ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣಾ ಪ್ರಕ್ರಿಯೆ ವಿರೋಧಿಸಿ ಜನಸುರಾಜ್ ಪಕ್ಷದಿಂದ ಬೆಂಗಲೂರಿನಲ್ಲಿ ಪ್ರತಿಭಟನೆ ನಡೆಯಿತು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬೆಂಗಳೂರು ನಗರದಲ್ಲಿನ ಅನಿವಾಸಿ ಬಿಹಾರಿಗಳು ಭಾಗವಹಿಸಿದ್ದರು.
“ನಮ್ಮೆಲ್ಲರ ಕಾಳಜಿ ಈ ಪ್ರಕ್ರಿಯೆಗೆ ನಿಗದಿಪಡಿಸಿರುವ ಕಾಲಮಿತಿ, ಸಂಕೀರ್ಣ ದಾಖಲೀಕರಣ ಪ್ರಕ್ರಿಯೆಯು ತಾತ್ಕಾಲಿಕವಾಗಿ ಬಿಹಾರದಿಂದ ಹೊರಗಿರುವ ಮತದಾರರ ವಿವರವು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿದ್ದು, ನಿಗದಿತ ಸಮಯದಲ್ಲಿ ಜನ್ಮಸ್ಥಳದ ಮತ್ತು ಪೋಷಕರ ಮಾಹಿತಿಯನ್ನುಸಾಧ್ಯವಾಗುವುದಿಲ್ಲ. ನಾವು ನಾಗರೀಕರು, ನಾವು ಮತದಾರರು, ಉದ್ಯೋಗವನ್ನು ಅರಸಿ ಹೊರಬಂದಿರುವ ಒಂದೇ ಕಾರಣದಿಂದ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಕಣ್ಮರೆಯಾಗಬಾರದು”
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ಈ ಹಿನ್ನೆಲೆಯಲ್ಲಿ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ವಿಧಾನಸಭಾ ಚುನಾವಣೆಗಳು ಮುಗಿಯುವ ತನಕ ಮುಂದೂಡಬೇಕು. ಹಬ್ಬದ ಸಮಯದಲ್ಲಿ ಬಹುತೇಕ ವಲಸೆ ಕಾರ್ಮಿಕರು ವಾಪಸ್ಸು ಬರಲಿದ್ದು, ಮತ್ತಷ್ಟು ಸಮಯವನ್ನು ನೀಡಬೇಕು. ಪ್ರಾಮಾಣಿಕ ಮತದಾರರಿಗೆ ದಾಖಲಾತಿಗಳನ್ನು ಸಲ್ಲಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಮನಸ್ಥಿತಿಯನ್ನು ಸತ್ಯಾಪನೆ ಮಾಡಲು ಹೆಚ್ಚು ಸಮಯ ಹಾಗೂ ಸಡಿಲಿಕೆಗಳನ್ನು ನೀಡಬೇಕು.
ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವ ಮತ್ತು ವಲಸೆ ಬಂದಿರುವ ಬಿಹಾರಿ ಮತದಾರರ ಹಕ್ಕುಗಳ ರಕ್ಷಣೆಗೆ ಸುಸ್ಥಿರವಾದ ಜನಾಭಿಪ್ರಾಯವನ್ನು ರೂಪಿಸಬೇಕು.ಈಗ ನಡೆಯುತ್ತಿರುವ ಪರಿಷ್ಕರಣಾ ಪ್ರಕ್ರಿಯೆಯಿಂದ ತಾತ್ಕಾಲಿಕವಾಗಿ ಬಿಹಾರದಿಂದ ಹೊರಗಿರುವ ಮತದಾರರ ವಿವರವು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿದ್ದು, ಇದರಿಂದ ಅನೇಕರಿಗೆ ಮತದಾನ ಸಾಧ್ಯವಾಗುವುದಿಲ್ಲ. ಇದು ನಡೆಯಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು
ಬಳಿಕ ಕೆ.ಆರ್ ಸರ್ಕಲ್ ಬಳಿ ಇರುವ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.