ಬೆಂಗಳೂರು | ರೌಡಿಶೀಟರ್ ಮನೆಯಲ್ಲಿ 105 ಕೆಜಿ ಗಾಂಜಾ, ಮಾರಕಾಸ್ತ್ರ ವಶಪಡಿಸಿಕೊಂಡ ಪೊಲೀಸರು

Date:

  • 100 ರೌಡಿಶೀಟರ್‌​​ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು
  • ಏ.​ 20ರಂದು 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆದಿತ್ತು

ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ, ಬೆಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೀಗ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದು, ರೌಡಿಶೀಟರ್​​​​​ ಆಸಿಫ್​​ ಮನೆಯಲ್ಲಿ 105 ಕೆಜಿ ಗಾಂಜಾ ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೊಲ್ಲು ಇಮ್ರಾನ್​​, ಅನಿಸ್​, ಅಬ್ಬಾಸ್​​, ಸಾಧಿಕ್​​​, ಶಾಕಿರ್​​​​, ಇರ್ಫಾನ್​, ಯೂಸೂಫ್​​ ಸೇರಿದಂತೆ 100 ರೌಡಿಶೀಟರ್‌ಗಳ​​ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮನೆಗಳಲ್ಲಿದ್ದ ಡ್ರಗ್ಸ್​​, ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಏ.25ರಂದು ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏ.​ 20ರಂದು 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು

ಇದೇ ತಿಂಗಳ ಏ.​ 20ರಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಎಲ್ಲ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಂದ 500ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆದಿತ್ತು. ಈ ದಾಳಿ ವೇಳೆ ವಾರಂಟ್ ಪೆಂಡಿಂಗ್‌ ಇದ್ದ ಕೆಲ ರೌಡಿಗಳ ಮನೆಯಲ್ಲಿ ಮಚ್ಚು, ಲಾಂಗು ಸೇರಿದಂತೆ ಇನ್ನಿತರ ಮಾರಕಾಸ್ತ್ರಗಳು ಪತ್ತೆಯಾಗಿದ್ದವು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ ನಿಧನ: ಆತ್ಮಹತ್ಯೆ ಶಂಕೆ?

ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದ ರಣಜಿ ಆಟಗಾರ ಡೇವಿಡ್ ಜಾನ್ಸನ್​(52)...

ನಾಲ್ಕು ವರ್ಷಗಳಿಂದ ನಡೆಯದ ಬಿಬಿಎಂಪಿ ಚುನಾವಣೆ; ನಗರದ ಜನ ಏನಂದ್ರು?

ಸುಮಾರು ನಾಲ್ಕು ವರ್ಷಗಳಿಂದ ನಾನಾ ನೆಪ ಹೇಳಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ....

ಬೆಂಗಳೂರು | ನೂರರ ಗಡಿ ದಾಟಿದ ಟೊಮೆಟೊ ದರ; ದ್ವಿಶತಕದತ್ತ ಮುಖ ಮಾಡಿದ ಬೀನ್ಸ್‌

ಪೆಟ್ರೊಲ್, ಡಿಸೇಲ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ...

ಬೆಂಗಳೂರು | ಆರ್ಡರ್ ಮಾಡಿದ ಗ್ರಾಹಕರ ಮನೆಗೆ ಜೀವಂತ ಹಾವು ಕಳುಹಿಸಿದ ಅಮೆಜಾನ್

ಅಮೆಜಾನ್‌ನಲ್ಲಿ ‘ಎಕ್ಸ್‌ ಬಾಕ್ಸ್‌ ಕಂಟ್ರೋಲರ್’ ಆರ್ಡರ್‌ ಮಾಡಿದವರಿಗೆ ಅಮೆಜಾನ್ ಕಂಪನಿ ಉಚಿತವಾಗಿ...