ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!
"ನನ್ನ ಮೊಮ್ಮಕ್ಕಳು ಲಗ್ನ ಆಗಾಕ ಬಂದ್ರು, ನಮ್ಮ ತಂದಿ-ತಾಯಿ ತೀರ್ಕಂಡ್ರು, ಅಜ್ಮುತ್ಯಾರ ತೀರ್ಕಂಡ್ರು, ನಿಮಗ ಜಾಗ ಕೊಡ್ತಿವಿ ಅಂತ ಹೇಳಿ ಹಕ್ಕುಪತ್ರ ಕೊಟ್ರು, ರೆಜಿಸ್ಟರ್ ಮಾಡಿಸಾಕ ಕಿವಿಯಾನ್ ಸಾಮಾನ್ ಮಾರಿ ಕೊಟ್ವಿ. ಹನ್ಯಾಡು, ಹದ್ಮೂರು ವರ್ಷ ಆತು ಅಲ್ಲಿಂದ ಇಲ್ಲಿ ವರ್ಗೂ ಹ್ಯಾಂಗ್ ಇರ್ಬೇಕು ಹೇಳ್ರಿ. ನಮ್ಗೂ ಕಷ್ಟ ಆಗುತ್ತಿಲ್ರಿ. ಗೌಡ್ರ ಜಾಗದಾಗ ಅದೀವಿ. ಅವರು ಇಂದಲ್ಲ ನಾಳೆ ಕಿತ್ತು ಒಗೆಯೋರ. ನಮಗ ಇರಾಕ ನೆಳ್ಳಿಲ್ಲ. ಇದ್ದೌವ್ರ ಯಾರರ ಕರದ್ರ ಅವರ ಮನಿಗೆ ಹೋಗಿ ಕಸ-ಮುಸ್ರಿ ಬಂಡೆ ತಿಕ್ಕಿ ಜೀವ್ನ ಸಾಗಿಸೋರು. ನಮಗೇನ್ ಆಧಾರ್ ಐತಿ. ಇದ್ರು ಇಲ್ಲಾರ್ದಂಗ ಐತಿ. ಇಲ್ಲಿ ಕುಡಿಯಾಕ ನೀರಿಲ್ಲ, ಮಕ್ಳಿಗೆ ಓದಾಕ ಕರೆಂಟ್ ಇಲ್ಲ. ಆ ಮಕ್ಳಿಗೆ ಆ ಸೌಭಾಗ್ಯನೂ ಇಲ್ಲ, ನಮಗೂ ಇಲ್ಲ" ಎಂದು ಜನತ್ತಬಿ ಕರ್ನೂಲ ತಮ್ಮ ನೋವನ್ನು ತೋಡಿಕೊಂಡರು.
Read more