ಇಂದಿರಾ ಗಾಂಧಿಯವರು ಐವತ್ತು ವರ್ಷಗಳ ಹಿಂದೆ ಹೇರಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಈಗ ಮಾತನಾಡುವ ಬಿಜೆಪಿಯವರಿಗೆ, "ಘೋಷಿತ ತುರ್ತುಪರಿಸ್ಥಿತಿ ಮುಗಿದು ಐವತ್ತು ವರ್ಷ ಕಳೆದಿದೆ. ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?"...
ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಕಾವೇರಿ ರಭಸಕ್ಕೆ, ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಕೊಚ್ಚಿಹೋಗಲಿದೆ.
ಕೆಆರ್‌ಎಸ್ ಅಣೆಕಟ್ಟೆಯ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್...
ಜಲಮಂಡಳಿ, ವಿದ್ಯುಚ್ಛಕ್ತಿ ಇಲಾಖೆ ಇಲ್ಲವೇ ಖಾಸಗಿ ಕೇಬಲ್ ಕಂಪನಿಗಳು ವರ್ಷವಿಡೀ ಕಾಲುದಾರಿಗಳನ್ನು ತೋಡಿ ಹಾಕಿರುತ್ತವೆ. ಅಲ್ಲಲ್ಲಿ ಚೆನ್ನಾಗಿರುವ ಕಾಲುದಾರಿಗಳನ್ನೂ ಗುತ್ತಿಗೆದಾರರು-ರಾಜಕಾರಣಿಗಳ ಜೇಬು ತುಂಬಿಸಲು ಮತ್ತೆ ಮತ್ತೆ ಅಗೆದು ಅವ್ಯವಸ್ಥೆ ಸೃಷ್ಟಿಸಲಾಗುತ್ತದೆ. ಉಳಿದಂತೆ ಕಾಲುದಾರಿಗಳು...
ಮಳೆಯಿಂದಾಗುವ ಅನಾಹುತ ಕೃಷಿ, ಕಂದಾಯ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ನಿಭಾಯಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ...
ಮಧ್ಯಪ್ರಾಚ್ಯ ಭಾಗದಲ್ಲಿ ಹಿಡಿತ ಸಾಧಿಸಲು ಅಮೆರಿಕ ಮತ್ತು ಬಲಿಷ್ಠ ಯುರೋಪ್ ರಾಷ್ಟ್ರಗಳು ಸಾಕಿಕೊಂಡಿರುವ ದೇಶವೇ ಇಸ್ರೇಲ್. ಆದರೆ ಅರಬ್ ದೇಶಗಳ ಪೈಕಿ ಇಸ್ರೇಲ್‌ನನ್ನು ಸಮರ್ಥವಾಗಿ ಎದುರು ಹಾಕಿಕೊಂಡಿದ್ದು ಇರಾನ್ ಮಾತ್ರ.
ಯೇಸುವನ್ನು ಕೊಂದ ಅಪವಾದಕ್ಕೆ...
ವಿಮಾನ ದುರಂತಗಳು ಭಾರತದಲ್ಲಿ ಮಾತ್ರವೇ ಸಂಭವಿಸುತ್ತಿಲ್ಲ. ಎಲ್ಲೆಡೆ ಸಂಭವಿಸುತ್ತಿವೆ ಎಂಬುದು ವಾಸ್ತವವೇ ಆಗಿದ್ದರೂ, ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ.
ಯುದ್ಧ, ಸಂಘರ್ಷ, ಬಾಂಬ್-ಕ್ಷಿಪಣಿ ದಾಳಿಗಳಂತಹ ಉದ್ದೇಶಪೂರಿತ ಕೃತ್ಯಗಳ ಹೊರತಾಗಿ...
ಬಾಲ್ಯದಲ್ಲಿಯೇ ಮಕ್ಕಳ ಬದುಕನ್ನು ಕಮರುವಂತೆ ಮಾಡುವ ದುಷ್ಟ ಸಮಾಜವಿದು. ಹೀಗಿರುವಾಗ ಪೋಕ್ಸೊ ಪ್ರಕರಣಗಳಿಂದ ಪಾರಾಗಲು ಮದುವೆ ಎಂಬುದು ದಾಳವಾಗಬಾರದು. ಸಂತ್ರಸ್ತೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸರ್ಕಾರಗಳು ವಹಿಸಬೇಕಿದೆ. ಬಡ ಪೋಷಕರ ನಿರ್ಲಕ್ಷ್ಯದ ಕಾರಣದಿಂದ ಬೇರೆ...
ಈ ಬಾರಿಯಾದರೂ ರಾಜ್ಯ ಸರ್ಕಾರ ಹೇಳಿದ ಸಮಯದೊಳಗೆ ಸಮೀಕ್ಷೆ ಮುಗಿಸಿ, ವರದಿಯನ್ನು ಜಾರಿಗೆ ತರುವ ಬದ್ಧತೆ ತೋರಬೇಕಿದೆ.
1972ರಲ್ಲಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾದರು. ಅರಸು ಅತಿ ಸಣ್ಣ ಸಮುದಾಯದಿಂದ ಬಂದು ಮುಖ್ಯಮಂತ್ರಿಯಾದವರು. ಇವರು...
ನ್ಯಾ. ಶೇಖರ್ ಕುಮಾರ್ ಯಾದವ್ ಮೇಲಿನ ಆಪಾದನೆಗಳ ಕುರಿತು ಆಂತರಿಕ ತನಿಖೆ ನಡೆಸದಂತೆ ರಾಜ್ಯಸಭಾ ಸಚಿವಾಲಯವು ಸುಪ್ರೀಮ್ ಕೋರ್ಟಿಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಪತ್ರ ಬರೆದಿದೆ. ಪರಿಣಾಮವಾಗಿ ಯಾದವ್ ವಿರುದ್ಧ ಆಂತರಿಕ ತನಿಖೆಯನ್ನು...
ಜೀವಸಂಕುಲ ಪೊರೆಯುವ ಪರಿಸರವನ್ನು ಉಳಿಸದಿದ್ದರೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದಿದ್ದರೆ, ನಮ್ಮ ಮುಂದಿನ ಪೀಳಿಗೆ ಸರಾಗವಾಗಿ ಉಸಿರಾಡುವುದಕ್ಕೂ ಕಷ್ಟವಾಗಲಿದೆ ಎಂಬ ಸತ್ಯವನ್ನು ಸರ್ಕಾರ ಮತ್ತು ಜನ ಅರಿಯಬೇಕಿದೆ.
ಜೂನ್ ಬಂತೆಂದರೆ, ಆಳುವ ಸರ್ಕಾರಗಳಿಗೆ ಪರಿಸರ...
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯ. ಇಂತಹ ವಿಚಾರಗಳಲ್ಲಿ ಪದೇಪದೇ ಎನ್‌ಐಎ ದೌಡಾಯಿಸುವುದು, ರಾಷ್ಟ್ರೀಯ ಭದ್ರತೆಯ ಕಾರಣ ಕೊಡುವುದು ಬೇರೆಯ ಅರ್ಥಗಳನ್ನು ಹೊಮ್ಮಿಸುತ್ತವೆ. ರಾಜಕೀಯ ವಾಸನೆ ಬೀರಲು ಆರಂಭವಾಗುತ್ತದೆ.
ರಾಷ್ಟ್ರೀಯ ತನಿಖಾ ಏಜೆನ್ಸಿ...
ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ದೀರ್ಘಕಾಲ ವಿರೋಧಿಸಿದ್ದ, ದ್ವಿಪಕ್ಷೀಯ ಮಾತುಕತೆಯೇ ಇರಬೇಕೆಂದು ದೃಢವಾಗಿ ನಿಂತಿದ್ದ ಭಾರತವು ತನ್ನ ದೃಢತೆಯನ್ನು ಸಡಿಲಿಸಿದೆಯೇ? ಪಾಕಿಸ್ತಾನದೊಂದಿಗೆ ಅಂತಾರಾಷ್ಟ್ರೀಯ ಶಕ್ತಿಗಳು ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿದೆಯೇ?
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು...