುವೆ ಅಲ್ಪಸ್ವಲ್ಪವಾಗಿದೆ ಇನ್ನು ಪೂರ್ಣ ಆಗಬೇಕಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆಗಳು ಇಲ್ಲ ಇವೆಲ್ಲ ಸಮಸ್ಯೆಗಳಿವೆ ಹಾಗೂ ಪುರಸಭೆ ಹಾಗೂ ಪಂಚಾಯಿತಿ ಯಾರದು ಜವಾಬ್ದಾರಿ ಎಂದು ಸ್ವಲ್ಪ ತೊಂದರೆಯಾಗಿತ್ತು ಸುಮಾರು ವರ್ಷಗಳಿಂದ ಹೀಗೆ ಉಳಿದಿದೆ ಇದರ ಸಲಹೆಗಳನ್ನು ಶಾಸಕರು ಹಾಗೂ ಮೇಲಾಧಿಕಾರಿಗಳ ಜೊತೆ ಮಾತನಾಡಿದಾಗ ಸಮಸ್ಯೆ ಏನು ಅಂತ ಗೊತ್ತಾಯ್ತು. ಇದಕ್ಕೂ ಪರಿಹಾರವೂ ಸಹ ಸಿಕ್ಕಿದೆ.ಇನ್ನೂ ಪಂಚಾಯಿತಿಯಿಂದ ರೆಸೋಲ್ಯೂಷನ್ ಪಾಸ್ ಮಾಡಿ ಪುರಸಭೆಗೆ ಕೊಟ್ಟಿದ್ದಾರೆ ಪುರಸಭೆಯವರು ರೆಸೋಲ್ಯೂಷನ್ ಪಾಸ್ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಸುಮಾರು ದಿನಗಳಿಂದ ಆಗದೆ. ಈ ಕೆಲಸ ಪಂಚಾಯಿತಿ,ಪುರಸಭೆ ವತಿಯಿಂದ ಈಗಾಗಲೇ ಸರ್ಕಾರಕ್ಕೆ ಕಳುಹಿಸಿದ್ದಾರೆ. ಈಗ ಸರ್ಕಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಈ ಬಡಾವಣೆ ಪುರಸಭೆಗೆ ಹಸ್ತಾಂತರವಾದರೆ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ, ನೀರಿನ ಸೌಲಭ್ಯಗಳನ್ನು ಹಂತ ಹಂತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಜೆಡಿಯು ಪಕ್ಷದಿಂದ ಚಾಲನೆ
ಇನ್ನು ಈ ಸಂದರ್ಭದಲ್ಲಿ ಇಓ ರಮೇಶ್, ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್, ಜಿವಿಎಸ್ ಬಡಾವಣೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಯಪ್ಪ ಕೆ, ಸಿಪಿಐಎಂ ಪಕ್ಷದ ಮುಖಂಡರಾದ ಮುನಿಸ್ವಾಮಿ, ಅಶ್ವಥ್ ನಾರಾಯಣ, ಜಿ ಕೃಷ್ಣಪ್ಪ,ಇತರೆ ಅಧಿಕಾರಿಗಳು ಹಾಗೂ ಬಡಾವಣೆ ನಿವಾಸಿಗಳು ಇದ್ದರು.