ಬಾಗೇಪಲ್ಲಿ:ಸಾಮಾಜಕ್ಕೆ ಸ್ಮರಣೀಯವಾದ ಸೇವೆಯನ್ನು ಸಲ್ಲಿಸುವವರು, ಒಳ್ಳೆಯವರು ಹೆಚ್ಚು ಕಾಲ ಬದುಕಬೇಕು, ಆದರೆ ಒಳ್ಳೆಯವರೇ ಕಡಿಮೆ ಕಾಲ ಬದುಕುತ್ತಾರೆ, ಬೇಡವಾದವರು ಹೆಚ್ಚು ಕಾಲ ಬದುಕುವ ಪರಿಸ್ಥಿತಿ ಇದೆ. ಪತ್ರಕರ್ತರಾಗಿ,ಸಾಮಾಜಿಕ ಕಾರ್ಯಕರ್ತರಾಗಿ ಉದಯೋನ್ಮುಖ ಸಾಹಿತಿಯಾಗಿ, ಶಿಕ್ಷಕರಾಗಿ, ಕಲಾವಿದರಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದ್ದ ಪತ್ರಕರ್ತ ಮಾಡಪ್ಪಲ್ಲಿ ನರಸಿಂಹಮೂರ್ತಿ ಅಗಲಿಕೆ ಸಮಾಜಕ್ಕೆ ಬಹುದೊಡ್ಡ ನಷ್ಠ ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶಿಕ್ಷಕರು, ಪ್ರಗತಿಪರ ಚಿಂತಕರು, ಹಾಗೂ ವರದಿಗಾರರು ಆದ ಮಾಡಪಲ್ಲಿ ನರಸಿಂಹಮೂರ್ತಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ಪತ್ರಕರ್ತನಾಗಿ, ಶಿಕ್ಷಕನಾಗಿ, ಕಲಾವಿದನಾಗಿ ದಿ.ನರಸಿಂಹಮೂರ್ತಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಒಳ್ಳೆಯವರು ಬಹುಬೇಗ ಅಗಲುತ್ತಾರೆ. ಈ ಪಟ್ಟಿಯಲ್ಲಿ ನರಸಿಂಹಮೂರ್ತಿಯವರೂ ಇದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ನರಸಿಂಹಮೂರ್ತಿಯವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಶ್ರೀ ಮಠದ ಶಿಕ್ಷಣ ಸಂಸ್ಥೆಗಳಲ್ಲಿಯೇ ಉಚಿತವಾಗಿ ನೀಡುವುದರ ಮೂಲಕ ತೆಗೆದುಕೊಳ್ಳಲಾಗುತ್ತದೆ ಎಂದರು. ಗೂಳೂರು ನಿಡುಮಾಮಿಡಿ ಮಹಾ ಸಂಸ್ಥಾನವನ್ನು ಆಂದ್ರ ಪ್ರದೇಶದ ಪುಟಪರ್ತಿಯನ್ನಾಗಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೆ ಆದರೆ ಅದು ನೆರವೇರಲಿಲ್ಲ ಎಂದು ಪೀಠದ ಧರ್ಮಗುರುಗಳಾದ ಶ್ರೀ ಚೆನ್ನಮಲ್ಲ ವೀರಭದ್ರ ದೇಶಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ನಾನು ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡಾಗ ನಾನು ನನ್ನ ನಿಡುಮಾಮಿಡಿ ಮಠವನ್ನು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯಬೇಕು ಪಕ್ಕದ ಆಂದ್ರ ಪ್ರದೇಶದ ಪುಟಪರ್ತಿಯ ರೀತಿಯಲ್ಲಿ ಬದಲಾವಣೆ ತರಬೇಕು ಎಂದು ಸಂಕಲ್ಪ ಮಾಡಿದ್ದೆ ಆದರೆ ಹಣದ ಅಭಾವ, ನೀರಿನ ಸೌಕರ್ಯ ಕೊರತೆ, ಬದಲಾದ ಸನ್ನಿವೇಶ, ವ್ಯವಸ್ಥೆಯ ಮನಸ್ಥಿತಿ ಇವೆಲ್ಲ ಕಾರಣಗಳಿಂದ ನಿರ್ಮಾಣ ಮಾಡಿದ್ದ ಶಿಕ್ಷಣ ಸಂಸ್ಥೆಗಳನ್ನು ಬೇರೆ ನಗರಗಳಿಗೆ ಬದಲಾವಣೆ ಮಾಡಬೇಕಾಯಿತು ಆದರೆ ಇಂದು ಹಲವು ವರ್ಷಗಳಿಂದ ಪ್ರಾಥಮಿಕ ಶಾಲೆಯನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದ ಸ್ವಾಮೀಜಿಯವರು ನರಸಿಂಹಮೂರ್ತಿ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ನೆರವನ್ನು ನೀಡಿದರು.
ಪ್ರತಿಪರ ಚಿಂತಕ ಡಾ.ಅನಿಲ್‌ಕುಮಾರ್ ಅವರು ಮಾತನಾಡಿ ಮಾಡಪಲ್ಲಿ ನರಸಿಂಹಮೂರ್ತಿ ಅಂತಹ ಪ್ರಗತಿಪರರನ್ನು ನಾವು ಕಳೆದುಕೊಂಡಿರುವುದು ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಅವರ ಒಂದು ಮರಣಕ್ಕೆ ನಮ್ಮ ಸಮಾಜವೇ ಕಾರಣ ರಸ್ತೆ ಅಗಲೀಕರಣ ಆಗದೆ ಇರುವುದು ಗಣಿಗಾರಿಕೆಗೆ ಮಿತಿ ಇಲ್ಲದೆ ಇರುವುದು ಸೇರಿದಂತೆ ಇನ್ನೂ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸದಾ ಮುನ್ನುಗ್ಗುತ್ತಿದ್ದರು ಅತ್ಯಂತ ತಳ ಸಮುದಾಯದಲ್ಲಿ ಹುಟ್ಟಿದ ನರಸಿಂಹಮೂರ್ತಿ ಅವರ ಕುಟುಂಬದ ಜೊತೆ ನಾವಿದ್ದೇವೆ ಅವರ ಮಕ್ಕಳ ಶೈಕ್ಷಣಿಕ ಸಂಪೂರ್ಣ ವೆಚ್ಚವನ್ನು ನಮ್ಮ ಕೃಷಿ ಕೂಲಿಕಾರರ ಸಂಘವು ಭರಿಸಲಿದೆ ಎಂದರು.
ಶಿಕ್ಷಣ ಇಲಾಖೆಯ ಆರ್.ವೆಂಕಟರಾಮಪ್ಪ, ಹಿರಿಯ ವಕೀಲ ಎ.ಜಿ.ಸುಧಾಕರ್, ಬಿ.ಆರ್.ಕೃಷ್ಣ, ಡಿ.ಎನ್.ಕೃಷ್ಣಾರೆಡ್ಡಿ, ಎಂ.ಪಿ.ಮುನಿ ವೆಂಕಟಪ್ಪ ವಿ.ವೆಂಕಟಶಿವಾರೆಡ್ಡಿ ಮತ್ತಿತರರು ಮಾತನಾಡಿ ದಿ.ನರಸಿಂಹಮೂರ್ತಿಯವರ ಬಗ್ಗೆ ಮಾತನಾಡಿ ನುಡಿ-ನಮನ ಸಲ್ಲಿಸಿದರು. ಹಲವಾರು ಸಹೃದಯರು ತಮ್ಮ ಸಹಾಯ ಹಸ್ತವನ್ನು ನರಸಿಂಹಮೂರ್ತಿ ಕುಟುಂಬಕ್ಕೆ ಒದಗಿಸಿದರು.
ಇದನ್ನು ಓದಿದ್ದೀರಾ..? ಬಯಲು ಸೀಮೆಯ ಜನರಿಗೆ ಶುದ್ಧ ನೀರನ್ನು ಪೊರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ : ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ
ಈ ಸಂದರ್ಭದಲ್ಲಿ ನರಸಿಂಹಮೂರ್ತಿ ಅವರ ಧರ್ಮಪತ್ನಿ ಶ್ರಾವಣಿ, ತಂದೆ ತಾಯಿ ಸಹೋದರಿಯರು, ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ನಾಗರಾಜಪ್ಪ, ಶಿಕ್ಷಕ ಸುಬ್ರಮಣಿ, ಡಾ.ರಾಮಯ್ಯ, ಜಿ.ವೆಂಕಟೇಶ್, ಸಿದ್ದಗಂಗಪ್ಪ, ರಾಮಲಿಂಗಪ್ಪ, ಹರೀಶ್, ಶಿವಚಂದ್ರ, ಆರ್.ಹನುಮಂತರೆಡ್ಡಿ, ನಾಗರಾಜು, ರಂಗನಾಥ, ಡಿ.ಟಿ.ಮುನಿಸ್ವಾಮಿ, ರಘುರಾಮರೆಡ್ಡಿ, ಬಿಳ್ಳೂರು ಕೆ.ಎಂ. ನಾಗರಾಜು, ಕೆ.ಮುನಿಯಪ್ಪ, ಸೋಮಶೇಖರ, ಬಿ.ಟಿ.ಚಂದ್ರಶೇಖರರೆಡ್ಡಿ, ಮಣಿಕಂಠ, ಪಿ.ಎಸ್.ರಾಜೇಶ್, ಗೋಪಾಲರೆಡ್ಡಿ,ಗಣೇಶ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.