ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಲು 452 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ವಿರಾಟ್ ಕೊಹ್ಲಿ ಕೇವಲ 277 ಇನಿಂಗ್ಸ್‌ಗಳಲ್ಲಿ 49 ಏಕದಿನ ಶತಕದ ಸಾಧನೆ ಮಾಡಿದರು. ಇನ್ನೊಂದು ಶತಕ ಬಾರಿಸಿದರೆ, ಸಚಿನ್ ದಾಖಲೆಯನ್ನು ಹಿಂದಿಕ್ಕುವುದಲ್ಲದೇ, ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ತನ್ನ ಶತಕದ ದಾಖಲೆ ಸರಿಗಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ.
Well played Virat.
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!#INDvSA pic.twitter.com/PVe4iXfGFk— Sachin Tendulkar (@sachin_rt) November 5, 2023
ವಿರಾಟ್ ಕೊಹ್ಲಿ ತನ್ನ ಹುಟ್ಟು ಹಬ್ಬದ ದಿನದಂದೇ ಶತಕ ಬಾರಿಸಿದ್ದ ಹಿನ್ನೆಲೆಯಲ್ಲಿ ಟ್ವೀಟ್‌ನಲ್ಲಿ ತೆಂಡೂಲ್ಕರ್, ‘ವಿರಾಟ್ ಚೆನ್ನಾಗಿ ಆಡಿದ್ದಾರೆ. ನನಗೆ ಈ ವರ್ಷದಲ್ಲಿ 49 ರಿಂದ 50ಕ್ಕೆ ತಲುಪಲು 365 ದಿನಗಳು ಬೇಕಾಯಿತು. ನೀವು ಮುಂದಿನ ಕೆಲವು ದಿನಗಳಲ್ಲಿ 49ರಿಂದ 50ಕ್ಕೆ ಹೋಗಿ, ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.
A legendary praise for a monumental milestone 🫡#TeamIndia | #CWC23 | #MenInBlue | #INDvSA pic.twitter.com/w2RcOLCeDh
— BCCI (@BCCI) November 5, 2023
ಇದು ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ‘ತನ್ನ ದಾಖಲೆ ವಿರಾಟ್ ಕೊಹ್ಲಿಯವರು ಮುರಿದು ಸಾಧನೆ ಮಾಡಿದ್ದಕ್ಕೆ ಸಚಿನ್ ಬೇಸರದಲ್ಲಿದ್ದಂತೆ ಕಂಡು ಬರುತ್ತಿದೆ. ಒಳಗೆ ಬೇಸರವಿರಬಹುದು. ಹೊರಗೆ ಅಭಿನಂದನೆ ಸಲ್ಲಿಸಿದ್ದಾರೆ’ ಎಂದಿದ್ದಾರೆ.
ಸಚಿನ್ ತೆಂಡೂಲ್ಕರ್, 49 ರಿಂದ 50 ಎನ್ನುವ ಮೂಲಕ ತನ್ನ ವಯಸ್ಸನ್ನು ಉಲ್ಲೇಖಿಸಿ ಈ ರೀತಿ ಟ್ವೀಟ್ ಮಾಡಿದ್ದಾರೆ. ಆದರೆ, ಈ ಟ್ವೀಟ್ ಅನ್ನು ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ. ಇವತ್ತು ಅವರಿಗಾದಷ್ಟು ಖುಷಿ ಬೇರೆಯವರಿಗೆ ಆಗಿರಲಿಕ್ಕಿಲ್ಲ ಎಂದು ಮತ್ತೆ ಕೆಲವರು ಟ್ವೀಟ್ ಮಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Sachin Tendulkar watching Virat Kohli’s 49th century. #INDvsSA | #ViratKohli | #KingKohli pic.twitter.com/SM2wYbBcsQ
— Rajabets 🇮🇳👑 (@smileagainraja) November 5, 2023
ಈ ನಡುವೆ 2012ರಲ್ಲಿ ಸಚಿನ್ ಮಾತನಾಡಿದ್ದ ವಿಡಿಯೋವೊಂದು ಕೂಡ ವೈರಲಾಗುತ್ತಿದೆ. ಸಚಿನ್ 100 ಶತಕ ಬಾರಿಸಿದ ವೇಳೆ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ‘ಯಾರಾದರೂ ನಿಮ್ಮ ದಾಖಲೆಯನ್ನು ಮುರಿಯಬಹುದೇ?’ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ತೆಂಡೂಲ್ಕರ್, ‘ನನ್ನ ಪ್ರಕಾರ ಸಾಧ್ಯವಿರುವವರು ಈ ಕೋಣೆಯಲ್ಲಿ ಕುಳಿತಿದ್ದಾರೆ. ಅವರೆಂದರೆ ವಿರಾಟ್ ಮತ್ತು ರೋಹಿತ್’ ಎಂದು ತಿಳಿಸಿದ್ದರು. ಈ ವಿಡಿಯೋ, ವಿರಾಟ್ ಕೊಹ್ಲಿಯ ಸಾಧನೆಯ ಬಳಿಕ ವೈರಲಾಗುತ್ತಿದೆ.
Most ODI Hundreds
49 VIRAT KOHLI, Sachin Tendulkar
March, 2012
Salman Khan: Can anyone break your record?Tendulkar: I think those who can, are sitting in this room only. Virat and Rohit are the ones.
— Cricketopia (@CricketopiaCom) November 5, 2023
ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಶತಕ ಬಾರಿಸುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ ನಿರಾಶೆ ಅನುಭವಿಸಿದ್ದರು.
ಈಡನ್ ಗಾರ್ಡನ್ಸ್‌ನಲ್ಲೇ ಮೊದಲ ಶತಕ ಬಾರಿಸಿದ್ದ ‘ಕಿಂಗ್ ಕೊಹ್ಲಿ’
ಶ್ರೀಲಂಕಾ ಎದುರು 2009ರ ಡಿಸೆಂಬರ್ 24ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲೇ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಏಕದಿನ ವೃತ್ತಿ ಬದುಕಿನ ಶತಕಗಳ ಖಾತೆ ತೆರೆದಿದ್ದರು. ಇದೀಗ ಅದೇ ಕ್ರೀಡಾಂಗಣದಲ್ಲಿ ದಾಖಲೆಯ 49ನೇ ಶತಕ ಬಾರಿಸುವ ಮೂಲಕ, ಸಚಿನ್ ದಾಖಲೆ ಸರಿಗಟ್ಟಿದ್ದಾರೆ.
From one Master to another 🤝#CWC23 pic.twitter.com/9vyhgR7tvN
— ICC (@ICC) November 5, 2023
ಆಡಿದ ತಮ್ಮ 289ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 49ನೇ ಏಕದಿನ ಶತಕ ಬಾರಿಸಿದರು. ವಿರಾಟ್ ಕೇವಲ 277 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 452ನೇ ಇನಿಂಗ್ಸ್‌ನಲ್ಲಿ 49ನೇ ಶತಕ ಬಾರಿಸಿದ್ದರು.
ಸಚಿನ್‌ಗಿಂತ 175 ಕಡಿಮೆ ಇನಿಂಗ್ಸ್‌ಗಳಲ್ಲಿ 49ನೇ ಶತಕ ದಕ್ಕಿಸಿಕೊಂಡಿರುವ ಕಿಂಗ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ದಾಖಲೆ ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಇಂದಿನ ಪಂದ್ಯದಲ್ಲಿ ತಾಳ್ಮೆಯ ಆಟವಾಡಿದ ವಿರಾಟ್ ಕೊಹ್ಲಿ 121 ಎಸೆತಗಳಲ್ಲಿ ಯಾವುದೇ ಸಿಕ್ಸ್ ಬಾರಿಸದೆ, 10 ಬೌಂಡರಿಯ ನೆರವಿನಿಂದ 101 ಬಾರಿಸಿ, ಔಟಾಗದೆ ಉಳಿದರು.