ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಉಪಗುತ್ತಿಗೆ ಕೆಲಸ ಪೂರ್ಣಗೊಂಡಿರುವುದರ ನಡುವೆಯೂ ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 15 ರಂದು ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ದೇವದುರ್ಗ ತಾಲೂಕು ಸಣ್ಣ ಸಿವಿಲ್ ಗುತ್ತೇದಾರರ ಸಂಘದ ಅಧ್ಯಕ್ಷ ಶರಣೇಗೌಡ ಸುಂಕೇಶ್ವರಹಾಳ ಅವರು ಹೇಳಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಎರಡು ಪ್ಯಾಕೇಜುಗಳ ಒಟ್ಟು 1466 ಕೋಟಿ ಮೊತ್ತದ ಗುತ್ತಿಗೆ ಎನ್.ಡಿ.ವಡ್ಡರ್ ಕಂಪನಿಗೆ ಆಗಿದ್ದು, ಅದರಲ್ಲಿ ದೇವದುರ್ಗ ತಾಲ್ಲೂಕಿನ 17 ಡಿ ಡಿಸ್ಟ್ರಿಬ್ಯೂಟರ್ ಕಾಲುವೆ ಒಟ್ಟು 13.5 ಕಿ.ಮೀ ಆಧುನೀಕರಣ ಕಾಮಗಾರಿಯನ್ನು ತುಕಾರಾಮ್ ರಾಮಣ್ಣ ಜಿನ್ನಾಪುರ ಅವರಿಗೆ ಎನ್. ಡಿ.ವಡ್ಡರ್ ಕಂಪನಿ ಉಪಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಳ್ಳಲಾಗಿದೆ. 2024 ಏ.24 ರಂದು 4.87 ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಕಾಮಗಾರಿಗೆ ಒಪ್ಪಂದಕ್ಕೆ ಸಹಿ ಹಾಕಿ ಕಾಮಗಾರಿ ಪೂರ್ಣಗೊಳಿಸಿದರು ಪಾವತಿ ಮಾಡಲು ಸುಮಾರು ಏಳು ತಿಂಗಳಿಂದ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣಾ ಭಾಗ್ಯ ಜಲನಿಗಮದ ಅಂದಾಜು ವೆಚ್ಚ ಹಾಗೂ ಎನ್.ಡಿ.ವಡ್ಡರ್ ಕಂಪನಿಯ ಸಮೇತ ಶರಣೇಗೌಡ ಸುಂಕೇಶ್ವರಹಾಳ, ಪರಮಾನಂದ ಸುಂಕೇಶ್ವರಹಾಳ, ಶಿವು ಸಾಹುಕಾರ, ಅಂಜನೇಯ ಬಡಿಗೇರ್, ವೀರೇಶ ಹೂವಿನಬಾಡು, ಅಮರೇಶ ಕೂಡಿಕೊಂಡು ಉಪಗುತ್ತಿಗೆ ಈಗಾಗಲೇ ಸರ್ಕಾರದಿಂದ ಎನ್.ಡಿ. ಕೆಲಸ ಪೂರ್ಣಗೊಳಿಸಿ ವಡ್ಡರ್ ಕಂಪನಿಗೆ ಬಿಲ್ ಪಾವತಿಸಲಾಗಿದೆ ಎಂದರು.
ಉಪಗುತ್ತಿಗೆದಾರರಿಗೆ ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಬಿಲ್ ನೀಡಿಲ್ಲ. ಕಳೆದ ವರ್ಷಗಳಿಂದ ಕಂಪನಿಯ ಮಾಲೀಕರಾದ ಕರಿಯಪ್ಪ ವಜ್ಜಲ್ ಹಾಗೂ ಶಾಸಕ ಮಾನಪ್ಪ ವಜ್ಜಲ್ ಅವರನ್ನು ಹತ್ತಾರು ಬಾರಿ ಭೇಟಿ ನೀಡಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ. ನಮ್ಮ ಕ್ಷೇತ್ರದ ದೇವದುರ್ಗ ಶಾಸಕಿ ಕರಿಯಮ್ಮ ಅವರಿಂದ ನಾಲೈದು ಭಾರಿ ಶಾಸಕ ವಜ್ಜಲ್ ರಿಗೆ ಹೇಳಿಸಿದರೂ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡದೇ ಸುಳ್ಳು ಹೇಳುತಾ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಬಿಲ್ ಪಾವತಿಯಾಗದಿದ್ದರೆ ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಧರಣಿ ನಡೆಯಲಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಈ ವೇಳೆ ಸಣ್ಣಸಿವಿಲ್ ಗುತ್ತಿಗೆದಾರರ ಪದಾಧಿಕಾರಿಗಳಾದ ಸಂಘದ ತುಕಾರಾಮ ಜಿನ್ನಾಪುರ, ಅಂಜಿನೇಯ ಬಡಿಗೇರ, ವಿರೇಶ, ಪರಮಾನಂದ ಇನ್ನಿತರರು ಇದ್ದರು.
