ಹಾಸನ

ಹಾಸನ | ಮಾಜಿ ಸಚಿವ ಎಚ್.ಡಿ ರೇವಣ್ಣ ಆಪ್ತನ ಹತ್ಯೆ

ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಆಪ್ತರೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ. ಹಾಸನದ ನಾಗತವಳ್ಳಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಕೃತ್ಯ ನಡೆದಿದೆ...

ಹಾಸನ | ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ರಾಜಣ್ಣ

ಸರಿಯಾದ ಸಮಯಕ್ಕೆ ಆಗಮಿಸಿದ್ದ ಹಾಸನ ಉಸ್ತುವಾರಿ ಸಚಿವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಇಂದು ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ...

ಹಾಸನ | ಪ್ರಮುಖ ಸರ್ಕಾರಿ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳದ್ದೇ ಸಿಂಹಪಾಲು

ಶಿಲ್ಪಕಲೆ, ವಾಣಿಜ್ಯ ಬೆಳೆ, ಕೃಷಿ ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ರಾಜಕಾರಣಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯಲ್ಲಿ ಇದೀಗ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವ ಮೂಲಕ ಸಿಂಹಪಾಲು ಪಡೆದಿದ್ದಾರೆ. ಕಂದಾಯ, ಪೊಲೀಸ್, ಕೃಷಿ, ಆರೋಗ್ಯ, ನ್ಯಾಯಾಲಯ,...

ಹಾಸನ | ಕೆರೆ ನೀರು ತರಲು ವಿದ್ಯಾರ್ಥಿಗಳನ್ನು ಕಳಿಸಿದ್ದ ಶಾಲೆ ಸಿಬ್ಬಂದಿ; ಕ್ರಮಕ್ಕೆ ಆಗ್ರಹ

ವಸತಿ ಶಾಲೆಯಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಮೀಪದ ಕೆರೆಯಿಂದ ನೀರು ತರಲು ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು ಕಳುಹಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಆಂದೂರು ಗ್ರಾಮದಲ್ಲಿರುವ ಡಾ. ಬಿ.ಆರ್‌...

ಹಾಸನ | ಮನೆ ಕುಸಿದು ಮಹಿಳೆ ಸಾವು; ಕುಟುಂಬಕ್ಕೆ ಶಾಸಕ ಸಾಂತ್ವನ

ಮೂರು ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮಳೆ-ಗಾಳಿಯಿಂದ ಮನೆಯೊಂದು ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮಕ್ಕ ಭೇಟಿ ನೀಡಿದ್ದ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ...

ಹಾಸನ | ಭಾರೀ ಮಳೆ; ಐಗೂರು ಸೇತುವೆ ಮುಳುಗಡೆ

ನಿರಂತರವಾಗಿ ಸುರಿಯುತ್ತರುವ ಮಳೆಯಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಎಲ್ಲ ಹಳ್ಳ ಕೊಳ್ಳಗಳೂ ತುಂಬಿದ್ದು, ಐಗೂರು ಹೊಳೆಯೂ ಭರ್ತಿಯಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಪರಿಣಾಮ ಸೇತುವೆ ದಾಟಲು ವಾಹನ ಸವಾರರು...

ಹಾಸನ | ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ಮುಂದಾದ ಪ್ರಕರಣ; ಸೂರನ್ನೂ ಕಳೆದುಕೊಳ್ಳುವ ಭೀತಿ

ಶವವನ್ನು ಹೂಳಲು ಜಾಗವಿಲ್ಲದೆ ಮನೆಯಂಗಳದಲ್ಲೇ ಅಂತ್ಯಸಂಸ್ಕಾರ ಮಾಡುವ ಪ್ರಯತ್ನ ನಡೆಸಿದ್ದ ಕುಟುಂಬವೊಂದು ತಾವು ವಾಸವಿರುವ ಸ್ಥಳವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಂಭುನಾಥಪುರದ ಗಿಡ್ಡಯ್ಯ ಅವರು ಶನಿವಾರ ಮೃತಪಟ್ಟಿದ್ದರು. ಅವರ...

ಹಾಸನ | ಮನೆ ಮುಂದೆಯೇ ಶವ ಹೂಳಲು ಮುಂದಾದ ದಲಿತ ಕುಟುಂಬ

ಮೃತದೇಹ ಹೂಳಲು ಜಾಗ ಇಲ್ಲವೆಂಬ ಕಾರಣಕ್ಕೆ ಕುಟುಂಬವೊಂದು ಮನೆ ಮುಂದೆಯೇ ಶವ ಹೂಳಲು ಮುಂದಾದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಂಭುನಾಥಪುರದಲ್ಲಿ ನಡೆದಿದೆ. ಗ್ರಾಮದ ಗಿಡ್ಡಯ್ಯ (54) ಎಂಬುವರು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದರು....

ಹಾಸನ | ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ಮಾತ್ರವಲ್ಲ, ನೂರಾರು ಪ್ರಕರಣಗಳು ನಡೆದಿವೆ: ಪರಶು

ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದೇ ನಡೆದಿಲ್ಲ. ಸೌಜನ್ಯ ಪ್ರಕರಣಕ್ಕೂ ಮುನ್ನ ಸುಮಾರು 460 ಕೊಲೆ ಪ್ರಕರಣಗಳು ನಡೆದಿವೆ. ಆ ಸಾವುಗಳಲ್ಲಿ 90 ಮಂದಿ ಅಪ್ರಾಪ್ತರು ಕೊಲೆಯಾಗಿದ್ದಾರೆ. ಹಲವಾರು ಹೆಣ್ಣು ಮಕ್ಕಳು...

ಹಾಸನ | ಭ್ರಷ್ಟಾಚಾರದ ಅಡ್ಡೆಯಾಗಿದೆ ತಾಲೂಕು ಕಚೇರಿ; ಸ್ಥಳೀಯರ ಆರೋಪ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಲಂಚ ಕೊಡಲಿಲ್ಲವೆಂದರೆ, ಒಂದೆರಡು ದಿನ ಆಗುವ ಕೆಲಸಗಳಿಗೆ ತಿಂಗಳಾದ್ಯಂತ ಕಚೇರಿಗೆ ಅಲೆಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಕಚೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆಗಳಿಲ್ಲ....

ಹಾಸನ | ರಕ್ಷಿತಾರಣ್ಯ ವ್ಯಾಪ್ತಿಯಲ್ಲಿದ್ದ ರೆಸಾರ್ಟ್‌ಗೆ ಬೀಗ ಜಡಿದ ಅರಣ್ಯ ಇಲಾಖೆ

ಹಾಸನ ಜಿಲ್ಲೆಯ ಸಕಲೇಶಪರ ವ್ಯಾಪ್ತಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ವನಗೂರು ಸಮೀಪ ರೆಸಾರ್ಟ್‌ವೊಂದಕ್ಕೆ ಬೀಗ ಜಡಿದಿದ್ದ ಅಧಿಕಾರಿಗಳು, ಇದೀಗ ಅಚ್ಚನಹಳ್ಳಿ ಬಳಿಕ ರೆಸಾರ್ಟ್‌ಗೆ ಬೀಗ ಹಾಕಿದ್ದಾರೆ. ಮಂಗಳವಾರ ಬೆಂಗಳೂರಿನಿಂದ...

ಹಾಸನ | ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಶ್ರಮಿಸಲು ನ್ಯಾಯಾಧೀಶ ಇನವಳ್ಳಿ ಸೂಚನೆ

ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಎಲ್ಲ ಇಲಾಖೆಗಳು ಶ್ರಮಿಸಬೇಕು ಎಂದು ಹಾಸನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಟಿ ಎನ್ ಇನವಳ್ಳಿ ಸೂಚಿಸಿದ್ದಾರೆ. ಪೋಕ್ಸೊ ಕಾಯಿದೆ ಅನುಷ್ಠಾನ, ಮಕ್ಕಳ ಮೇಲಿನ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X