ಯಲ್ಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾದ 14 ವಾಹನಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ 13 ರಂದು ಹಮ್ಮಿಕೊಳ್ಳಲಾಗಿದೆ.
ಈ ಹರಾಜಿನಲ್ಲಿ ಒಟ್ಟು 14 ವಾಹನಗಳಿದ್ದು, ಅವುಗಳಲ್ಲಿ ಒಂದು ನಾಲ್ಕು ಚಕ್ರದ ವಾಹನ ಹಾಗೂ 13 ದ್ವಿಚಕ್ರ ವಾಹನಗಳು ಸೇರಿವೆ.
ಅಕ್ಟೋಬರ್ 13, ಬುಧವಾರದಂದು ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಯಲ್ಲಾಪುರದಲ್ಲಿರುವ ಪೊಲೀಸ್ ವಸತಿಗೃಹದ ಹತ್ತಿರ ಈ ಸಾರ್ವಜನಿಕ ಬಹಿರಂಗ ಹರಾಜು ಜರುಗಲಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ| ಅರಣ್ಯವಾಸಿಗಳ ಮೇಲ್ಮನವಿ ಅಭಿಯಾನ; 20 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಸಾರ್ವಜನಿಕರು ನಿಗದಿತ ಸಮಯಕ್ಕೆ ಯಲ್ಲಾಪುರ ಪೊಲೀಸ್ ವಸತಿಗೃಹದ ಬಳಿ ಹಾಜರಿರಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.