- ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಪ್ರಶಸ್ತಿ ವಿತರಣೆ
- 'ಪರಿಸರ ಮತ್ತು ಅಭಿವೃದ್ಧಿ' ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ
ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ‘ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ‘ಯನ್ನು ಹಿರಿಯ ಪತ್ರಕರ್ತ ಮತ್ತು ಈ ದಿನ.ಕಾಮ್ನ ಸಂಪಾದಕೀಯ ಸಲಹೆಗಾರರಾದ ಡಿ ಉಮಾಪತಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ (ಸೆ.19) ಪ್ರಶಸ್ತಿ ಪ್ರದಾನ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆದಿದ್ದು, ಇದೇ ವೇಳೆ 2017ರಿಂದ 2023ರವರೆಗಿನ ‘ಪರಿಸರ ಮತ್ತು ಅಭಿವೃದ್ಧಿ’ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ಮುಖ್ಯಮಂತ್ರಿಗಳು ವಿತರಿಸಿದರು.
ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ನ್ಯಾ.ಅಶೋಕ ಬಿ ಹಿಂಚಿಗೇರಿ, ಸಚಿವರಾದ ಭೈರತಿ ಸುರೇಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ವಿಧಾನ ಪರಿಷತ್ನ ಸರ್ಕಾರದ ಕಾರ್ಯದರ್ಶಿ ಬಿ ಬಿ ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜದ ವಂಚನೆಯ ಜಾಲಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ವಡ್ಡರ್ಸೆ ರಘುರಾಮ ಶೆಟ್ಟಿ ಅವರು 1984ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ‘ಮುಂಗಾರು’ ದಿನಪತ್ರಿಕೆಯನ್ನು ಪ್ರಾರಂಭಿಸಿ, ನಿರ್ಭೀತ ಬರಹಗಳ ಮೂಲಕ ಪತ್ರಿಕಾ ವೃತ್ತಿಯಲ್ಲಿ ಬದಲಾವಣೆಯನ್ನು ತಂದವರು. ಕನ್ನಡ ಪತ್ರಿಕೋದ್ಯಮದಲ್ಲಿ ದೀನದಲಿತರ ಹಾಗೂ ದುರ್ಬಲ ವರ್ಗದವರ ಪರವಾಗಿ ಧ್ವನಿ ಎತ್ತುವ, ದನಿ ಇಲ್ಲದವರ ದನಿಯಾಗಿದ್ದರು. ಇವರ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರ 2024ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಪತ್ರಕರ್ತನ ಅಕ್ಷರದಲ್ಲಿ ಧ್ವನಿ ಇರಬೇಕು, ಧ್ವನಿಯಲ್ಲಿ ನಂಬಿಕೆ ಇರಬೇಕು, ನಂಬಿಕೆಯಲ್ಲಿ ಸಮಾಜ ಬದಲಿಸುವ ಶಕ್ತಿ ಇರಬೇಕು. ಈ ನಂಬಿಕೆಯನ್ನು ಜೀವಂತಗೊಳಿಸಿ ತಮ್ಮ ಬರವಣಿಗೆಯ ಮೂಲಕ ಜನಮನಗಳನ್ನು ಪ್ರಭಾವಿಸಿದ, ಹಿರಿಯ ಪತ್ರಕರ್ತ ಮತ್ತು ಈ ದಿನ.ಕಾಮ್ನ ಸಂಪಾದಕೀಯ ಸಲಹೆಗಾರರಾದ ಡಿ ಉಮಾಪತಿ ಅವರು ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಚೊಚ್ಚಲ ಪ್ರಶಸ್ತಿ ಲಭಿಸಿದೆ.

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು
ವಿಜಯಲಕ್ಷ್ಮಿ ಶಿಬರೂರು -2017
ಬಿಎಂಟಿ ರಾಜೀವ್- 2018
ವಿನೋದಕುಮಾರ್ ಬಿ ನಾಯ್ಕ್ – 2019
ಮಾಲತೇಶ ಅಂಗೂರ – 2020
ಸುಧೀರ್ ಶೆಟ್ಟಿ – 2021
ಮಲ್ಲಿಕಾರ್ಜುನ ಹೊಸಪಾಳ್ಯ -2022
ಆರ್ ಮಂಜುನಾಥ್ – 2023

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು
ಚೀ. ಜ ರಾಜೀವ್- 2017
ದೇವಯ್ಯ ಗುತ್ತೇದಾರ್- 2018
ಗಿರೀಶ್ ಲಿಂಗಣ್ಣ – 2019
ಯೋಗೇಶ್ ಎಂ ಎನ್ – 2020
ನೌಶಾದ್ ಬಿಜಾಪುರ – 2021
ಸತೀಶ್ ಜಿ ಟಿ – 2022
ಎಂ ಗಿರೀಶ್ ಬಾಬು- 2023
