ಬಿಹಾರದಲ್ಲಿ ಲಕ್ಷಾಂತರ ಮತದಾರರನ್ನು ಹೊರಗಿಡುವ ಹುನ್ನಾರ; ಶನಿವಾರ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

Date:

Advertisements

ಬಿಹಾರದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯು ವಲಸೆ ಹೋಗಿರುವ ಲಕ್ಷಾಂತರ ಬಿಹಾರಿ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ತಂತ್ರವಾಗಿದೆ ಎಂದು ಜನಸುರಾಜ್ ಪಕ್ಷ ಆರೋಪಿಸಿದೆ. ಚುನಾವಣಾ ಆಯೋಗದ ನಡೆಯನ್ನು ಖಂಡಿಸಿ ಶನಿವಾರ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಶುಕ್ರವಾರ, ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ಮುಖಂಡ ರಾಜ್‌ ಗುರು, “ಲಕ್ಷಾಂತರ ಜನರ ಮತದಾನದ ಹಕ್ಕಿಗೆ ಕೊಡಲಿ ಪೆಟ್ಟು ನೀಡುವ ಈ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ದ ದನಿ ಎತ್ತುವುದು ಜವಾಬ್ದಾರಿಯುತ ಪ್ರಜೆಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅನಿವಾಸಿ ಬಿಹಾರಿಗಳು ಮತ್ತು ಜನ ಸುರಾಜ್‌ ಪಕ್ಷದ ಹಿತೈಷಿಗಳು ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ” ಎಂದು ತಿಳಿಸಿದ್ದಾರೆ.

“ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸುತ್ತಿರುವುದು ಸಂವಿಧಾನ ಬಾಹಿರ. ಈ ಪ್ರಕ್ರಿಯೆಗೆ ಕೇಳುತ್ತಿರುವ ದಾಖಲೆಗಳು ಹಾಗೂ ಈಗಿರುವ ಕಾಲಮಿತಿಯ ಕುರಿತು ನಮಗೆ ತಕರಾರಿದೆ. ಜೊತೆಗೆ ವಲಸಿಗರ ಮತದಾನದ ಹಕ್ಕಿಗೆ ಚ್ಯುತಿ ತರುವ ಈ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಮಾದ್ಯಮ ಗೋಷ್ಠಿಯಲ್ಲಿ ಹೋರಾಟಗಾರ ಕಾವಲ್ ಸಿಂಗ್, ಆಯುಷ್, ಶರತ್, ಡಾ. ನಿಶ್ಚಿತ್ ಕೆ.ಆರ್ ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ವತಿಯಿಂದ ಅ.2ರಿಂದ ರಾಜ್ಯಾದ್ಯಂತ ʼಅರಿವು-ಮಾನವೀಯತೆʼ ಜಾಗೃತಿ ಅಭಿಯಾನ

ಕರ್ನಾಟಕ ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ವತಿಯಿಂದ ಅ.2ರಿಂದ ರಾಜ್ಯಾದ್ಯಂತ...

ವಿಪ್ರೋ ಕ್ಯಾಂಪಸ್‌ ಮೂಲಕ ವಾಹನ ಸಂಚಾರಕ್ಕೆ ಅವಕಾಶ; ಸಿಎಂ ಮನವಿ ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ಉಂಟಾಗುವ ತೀವ್ರ ಸಂಚಾರ ದಟ್ಟಣೆಯನ್ನು...

ಬೆಂಗಳೂರು | ಆರ್ಥಿಕ ಅಭಿವೃದ್ಧಿಗೆ ಸಹಕಾರ; ಕರ್ನಾಟಕ-ನ್ಯೂಜೆರ್ಸಿ ಒಪ್ಪಂದ: ಪ್ರಿಯಾಂಕ್‌ ಖರ್ಗೆ

ತಂತ್ರಜ್ಞಾನ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರವನ್ನು ಬಲಪಡಿಸಲು ಕರ್ನಾಟಕ ಸರ್ಕಾರ...

ಬೆಂಗಳೂರು | ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು: ಅಧಿಕಾರಿಗಳಿಗೆ ಡಿ ಎಸ್ ರಮೇಶ್ ಎಚ್ಚರಿಕೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ಟಿನ್ ಫ್ಯಾಕ್ಟರಿವರೆಗೆ...

Download Eedina App Android / iOS

X