ಮೈಸೂರು

ಮೈಸೂರು | ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೈಸೂರು ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ...

ಮೈಸೂರು | ಆರ್ಥ್ರೋಸ್ಕೋಪಿಕ್ ಕಾರ್ಯವಿಧಾನ; ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ

ಕ್ರೀಡೆಗೆ ಸಂಬಂಧಿಸಿದ ಆಘಾತದಿಂದ ಬಳಲುತ್ತಿದ್ದ ಯುವ ರೋಗಿಯ ಮೂಳೆಮುರಿತ ರೋಗವನ್ನು ಗುಣಪಡಿಸಲು ಮೈಸೂರಿ ನ ಖಾಸಗಿ ಆಸ್ಪತ್ರೆಯ ತಜ್ಞರು ಸಿಂಗಲ್ ಸ್ಟೇಜ್ ಆರ್ಥ್ರೋಸ್ಕೋಪಿಕ್ ಕಾರ್ಟಿಲೆಜ್(ಕೀಲು ಶಸ್ತ್ರಚಿಕಿತ್ಸೆ) ಇಂಪ್ಲಾಂಟೇಶನ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಮಹಿಳೆ(25)ಯೊಬ್ಬರು ಟೆನಿಸ್...

ಗದಗ | ಸ್ವಂತ ಮಗನನ್ನು ಮೂರು ಲಕ್ಷ ರೂ.ಗೆ ಮಾರಿದ ತಂದೆ; ಕಾರ್ಮಿಕ ಇಲಾಖೆಯಿಂದ ಬಾಲಕನ ರಕ್ಷಣೆ

ಗದಗ ಜಿಲ್ಲೆಯ ತಂದೆಯೊಬ್ಬ ತನ್ನ ಸ್ವಂತ ಮಗನನ್ನು ಮೂರು ಲಕ್ಷ ರೂ.ಗೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಮಹಿಳೆಗೆ ಮಾರಾಟಮಾಡಿದ್ದಾರೆ. ಮಾರಾಟವಾಗಿದ್ದ ಒಂಬತ್ತು ವರ್ಷದ ಬಾಲಕನ್ನು ಕೆ.ಆ‌ರ್.ನಗರ ತಾಲೂಕು ಕಾರ್ಮಿಕ...

ಮೈಸೂರು | 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ಯೋಜನೆ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಕೊಂಡಿದ್ದು, ಜ. 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. 2018ರಲ್ಲಿ ಶಾಸಕರಾಗಿದ್ದ ಕೆ. ವೆಂಕಟೇಶ್...

ಮೈಸೂರು | ಹುಲಿ ಪತ್ತೆಗೆ ನಿರಂತರ ಕಾರ್ಯಾಚರಣೆ; ಒತ್ತಡಕ್ಕೆ ಸಿಲುಕಿದ ಅರಣ್ಯ ಸಿಬ್ಬಂದಿ

ಮೈಸೂರು ಮತ್ತು ಮಂಡ್ಯದಲ್ಲಿ ಆನೆಗಳು, ಚಿರತೆಗಳು ಮತ್ತು ಹುಲಿಗಳ ಹಾವಳಿ ಹೆಚ್ಚಾಗಿದೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಲು ಕಳೆದ ಎರಡು ತಿಂಗಳಲ್ಲಿ ನಡೆದ ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಯಿಂದಾಗಿ ಅರಣ್ಯ ಅಧಿಕಾರಿಗಳು ಸವಾಲಿನ ಪರಿಸ್ಥಿತಿ ಎದುರಿಸಿದ್ದಾರೆ. ಮೈಸೂರು...

ಮೈಸೂರು | ಸ್ವಚ್ಛತೆಗೆ ಆದ್ಯತೆ ನೀಡಿ: ಎನ್‌ಜಿಟಿ ಅಧ್ಯಕ್ಷ

ಮೈಸೂರು ಜಿಲ್ಲೆಯಾದ್ಯಂತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ...

ಮೈಸೂರು | ಡಾ. ವಿಜಯ ದಬ್ಬೆ ಸ್ಮರಣಾರ್ಥ ರಾಜ್ಯಮಟ್ಟದ ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆ

ಮೈಸೂರಿನ ಸಮತಾ ಅಧ್ಯಯನ ಕೇಂದ್ರವು ಡಾ. ವಿಜಯ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ ವಿದ್ಯಾರ್ಥಿ ಮತ್ತು ಯುವಜನರಿಗೆ ರಾಜ್ಯಮಟ್ಟದ ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಕೇಂದ್ರವು ಯುವ ಪ್ರತಿಭೆಗಳನ್ನು...

ಮೈಸೂರು | ಅಕ್ರಮವಾಗಿ ಸಾಗಿಸುತ್ತಿದ್ದ 12 ಟನ್ ಅನ್ನಭಾಗ್ಯ ಅಕ್ಕಿ ವಶ

ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಬಿಡುಗಡೆ ಮಾಡಿದ್ದ 12 ಟನ್ ಅಕ್ಕಿಯನ್ನು ಮೈಸೂರು ನಗರ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಸಿದ್ದಲಿಂಗಪುರ ಬಳಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಅಕ್ಕಿಯನ್ನು ಎಸಿಪಿ ಎಸ್ ಎನ್ ಸಂದೇಶ್...

ಮೈಸೂರು | ಹಲವು ಧರ್ಮಗಳ ಜನರಿಂದ ಸೌಹಾರ್ದ ಸಂಕ್ರಾಂತಿ ಆಚರಣೆ

ರಾಜಕೀಯ ಕಾರಣಗಳಿಗಾಗಿ ಜನರು ಧಾರ್ಮಿಕ ಮತ್ತು ಜಾತಿ ಆಧಾರದ ಮೇಲೆ ವಿಭಜಿತರಾಗಿದ್ದಾರೆ. ಸಮಾಜವನ್ನು ಒಗ್ಗೂಡಿಸಲು ಎಲ್ಲ ಧರ್ಮಗಳ ಜನರನ್ನು ಒಳಗೊಳ್ಳುವ ಮೂಲಕ ಎಲ್ಲ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವ ಅಗತ್ಯವಿದೆ ಎಂದು ರಂಗಕರ್ಮಿ ಸಿ...

ಮೈಸೂರು | ಫ್ಲೆಕ್ಸ್ ಅಳವಡಿಕೆಗೆ ನಿಷೇಧ; ಆದೇಶ ಉಲ್ಲಂಘನೆ ಆರೋಪ

ಕರ್ನಾಟಕ ಹೈಕೋರ್ಟ್ ಫ್ಲೆಕ್ಸ್‌ ಬಳಕೆಯನ್ನು ನಿಷೇಧಿಸಿದ್ದರೂ, ಪಾರಂಪರಿಕ ಸ್ಥಳಗಳಿಗೆ ಹೆಸರುವಾಸಿಯಾದ ಮೈಸೂರಿನಲ್ಲಿ ಫ್ಲೆಕ್ಸ್ ಬಳಕೆಯ ನಿರ್ದೇಶನವನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ. ನ್ಯಾಯಾಲಯ ಮತ್ತು ಮೈಸೂರು ಮಹಾನಗರ ಪಾಲಿಕೆ(ಎಂಸಿಸಿ) ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್‌ಗಳ ಅಳವಡಿಕೆಯನ್ನು ಸಂಪೂರ್ಣವಾಗಿ...

ಮೈಸೂರು | ಸಿದ್ದರಾಮಯ್ಯ ಬಗ್ಗೆ ಅವಹೇಳನ; ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಮು ನೇತೃತ್ವದಲ್ಲಿ ಕಾರ್ಯಕರ್ತರು...

ಮೈಸೂರು | ಮನೆ ಬದಲಿಸಿದಾಗ ‘ಗೃಹಜ್ಯೋತಿ’ ವಿವರ ನವೀಕರಿಸಲು ಸಾಧ್ಯವಾಗುತ್ತಿಲ್ಲ; ಬಾಡಿಗೆದಾರರ ಅಳಲು

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅಡಿ ವೈಯಕ್ತಿಕ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಒದಗಿಸುತ್ತಿದೆ. ಈ ಯೋಜನೆ ಪ್ರಾರಂಭವಾಗಿ ಸುಮಾರು ಆರು ತಿಂಗಳು ಕಳೆದರೂ, ಬಾಡಿಗೆದಾರರು ಮನೆಗಳನ್ನು ಸ್ಥಳಾಂತರಿಸುವಾಗ ಸಂಪರ್ಕ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X