ಆನ್‌ಲೈನ್ ವೆಬ್‌ಸೈಟ್ ‘ನ್ಯೂಸ್‌ಕ್ಲಿಕ್’ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯೂಸ್‌ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರು, ಪರಿಶೀಲನೆಗಾಗಿ ವಶಪಡಿಸಿಕೊಳ್ಳಲಾಗಿರುವ ವಿದ್ಯುನ್ಮಾನ ಸಾಧನಗಳ ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಗಡ್ಡಧಾರಿ-ಟೋಪಿಧಾರಿ ವ್ಯಕ್ತಿಗಳಿಗೆ ಥಳಿಸಿ ಎಂದ ಬಿಜೆಪಿ ಶಾಸಕ
ಚಕ್ರವರ್ತಿ ಹಾಗೂ ಪುರಕಾಯಸ್ಥ ಅವರು ಸಲ್ಲಿಸಿರುವ ಮನವಿಗಳಿಗೆ ಪ್ರತಿಕ್ರಿಯಿಸುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ನ್ಯಾಯಾಲಯ ಸೂಚಿಸಿದೆ.
‘ನ್ಯೂಸ್‌ಕ್ಲಿಕ್’ ಸುದ್ದಿತಾಣವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿ ವಿದೇಶದಿಂದ ಹಣ ಪಡೆದಿದೆ ಎಂಬ ಆರೋಪದ ಮೇಲೆ ಈ ಇಬ್ಬರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ (ಯುಎಪಿಎ) ದೆಹಲಿ ಪೊಲೀಸರು ಅಕ್ಟೋಬರ್ 3ರಂದು ಬಂಧಿಸಿದ್ದಾರೆ.