ಬೀದರ್ 

ಬೀದರ್ |‌ ಆಟವಾಡಲು ಹೋದ ಬಾಲಕ ನೀರಿನ ಗುಂಡಿಗೆ ಬಿದ್ದು ಸಾವು

ಬೀದರ್‌ ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಜಾಗದಲ್ಲಿ ತೆಗೆದಿರುವ ಗುಂಡಿಗೆ ಬಿದ್ದ ಬಾಲಕನ್ನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ನಡೆದಿದೆ. ಔರಾದ್ ನಿವಾಸಿ ಜಿಶಾನ್...

ಬೀದರ್‌ | ಬಸವಣ್ಣ, ವಚನಗಳು ಉಳಿದರೆ ಕನ್ನಡ ಉಳಿಯುವುದು : ಕುಂ.ವೀರಭದ್ರಪ್ಪ

ಬಸವಣ್ಣ ಹಾಗೂ ಅಕ್ಕ ಮಹಾದೇವಿ ಎಂಬ ಎರಡು ನಾಮವಾಚಕ ಕನ್ನಡದ ಬಹುದೊಡ್ಡ ಶಕ್ತಿಕೇಂದ್ರಗಳು. ಬಸವಣ್ಣ ಮತ್ತು ವಚನ ಸಾಹಿತ್ಯ ಎಲ್ಲಿ ಉಳಿಯುತ್ತದೋ ಅಲ್ಲಿ ಕನ್ನಡ ಉಳಿಯುತ್ತದೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಬೀದರ್...

ಬೀದರ್ | ಔರಾದ್ ಪಟ್ಟಣ ಪಂಚಾಯತಿಗೆ ಅಧ್ಯಕ್ಷ- ಉಪಾಧ್ಯಕ್ಷ ಅವಿರೋಧ ಆಯ್ಕೆ

ಔರಾದ್‌ ಪಟ್ಟಣ ಪಂಚಾಯತಿಯ 10ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸರುಬಾಯಿ ವೈಜಿನಾಥ ಘೂಳೆ ಮತ್ತು ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಅವರು ಅವಿರೋಧವಾಗಿ ಆಯ್ಕೆಯಾದರು. ಒಟ್ಟು 20 ಸದಸ್ಯ ಬಲ ಹೊಂದಿರುವ ಪಟ್ಟಣ...

ಬಸವಕಲ್ಯಾಣ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮನವಿ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಾದ್ಯಂತ ರೈತರು ಬಿತ್ತಿದ ಹೆಸರು, ಉದ್ದು ಕಟಾವಿಗೆ ಬಂದಿದೆ. ಆದರೆ ಖರೀದಿ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ರೈತ ಸಂಘದ...

ಬೀದರ್ | ಭಾಗ್ಯಶ್ರೀ ಕೊಲೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ 18 ವರ್ಷದ ಭಾಗ್ಯಶ್ರಿ ಎಂಬ ಯುವತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಮುಳ್ಳಿನ ಪೊದೆಯಲ್ಲಿ ಎಸೆದ ದುಷ್ಕರ್ಮಿಗಳ ಹೇಯ ಕೃತ್ಯ...

ಬೀದರ್ | ಸೆ.1ರಿಂದ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ರಾಷ್ಟ್ರವ್ಯಾಪಿ ಅಭಿಯಾನ

ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ 'ನೈತಿಕತೆಯೇ ಸ್ವಾತಂತ್ರ್ಯದ ಭರವಸೆ' ಎಂಬ ವಿಚಾರ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಸ್ಕಿಲಾ ಖಾನಮ್ ತಿಳಿಸಿದರು. ಬೀದರ್...

ಬಸವಕಲ್ಯಾಣ | ಯುವತಿಯ ಕೊಲೆ ಪ್ರಕರಣ; ಸಂತ್ರಸ್ತ ಕುಟುಂಬಕ್ಕೆ ಸಚಿವ ಈಶ್ವರ್ ಖಂಡ್ರೆ ಸಾಂತ್ವನ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಕೊಲೆಯಾದ ಯುವತಿ ಭಾಗ್ಯಶ್ರೀ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 'ಯುವತಿಯ ಕುಟುಂಬಸ್ಥರು ಬಡವರಾಗಿದ್ದು ಘಟನೆಯಿಂದ...

ಬೀದರ್ | ಪ್ರೀತಿಸಿದವನಿಂದಲೇ ಯುವತಿಯ ಕೊಲೆ; ಮೂವರ ಬಂಧನ

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯಲ್ಲಿ ಕಳೆದ ವಾರ ನಡೆದಿದ್ದ 18 ವರ್ಷದ ಯುವತಿ ಭಾಗ್ಯಶ್ರೀಯ ಕೊಲೆ ಆರೋಪದ ಸಂಬಂಧ ಪೊಲೀಸ್‌ ಇಲಾಖೆ ತನಿಖೆ ಕೈಗೊಂಡಿದ್ದು, ಯುವತಿಯ ಪ್ರಿಯಕರನೇ ಕೊಲೆ ಮಾಡಿರುವುದು ತಾಂತ್ರಿಕ ಸಾಕ್ಷಾಧಾರಗಳಿಂದ ಖಚಿತವಾಗಿದೆ...

ಬೀದರ್ | ಮೈದುಂಬಿ ಹರಿದ ಮಾಂಜ್ರಾ ನದಿ: ಬೆಳೆ ಜಲಾವೃತ

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಹಳ್ಳ-ಕೊಳ್ಳ, ಕೆರೆಗಳು ಮೈದುಂಬಿ ಹರಿಯುತ್ತಿವೆ. ಮಾಂಜ್ರಾ ನದಿ ಒಳಹರಿವು ಹೆಚ್ಚಿದ್ದು, ನದಿಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ. ನದಿ ಸುತ್ತಲಿನ ಗ್ರಾಮಗಳಾದ ಕೌಠಾ(ಬಿ),...

ಬೀದರ್‌ | ಕಾಣೆಯಾಗಿದ್ದ ಯುವತಿ ಮೂರು ದಿನಗಳ ಬಳಿಕ ಶವವಾಗಿ ಪತ್ತೆ; ಕೊಲೆ ಶಂಕೆ

ಕಾಣೆಯಾಗಿದ್ದ 18 ವರ್ಷದ ಯುವತಿಯೊಬ್ಬರು ಮೂರು ದಿನಗಳ ನಂತರ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾರೆ. ಆದರೆ ಯುವತಿಯ ಪೋಷಕರು...

ಬೀದರ್‌ | ಸೋರುವ ತಗಡಿನ ಸೂರಿನಲ್ಲೇ ವೃದ್ಧ ದಂಪತಿಗಳ ಬದುಕು!

ಬೀದರ್ ಜಿಲ್ಲೆಯ ಔರಾದ್‌ ತಾಲೂಕಿನ ಧೂಪತಮಹಾಗಾಂವ್‌ ಗ್ರಾಮ ಪಂಚಾಯತಿಗೆ ಸೇರಿದ ಮಣಗೆಂಪುರ ಗ್ರಾಮದಲ್ಲಿ ವೃದ್ಧ ದಂಪತಿಗಳಾದ ಶಿವಬಸಪ್ಪ ಪಾಟೀಲ್ (82)‌, ನಿರ್ಮಲಾಬಾಯಿ (77) ಅವರು ತಗಡಿನ ಶೆಡ್ ಇರುವ ಪುಟ್ಟ ಕೋಣೆಯೊಂದರಲ್ಲಿ ಬದುಕು...

ಬೀದರ್‌ : ಸತತ ಮಳೆ : ಜಿಲ್ಲೆಯಲ್ಲಿ ಎಲ್ಲ ಶಾಲೆಗಳಿಗೆ ನಾಳೆ ರಜೆ ಘೋಷಣೆ

ಜಿಲ್ಲೆಯಲ್ಲಿ‌ ಶನಿವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನರನ್ನು ಹೊರಗೆ ಬಿಡದೇ ದೋ ಅಂತ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಕೆಲವೆಡೆ ನದಿ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇನ್ನೊಂದೆಡೆ ಮಳೆಯಿಂದಾಗಿ ವಿವಿಧ ತಾಲೂಕಿನಲ್ಲಿ 38...

ಈ ಹೊತ್ತಿನ ಪ್ರಮುಖ ಸುದ್ದಿ