ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಸುಳಿವು ನೀಡಿದರೆ ಎನ್‌ಐಎ ಇಂದ ಬಹುಮಾನ

ಬಿಜೆಪಿ, ಹಿಂದುತ್ವವಾದಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘೋಷಿಸಿದೆ. ಆರೋಪಿಗಳು ಸುಳಿವು ಸಿಕ್ಕಲ್ಲಿ ಎನ್‌ಐಎಗೆ ಮಾಹಿತಿ ನೀಡುವಂತೆ...

ಮತ್ತೆ ಮುನ್ನೆಲೆಗೆ ಅನ್ಯಮತೀಯ ವ್ಯಾಪಾರ ನಿಷೇಧ; ಕುಕ್ಕೆಯಲ್ಲಿ ಹಿಂದುಯೇತರ ವ್ಯಾಪಾರಿಗಳ ನಿರ್ಬಂಧಕ್ಕೆ ಒತ್ತಾಯ

ದೇವಸ್ಥಾನಗಳ ಬಳಿ ಹಿಂದುಯೇತರ ಸಮುದಾಯಗಳ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ 'ವ್ಯಾಪಾರ ಕೋಮು ರಾಜಕೀಯ' ಮತ್ತೆ ಮುನ್ನೆಲೆಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಳಿ ಹಿಂದುಯೇತರ...

ಪುತ್ತೂರು | ಹೈದರಾಬಾದ್‌ನ ಡಿಆರ್‌ಡಿಒ ಯುವ ವಿಜ್ಞಾನಿ ಅನುಮಾನಾಸ್ಪದ ರೀತಿ ಶವವಾಗಿ ಪತ್ತೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಹೈದರಾಬಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಮಂಗಳೂರು ನಗರಕ್ಕೆ ಸಮೀಪದಲ್ಲಿರುವ ಪುತ್ತೂರು...

ದಕ್ಷಿಣ ಕನ್ನಡ | ಬಾಟೆಲ್ ಎಸೆದಿದ್ದಕ್ಕೆ ಗಲಾಟೆ; ಯುವಕನ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಉಳ್ಳಾಲದ ಬಳಿ ನಡೆದಿದೆ. iಉಳ್ಳ ಸೂರಜ್ ಮತ್ತು ರವಿರಾಜ್ ಆರೋಪಿಗಳು ಎಂದು ಹೇಳಲಾಗಿದೆ. ಆರೋಪಿಗಳು ಶಾಲೆಯ ಮುಂಭಾಗದ ಕಟ್ಟೆಯ ಮೇಲೆ ಕುಳಿತು, ಮದ್ಯ ಸೇವಿಸಿ...

ದಕ್ಷಿಣ ಕನ್ನಡ | ಐಟಿಡಿಪಿ ಇಲಾಖೆಯ ಧೋರಣೆ ಖಂಡಿಸಿ ಕೊರಗ ಸಮುದಾಯದ ಪ್ರತಿಭಟನೆ

ಆದಿವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಐಟಿಡಿಪಿ ಇಲಾಖೆಯು ಜನ ವಿರೋಧಿ ಧೋರಣೆಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿ ಆದಿವಾಸಿ ಕೊರಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಟಿಐಡಿಪಿ)...

ದಕ್ಷಿಣ ಕನ್ನಡ | ಟೋಲ್ ಹೋರಾಟಗಾರರ ವಿರುದ್ಧ ಚಾರ್ಜ್ ಶೀಟ್

ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುರತ್ಕಲ್ ಅಕ್ರಮ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಹೋರಾಟ ಮಾಡಿದ್ದ ಸಾವಿರಾರು ಹೋರಾಟಗಾರ ಪೈಕಿ 101 ಮಂದಿಯ ವಿರುದ್ಧ ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ...

ದಕ್ಷಿಣ ಕನ್ನಡ | ಮಹಾನಗರ ಪಾಲಿಕೆಯ ಈಜು ಕೊಳದಲ್ಲಿ ಮುಳುಗಿ ಯುವಕ ಸಾವು

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಲೇಡಿಹಿಲ್ ಬಳಿ ಇರುವ ಮಂಗಳೂರು ನಗರ ಪಾಲಿಕೆಯ ಈಜು ಕೊಳದಲ್ಲಿ ಈಜುಗಾರಿಕೆ ವೇಳೆ ಹರಿಯಾಣ ಮೂಲದ ಅಭಿಷೇಕ್ ಎಂಬ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ನಗರ ಪಾಲಿಕೆಯ...

ದಕ್ಷಿಣ ಕನ್ನಡ | ಅನೈತಿಕ ಪೊಲೀಸ್‌ಗಿರಿ: ವಿದ್ಯಾರ್ಥಿ-ವಿದ್ಯಾರ್ಥಿನಿಯನ್ನು ತಡೆದು ಹಲ್ಲೆ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಗುಂಪೊಂದು ತಡೆದು ಹಲ್ಲೆ ಮಾಡಿ ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಉಪ್ಪಿನಂಗಡಿ ಬಳಿಯ ಬಾಜಾರು ಎಂಬಲ್ಲಿ ಘಟನೆ ನಡೆದಿದೆ....

ಮಂಗಳೂರು | ವಿಕಲಚೇತನ ಯುವಕನಿಗೆ ಎಲೆಕ್ಟ್ರಿಕ್ ವೀಲ್ ಚೇರ್ ವಿತರಣೆ; ಮಾನವೀಯತೆ ಮೆರೆದ ಎಸ್‌ಡಿಪಿಐ

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ವಿಕಲಚೇತನ ಯುವಕನಿಗೆ ಎಲೆಕ್ಟ್ರಿಕ್ ವೀಲ್ ಚೇರ್ ವಿತರಿಸಿ ಮಾನವೀಯತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕಲಚೇತನ ಯುವಕ ಅಹ್ಮದ್...

ಮಂಗಳೂರು | ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್‌ನಲ್ಲಿ ಅಪಘಾತ; ಗೇಟ್ ತೆರವುಗೊಳಿಸಲು ಆಗ್ರಹ

ವರ್ಷದ ಹಿಂದೆ ಟೋಲ್ ಸಂಗ್ರಹ ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್‌ನ ನಿರುಪಯೋಗಿ ಅವಶೇಷಗಳನ್ನು ತೆರವುಗೊಳಿಸದೆ ಅಪಾಯಕಾರಿಯಾಗಿ ಉಳಿಸಿರುವುದರಿಂದ ಅಪಘಾತಗಳು, ಪ್ರಾಣಹಾನಿ ಸಂಭವಿಸುತ್ತಿದ್ದು, ತೆರವುಗೊಳಿಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಎಚ್ಚರಿಸಿದರೂ ಸ್ಥಳೀಯ...

ದಕ್ಷಿಣ ಕನ್ನಡ | ಪ್ರಧಾನ ಅಂಚೆ ಕಚೇರಿಗೆ ವಿದೇಶಿ ಪ್ರವಾಸಿಗರ ಭೇಟಿ

ಈ ವರ್ಷದ ಮೊದಲ ವಿದೇಶಿ ಕ್ರೂಸ್ ಶುಕ್ರವಾರದಂದು ನವ ಮಂಗಳೂರು ಬಂದರಿಗೆ ಆಗಮಿಸಿದ್ದು, ಅದರಲ್ಲಿದ್ದ ಅನೇಕ ವಿದೇಶಿ ಪ್ರವಾಸಿಗರು ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದ್ದಾರೆ. ಅಂಚೆ ಸೇವೆ ಹಾಗೂ...

ಮಂಗಳೂರು | ಅನಧಿಕೃತ ಕ್ಲಿನಿಕ್, ಲ್ಯಾಬ್‍ಗಳ ಮೇಲೆ ದಾಳಿ ನಡೆಸಿ ಬೀಗ ಜಡಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಮಂಗಳೂರಿನಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಕ್ಲಿನಿಕ್, ಲ್ಯಾಬ್‌ಗಳಿಗೆ ದಾಳಿ ನಡೆಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಜಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X