ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತಗಳು ಸಂಭವಿಸಿವೆ. ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಭೂಕುಸಿತದಲ್ಲಿ 18 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಎರಡೂ ಜಿಲ್ಲೆಗಳ ಸರ್ಸಾಲಿ, ಜಸ್ಬಿರ್ಗಾಂವ್, ಮಿರಿಕ್ ಬಸ್ತಿ, ಧಾರ್ ಗಾಂವ್ (ಮೆಚಿ), ನಾಗರಕಟ ಮತ್ತು ಮಿರಿಕ್ ಪ್ರದೇಶದಲ್ಲಿ ಭಾರೀ ಮಳೆ – ಭೂಕುಸಿತ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ಮತ್ತು ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
ಮಿರಿಕ್ ಜಿಲ್ಲೆಯಲ್ಲಿ 11 ಮಂದಿ, ಡಾರ್ಜಿಲಿಂಗ್ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದಾರೆ. ಅಕ್ಟೋಬರ್ 6 ರಂದು ಉತ್ತರ ಬಂಗಾಳಕ್ಕೆ ಭೇಟಿ ನೀಡಿ, ಪ್ರದೇಶಗಳ ಪರಿಸ್ಥಿತಿಯನ್ನು ನಿರ್ಣಯಿಸುವುದಾಗಿ ಹೇಳಿದ್ದಾರೆ.