ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಯೇ ನಡೆಯಲ್ಲ: ಬಡಗಲಪುರ ನಾಗೇಂದ್ರ

Date:

ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಯೇ ನಡೆಯಲ್ಲ. ಬಿಜೆಪಿಯನ್ನು ಸೋಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ತುರ್ತು ನಮ್ಮ ಮುಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ  ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ನಾನಾ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಧರಣಿಯಲ್ಲಿ ಅವರು ಮಾತನಾಡಿದರು. “ಸ್ವತಂತ್ರ ನಂತರ ರೈತರ ಸಮುದಾಯ ಯಾವ ಸಮಸ್ಯೆಗೆ ಎದುರಾಗುತ್ತಿದೆಯೊ ಅದರ ವಿರುದ್ಧ ನಿರಂತರ ಹೋರಾಟ ನಡೆದಿದೆ. ಆದರೆ ದೆಹಲಿ ಹೋರಾಟ ರೈತರ ಆಕ್ರೋಶ ಕಟ್ಟೆ ಒಡೆದ ಹೋರಾಟವಾಗಿದೆ. 780 ರೈತರು ತಮ್ಮ ಪ್ರಾಣವನ್ನು ಇದಕ್ಕೆ ಅರ್ಪಿಸಿದ್ದಾರೆ. ರೈತರ ಈ ತೀವ್ರ ಹೋರಾಟವು ಕಾಯ್ದೆ ವಾಪಸ್ ಪಡೆಯಲೇ ಬೇಕಾದ ಸ್ಥಿತಿ ತಂದಿಟ್ಟಿತ್ತು. 2020ರಲ್ಲಿ ಹೋರಾಟಗಾರ ಮಾರುತಿ ಮಾನ್ಪಡೆ ತೀರಿಕೊಂಡರು. ಈ ವೇಳೆ ಬಿಜೆಪಿಯ ಯಡಿಯೂರಪ್ಪ ಅವರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿ ತಂದಾಗ ರೈತ, ದಲಿತ, ಕಾರ್ಮಿಕರು ಐಕ್ಯವಾಗಿ ಹೋರಾಟ ನಡೆಸಿದೆವು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

“ಸ್ವತಂತ್ರ ಪಡೆಯಲು ನಾವು 2 ಶತಮಾನಗಳ ಕಾಲ ಹೋರಾಟ ಮಾಡಿದ್ದೇವೆ. ಈ ದೇಶಕ್ಕಾಗಿ ಜನರು ತಮ್ಮ ಆಯುಷ್ಯವನ್ನೇ ಮುಡಿಪಾಗಿಟ್ಟಿದ್ದಾರೆ. ನಾವು ಈಗ ಸಂವಿಧಾನ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. 2024ರ ಚುನಾವಣೆಯಲ್ಲಿ ಭಾರತದ ದೇಶದ ಜನರಿಗೆ ದೊಡ್ಡ ಮಹತ್ವವಾದ ಚುನಾವಣೆ. ಈ ಚುನಾವಣೆಯಲ್ಲಿ ಕೋಮುವಾದಿ, ಬಂಡವಾಳಶಾಹಿಯನ್ನು ಪ್ರತಿನಿಧಿಸುವ ಮೋದಿ ಸರ್ಕಾರ ಮತ್ತೆ ಚುನಾಯಿತರಾದರೆ, ಮುಂದೆಂದೂ ಚುನಾವಣೆ ನಡೆಯುವುದಿಲ್ಲ” ಎಂದರು.

“2024ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರತಿನಿಧಿಸುವ ಜನರು ಅಧಿಕಾರಕ್ಕೆ ಬಂದರೆ ಭಾರತ ಸೋಲುತ್ತದೆ. ಜನಚಳವಳಿಗಳೇ, ನಾವೇ ಬದಲಾವಣೆ ತರಬೇಕು. ರಾಜಕೀಯ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. 2024ರ ಚುನಾವಣೆ ಜನಚಳವಳಿಗಳು ನಿರ್ಣಾಯಕ ಪಾತ್ರ ವಹಿಸಬೇಕು” ಎಂದರು.

ಧರಣಿಯಲ್ಲಿ ಮಾತನಾಡಿದ ರೈತ ಹೋರಾಟಗಾರ ಡಾ. ವಿಜು ಕೃಷ್ಣನ್, “2014ರಲ್ಲಿ ಚುನಾವಣೆ ಬಂದಾಗ ಹಲವಾರು ಭರವಸೆಗಳನ್ನು ಬಿಜೆಪಿ ನೀಡಿತ್ತು. ಆ ಮೂಲಕ ಅಧಿಕಾರಕ್ಕೆ ಬಂದಿತು. ರೈತರು, ಯುವಜನರು ಹಾಗೂ ಮಹಿಳೆಯರಿಗೆ ‘ಅಚ್ಛೇ ದಿನ್’ ಬರುತ್ತದೆ ಎಂದಿದ್ದರು. ಆದರೆ, ಯಾರಿಗೆ ಅಚ್ಛೇ ದಿನ್ ಬಂದಿದೆ. ರೈತರು, ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಕಿಡಿಕಾರಿದರು.

“ಉತ್ಪಾದನೆ ಖರ್ಚಿಗಿಂತ 50% ಹೆಚ್ಚು ಆದಾಯ ಬರುವಂತೆ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಆದರೆ, ಈಗ ಕೃಷಿ ಮಂತ್ರಿಯನ್ನ ಕೇಳಿದರೆ, ‘ಚುನಾವಣಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ. ಅದೆಲ್ಲವನ್ನೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ’ ಎಂದು ಈಗ ಅವರು ಹೇಳುತ್ತಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಳ್ಳುವ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರು. ಅದರ ವಿರುದ್ಧ ದಲಿತ, ಕಾರ್ಮಿಕರ, ರೈತರು ಐಕ್ಯ ಹೋರಾಟ ನಡೆಸಿದರು. ಹೀಗಾಗಿ, ಸಂಸತ್ತಿನಲ್ಲಿ ಆ ಮಸೂದೆಯನ್ನು ಹಿಂಪಡೆದುಕೊಂಡರು” ಎಂದು ತಿಳಿಸಿದರು.

mahadarani1

“ಕೊರೊನಾ ಸಮಯದಲ್ಲಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದರು. ಅವುಗಳ ವಿರುದ್ಧ ಸಾಂಕ್ರಾಮಿಕ ರೋಗಕ್ಕೂ ಹೆದರದೆ, ರೈತರು ಹೋರಾಟ ನಡೆಸಿದರು. ಸಂಯುಕ್ತ ಕಿಸಾನ್ ಮೂರ್ಚಾ, ‘ಗ್ರಾಮೀಣ್ ಭಾರತ್ ಬಂದ್’ಗೆ ಕರೆಕೊಟ್ಟು, ದೆಹಲಿ ಗಡಿಯಲ್ಲಿ ಒಂದು ವರ್ಷದ ಕಾಲ ಹೋರಾಟ ನಡೆಸಿದರು. ಆ ಹೋರಾಟ ಗೆದ್ದಿತು. ಅದಕ್ಕೆ ಕಾರಣ, ಎಲ್ಲರ ಐಕ್ಯತೆ. ಈ ಐಕ್ಯತೆಯನ್ನ ಎಲ್ಲರೂ ಮುಂದೆ ಕೊಂಡೊಯ್ಯಬೇಕು” ಎಂದರು.

“ನರಗುಂದ, ನವಲಗುಂದ ರೈತ ಹುತಾತ್ಮರ ಭೂಮಿ. ರಾಜ್ಯದ ರೈತರು, ದಲಿತರು, ಆದಿವಾಸಿಗಳು ಹೋರಾಟದ ಐಕ್ಯತೆಯಲ್ಲಿ ಇಡೀ ದೇಶದಲ್ಲೇ ಎರಡು ಹೆಜ್ಜೆ ಮುಂದಿದ್ದಾರೆ. ಎಲ್ಲೆಡೆ, ಇನ್ನೂ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ, ಎಲ್ಲರೂ ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ” ಎಂದರು.

“ಪ್ರಸ್ತುತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ, ಮೋದಿ ಅವರ ಹೆಸರಿನಲ್ಲಿ ಭರವಸೆ ನೀಡಲಾಗುತ್ತಿದೆ. ಅವರು ರಾಜಸ್ಥಾನದಲ್ಲಿ 450 ರೂ.ಗೆ ಅಡುಗೆ ಅನಿಲ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ 380 ರೂ. ಇದ್ದ ಸಿಲಿಂಡರ್ ಬೆಲೆ, ಈಗ 1250 ರೂ. ದಾಟಿದೆ. ಈಗ ಅವರು ಸುಳ್ಳು ಭರವಸೆಗಳನ್ನ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಹೇಳುತ್ತಿದ್ದಾರೆ – ಕಾರ್ಮಿಕರು 72 ಗಂಟೆ ಕೆಲಸ ಮಾಡಬೇಕು ಅಂತ. ಆ ನೀತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ, ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಕೂಡ ಆ ನೀತಿಯನ್ನು ಹಿಂಪಡೆದುಕೊಂಡಿಲ್ಲ. ತಮಿಳುನಾಡಿನಲ್ಲಿ ಈ ನೀತಿಯ ವಿರುದ್ಧ ಹೋರಾಟಗಳು ನಡೆದವು. ಅಲ್ಲಿನ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಹಿಂಪಡೆದುಕೊಂಡಿತು. ಆದರೆ, ರಾಜ್ಯದಲ್ಲಿ ಇನ್ನೂ ಆ ನೀತಿ ಹಾಗೆಯೇ ಉಳಿದಿದೆ” ಎಂದರು.

 

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಗಾಂಜಾ ಸೇವನೆ ಆರೋಪ: 19 ವರ್ಷದ ಯುವಕನ ಬಂಧನ

ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಕೀಜಾ ಸಮೀಪದ ಸಾರ್ವಜನಿಕ ಸ್ಥಳದಲ್ಲಿ...

ಕಲಬುರಗಿ | 20 ಪ್ರಕರಣಗಳ ಆರೋಪಿಗೆ ಗುಂಡಾ ಕಾಯ್ದೆ ಅಡಿ ಬಂಧನ

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ...

ವಿಜಯಪುರ |ಆಲಮಟ್ಟಿಯಿಂದ ನೀರು ಹರಿಸುವುದನ್ನು ನಿಲ್ಲಿಸಿ; ಇಲ್ಲದಿದ್ದರೆ ಜಲಾಶಯಕ್ಕೆ ಇಳಿದು ಪ್ರತಿಭಟನೆ:ಅರವಿಂದ ಕುಲಕರ್ಣಿ ಎಚ್ಚರಿಕೆ

ಆಲಮಟ್ಟಿ ಲಾಲಬಹದ್ದೂರ ಶಾಸ್ತ್ರಿ ಜಲಾಶಯದಿಂದ ಕೆಪಿಸಿಎಲ್ ಮೂಲಕ ನಾರಾಯಣಪುರ ಜಲಾಶಯಕ್ಕೆ ಪ್ರತಿದಿನ...

ಉಡುಪಿ | ಬಿಜೆಪಿ ಮತ್ತೆ ಕರೆದರೆ ಸೇರ್ಪಡೆ, ಇಲ್ಲದಿದ್ದರೆ ಕಾಂಗ್ರೆಸ್ ಅಥವಾ ಪಕ್ಷೇತರ ಆಯ್ಕೆ: ರಘುಪತಿ ಭಟ್

ಮುಂದಿನ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಯಾವ...