ಕಳೆದ ಅಕ್ಟೋಬರ್ 7ರಂದು ಹಮಸ್ ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದ ಬಳಿಕ, ಇಸ್ರೇಲ್ ಸೇನೆಯು ಗಾಝಾದ ಮೇಲೆ ನಿರಂತರವಾಗಿ ಬಾಂಬ್ ಸುರಿದ ಪರಿಣಾಮ ಒಟ್ಟು ಹನ್ನೊಂದು ಮಂದಿ ಪ್ಯಾಲೆಸ್ತೀನ್ ಪತ್ರಕರ್ತರು ಮೃತಪಟ್ಟಿರುವುದಾಗಿ ಪ್ಯಾಲೆಸ್ತೀನ್ ಪತ್ರಕರ್ತರ ಒಕ್ಕೂಟ ತಿಳಿಸಿದೆ.
ಅಲ್ಲದೇ, ದಾಳಿಯಲ್ಲಿ ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.
ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮೊಹಮ್ಮದ್ ಫಯೆಜ್ ಅಬು ಮಾತಾರ್, ಅಲ್-ಖಮ್ಸಾ ನ್ಯೂಸ್ ವೆಬ್ಸೈಟ್ನ ಪ್ರಧಾನ ಸಂಪಾದಕ ಸಯೀದ್ ಅಲ್-ತವೀಲ್, ಖಬರ್ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಛಾಯಾಗ್ರಾಹಕ ಮೊಹಮ್ಮದ್ ಸೋಬ್, ಖಬರ್ ನ್ಯೂಸ್ ಏಜೆನ್ಸಿಯ ಪತ್ರಕರ್ತ ಹಿಶಾಮ್ ಅಲ್ನವಾಜಾ, ಫೋಟೋ ಜರ್ನಲಿಸ್ಟ್ ಮೊಹಮ್ಮದ್ ಅಲ್-ಸಾಲ್ಹಿ, ಸ್ಮಾರ್ಟ್ ಮೀಡಿಯಾದ ಪತ್ರಕರ್ತ ಮೊಹಮ್ಮದ್ ಜರ್ಘೌನ್, ಸೌತ್ ಅಲ್-ಅಸ್ರಾ ರೇಡಿಯೊದಲ್ಲಿ ಕೆಲಸ ಮಾಡುವ ಪತ್ರಕರ್ತ ಅಹ್ಮದ್ ಶೆಹಾಬ್ (ಕೈದಿಗಳ ರೇಡಿಯೋ ಧ್ವನಿ), ಅಲ್ ಅಕ್ಸಾ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಹುಸಾಮ್ ಮುಬಾರಕ್ ಮೃತಪಟ್ಟವರು ಎಂದು ವರದಿಯಾಗಿದೆ.
Gaza journalists race against deadlines and death as they report amid Israeli air strikes and siege.
🔗: https://t.co/R6vSDevRHQ pic.twitter.com/CWdhZIw9Yz
— Al Jazeera English (@AJEnglish) October 17, 2023
ಈವರೆಗೆ ಒಟ್ಟು 15 ಪತ್ರಕರ್ತರು ಮೃತ್ಯು
11 ಪ್ಯಾಲೆಸ್ತೀನ್ ಪತ್ರಕರ್ತರ ಸಹಿತ ಈವರೆಗೆ ಒಟ್ಟು 15 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆಯು ನಿರ್ದಿಷ್ಟವಾಗಿ ವರದಿಗಾರರ ಗುಂಪನ್ನು ಗುರಿಯಾಗಿಸಿಕೊಂಡ ದಾಳಿಯಲ್ಲಿ ದಕ್ಷಿಣ ಲೆಬನಾನ್ನಲ್ಲಿ ರಾಯಿಟರ್ಸ್ನಲ್ಲಿ ಕೆಲಸ ಮಾಡುವ ವೀಡಿಯೋಗ್ರಾಫರ್ ಇಸ್ಸಾಮ್ ಅಬ್ದಲ್ಲಾಹ್ ಮೃತಪಟ್ಟಿದ್ದರು. ಈ ವೇಳೆ ಆರು ಪತ್ರಕರ್ತರು ಗಾಯಗೊಂಡಿದ್ದರು.
ಇಸ್ರೇಲ್ನ ವಾಯುದಾಳಿಯಿಂದ ಗಾಝಾ ಈವರೆಗೆ 2,800 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದು, ಇದರಲ್ಲಿ ಸುಮಾರು 800ರಷ್ಟು ಮಕ್ಕಳೇ ಇದ್ದಾರೆ ಎಂದು ವರದಿಯಾಗಿದೆ.