ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಚೆಂಡು ಹೂವು ಬೆಳೆ ಮಧ್ಯೆ ಬೆಳೆದಿದ್ದ ₹12 ಲಕ್ಷ ಮೌಲ್ಯದ ಗಾಂಜಾವನ್ನು ಕಮಲನಗರ ಠಾಣೆಯ ಪೊಲೀಸರು ಸೋಮವಾರ ಪತ್ತೆ ಹಚ್ಚಿದ್ದಾರೆ.
ಹೂವು ಬೆಳೆ ನಡುವೆ ಗಾಂಜಾ ಸಸಿ ನಾಟಿ ಮಾಡಿ ಬೆಳೆದರೆ ಯಾರಿಗೂ ಗೊತ್ತಾಗುವುದಿಲ್ಲ. ಕದ್ದು ಮುಚ್ಚಿ ಮಾರಾಟ ಮಾಡಬಹುದು ಎಂಬ ಉದ್ದೇಶದಿಂದ ಸಂತೋಷ ಬಾಗದೆ ಎಂಬುವವರು ಅಕ್ರಮವಾಗಿ 51 ಗಾಂಜಾ ಗಿಡಗಳನ್ನು ಬೆಳೆದಿದ್ದರು.
ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಶ್ರೀಕಾಂತ ಅಲ್ಲಾಪುರೆ, ಪಿಎಸ್‌ಐ ಆಶಾ ಅವರ ನೇತ್ರತ್ವದಲ್ಲಿ ಸೋಮವಾರ ದಾಳಿ ನಡೆಸಿ, ₹15 ಲಕ್ಷ ಮೌಲ್ಯದ 15.100 ಕೆಜಿ ಗಾಂಜಾದ 51 ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿತನ ವಿರುದ್ಧ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕಮಲನಗರ ತಹಸೀಲ್ದಾರ್ ಅಮೀತ್ ಕುಲಕರ್ಣಿ, ಆರ್‌ಐ ಪ್ರವೀಣ ಬಿರಾದರ್, ಗ್ರಾಮ ಲೆಕ್ಕಾಧಿಕಾರಿ ರಮೇಶ ಶರಣಪ್ಪಾ, ಠಾಣೆಯ ಸಿಬ್ಬಂದಿಗಳಾದ ಲೋಕೇಶ, ಇಮ್ರಾನ್, ನವನಾಥ, ವೈಜಿನಾಥ, ಸಿದ್ದಲಿಂಗ, ನರೇಶ, ಮಲ್ಲಿಕಾರ್ಜುನ, ವಸಂತ, ನಾಗನಾಥ, ಅಂಕುಶ, ಮಹಾದೇವ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ಎಂಎಸ್‌ಎಸ್‌ಕೆ 8 ಸ್ಥಾನಗಳಿಗೆ ಚುನಾವಣೆ; 3,106 ಮತದಾನ