ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ ಹೋಗಿರುವುದು ಕರ್ನಾಟಕ ಸರ್ಕಾರ ತಲೆತಗ್ಗಿಸಬೇಕಾದ ವಿಚಾರ. ದೆಹಲಿಗೆ ಹೋಗುವ ಮೂಲಕ “ನಮಗಿಲ್ಲ ನ್ಯಾಯ ಸಿಗುವುದಿಲ್ಲ” ಎಂಬ ಅವರ ಘೋಷಣೆ ರಾಜ್ಯ ಸರ್ಕಾರಕ್ಕೆ ಮಾಡಿ ವಕಪಾಳ ಮೋಕ್ಷವಿದ್ದಂತೆ. ಇದಕ್ಕೆ ಕಾರಣವಾಗಿರುವ ಕರ್ನಾಟಕದ ಕ್ಯಾಬಿನೆಟ್ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು.
ಕೊನೆ ಭರವಸೆಯಾಗಿ ಅಲೆಮಾರಿಗಳು ತನ್ನನ್ನು ಹುಡುಕಿ ಬಂದಿದ್ದಾರೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸಬಾರದು ಎಂಬ ವಾಸ್ತವವನ್ನು ರಾಹುಲ್ ಗಾಂಧಿಯವರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಕೂಡಲೇ ಕರ್ನಾಟಕದ ಕ್ಯಾಬಿನೆಟ್ಟಿಗೆ ಕಿವಿಹಿಂಡಿ ಅವರು ಮಾಡಿರುವ ತಪ್ಪನ್ನು ಮನವರಿಕೆ ಮಾಡಿಸಬೇಕು.
‘ಅಲೆಮಾರಿಗಳಿಗೆ ನ್ಯಾಯ ಸಿಗಬೇಕಾದರೆ ಜಾತಿ ಜನಗಣತಿ ತನಕ ಕಾಯಬೇಕು’ ಎಂಬಂತಹ “ನಾಳೆ ಬಾ” ಉತ್ತರವನ್ನು ನೀಡದೆ 1% ಮೀಸಲಾತಿಯನ್ನು ಕೂಡಲೇ ಜಾರಿಮಾಡುವ ಧೃಡ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಪರಿಶಿಷ್ಟ ಜಾತಿಗಳಿಗೆ ನಿಗದಿಯಾಗಿರುವ ಶೇ. 17 ಮೀಸಲಾತಿಯನ್ನು ಶೇ. 18 ಕ್ಕೆ ಏರಿಸುವ ಮೂಲಕ ಈ ಸಮಸ್ಯೆಯನ್ನು ಇತ್ಯಾರ್ಥಪಡಿಸಬೇಕು. ಅಲ್ಲದೆ ಅಲೆಮಾರಿ ಸಮುದಾಯಗಳ ವಸತಿ, ಉದ್ಯೋಗ, ಶಿಕ್ಷಣ, ಪ್ರಾತಿನಿಧ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸಲು ಸಮಗ್ರ ಪರಿಣಾಮಕಾರಿ ಪ್ಯಾಕೇಜನ್ನು ಘೋಷಣೆ ಮಾಡಬೇಕು.
ಅಲೆಮಾರಿಗಳ ಹೋರಾಟದ ಜೊತೆ ನಾವೆಲ್ಲರೂ ಇದ್ದೇವೆ. ಕರ್ನಾಟಕ ಸರ್ಕಾರದ ನಡತೆಯನ್ನು ಆಳವಾದ ನೋವಿನ ಜೊತೆ ಖಂಡಿಸುತ್ತಿದ್ದೇವೆ. ಇನ್ನೂ ಕಾಯಿಸದೆ ರಾಹುಲ್ ಗಾಂಧಿಯವರು ಅಲೆಮಾರಿ ಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸಿ ವಾಪಾಸ್ ಕಳುಹಿಸಬೇಕೆಂದು ನಾಗರೀಕರಾದ ನಾವು ಬಲವಾಗಿ ಒತ್ತಾಯಿಸುತ್ತಿದ್ದೇವೆಂದು ಎದ್ದೇಳು ಕರ್ನಾಟಕ ಸದಸ್ಯರಾದ ಸುರೇಶ್ ಗಡಿಕಲ್ ಈದಿನ. ಕಾಮ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l 17 ವರ್ಷದ ಬಾಲಕನ ಮೇಲೆ ಹಲ್ಲೆ; ಆರೋಪಿಗಳನ್ನು ಬಂಧಿಸುವಂತೆ ಎಸ್‌ಡಿಪಿಐ ಆಗ್ರಹ
1.ಸಾರ್ಮಾಕ ನ್ಯಾಯ’ ಬರಿ ಮಾತಿನಲ್ಲಿ ಅಲ್ಲ, ನಿಮ್ಮ ಕೃತಿಯಲ್ಲಿ ಕಾಣುವಂತಾಗಲಿ 2.ರಾಹುಲ್ ಗಾಂಧಿವರು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ಟಿಗೆ ಕಿವಿ ಹಿಂಡಿ ಬುದ್ದಿ ಹೇಳಲಿ. 3.ದೆಹಲಿಯಲ್ಲಿಯೇ ಹೋರಾಟ ಮುಂದುವರಿಸಿರುವ ಅಲೆಮಾರಿ ಬಂಧುಗಳು ನ್ಯಾಯಪಡೆದು ಮರಳುವಂತಾಗಲಿ. 4.ಅಲೆಮಾರಿ ಸಮುದಾಯಗಳಿಗೆ ಅವರ ನ್ಯಾಯಸಮ್ಮತ 1% ಮೀಸಲಾತಿ ಕೂಡಲೇ ಜಾರಿಯಾಗಲೀ, ಅವರ ಸಮಗ್ರ ಅಭಿವೃದ್ಧಿಗೆ ಪರಿಣಾಮಕಾರಿ ಪ್ಯಾಕೇಜ್ ಘೋಷಣೆಯಾಗಲಿ.