ಜಿಲ್ಲೆಗಳು

ಮುಧೋಳ | ರಂಜಾನ್ ಹಬ್ಬ ಸಾಮರಸ್ಯಕ್ಕೆ ಮಾದರಿಯಾಗಿದೆ: ಸಚಿವ ಆರ್ ಬಿ ತಿಮ್ಮಾಪುರ

ರಂಜಾನ್ ಹಬ್ಬವನ್ನು ಎಲ್ಲ ಧರ್ಮದವರೂ ಭಾವೈಕ್ಯತೆಯೊಂದಿಗೆ ಆಚರಿಸುವುದು ಸಮಾಜದ ಸಾಮರಸ್ಯಕ್ಕೆ ಮಾದರಿಯಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅಭಿಪ್ರಾಯಪಟ್ಟರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ...

ಉಡುಪಿ | ಹಿಂದೂ ಪದ್ಧತಿಯೇ ಜಾತೀಯತೆ, ಅಸ್ಪೃಶ್ಯತೆಗೆ ಮೂಲ: ಶ್ಯಾಮರಾಜ್ ಬಿರ್ತಿ

ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯೇ ಜಾತೀಯತೆಗೆ ಮೂಲವಾಗಿದ್ದು, ಇದೇ ವ್ಯವಸ್ಥೆ ಅಸ್ಪೃಶ್ಯತೆಗೆ ಕಾರಣವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ...

ಉಡುಪಿ | ಕಟ್ಟಡ ಕಾರ್ಮಿಕರ ನಿಧಿ ಬೇರೆ ಯೋಜನೆಗಳಿಗೆ ಬಳಕೆಗೆ ಸಿಐಟಿಯು ವಿರೋಧ, ಶಾಸಕರಿಗೆ ಮನವಿ

2026-27ರ ರಾಜ್ಯ ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯನ್ನು ಇತರ ಯೋಜನೆಗಳಿಗೆ ಬಳಸುತ್ತಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ),...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿರುವ ಹೆಚ್ಚಿನ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದು ಅಮೃತ...

ದಾವಣಗೆರೆ | ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಬಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ಅರವತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಇಂದು ಪವಿತ್ರ ರಂಜಾನ್ ಮಾಸದ...

ಗದಗ | ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿಗೆ  ಸಿದ್ಧತೆ

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸೋಮವಾರ ಗದಗ ಪಟ್ಟಣದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಜಿಲ್ಲಾಧಿಕಾರಿ ಸಿ.ಎನ್....

ಯಾದಗಿರಿ | ಊರಿಗೆ ತೆರಳಲು ವಾಹನ ಸಿಕ್ಕಿಲ್ಲವೆಂದು ಸಾರಿಗೆ ಬಸ್ ಕದ್ದೊಯ್ದ ಚಾಲಕ!

ಊರಿಗೆ ಹೋಗಲು ವಾಹನ ಸಿಗದಿದ್ದಕ್ಕೆ ಸೇವೆಯಿಂದ ವಜಾಗೊಂಡ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಬಸ್‌ ನಿಲ್ದಾಣದಿಂದ ತನ್ನೂರಿಗೆ ಬಸ್ ಕದ್ದೊಯ್ದ ಘಟನೆ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಮಾ.19ರಂದು‌ ಕಾರ್ಯಾಚರಣೆ ನಡೆಸಿ...

ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ

ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ದಾವಣಗೆರೆ ನಗರದಲ್ಲಿ ಪ್ರಾರ್ಥನೆ ಸಲ್ಲಿಸಲು ಮಕ್ಕಳು, ಬಂಧು-ಬಾಂಧವರೊಂದಿಗೆ...

ಗದಗ | ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಅಪಘಾತ; ಸಾರಿಗೆ ಬಸ್ ಹರಿದು ಮಹಿಳೆ ಸಾವು

ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್‌ ಡಿಕ್ಕಿ ಹೊಡೆದು ಗಾಯಗೊಂಡಿದ್ದ 48 ವರ್ಷದ ಚೆನ್ನಮ್ಮ ಹಡಪದ ಎಂಬ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೃತ ಮಹಿಳೆ ಹಾವೇರಿ...

ದಾಂಡೇಲಿ | ಬಡ ರೋಗಿಗಳಿಂದ ಹಣ ವಸೂಲಿ ಆರೋಪ: ವೈದ್ಯರಿಗೆ ಶಾಸಕ ಆರ್.ವಿ. ದೇಶಪಾಂಡೆ ಖಡಕ್ ಸೂಚನೆ

ದಾಂಡೇಲಿ: "ನಾವು ಹಣ ಕೇಳುವುದಿಲ್ಲ, ಅವರೇ ಕೊಟ್ಟರೆ ತೆಗೆದುಕೊಳ್ಳುತ್ತೇವೆ" ಎಂಬ ವೈದ್ಯರ ಉಡಾಫೆ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು, ಬಡ ರೋಗಿಗಳಿಂದ ಹಣ ವಸೂಲಿ ಮಾಡುವ...

ಬೆಳಗಾವಿ | ಸಾಲಾಪೂರ ಶ್ರೀ ಕರಿಸಿದ್ದೇಶ್ವರ ಜಾತ್ರೆ: ನಾಳೆ ಅಡ್ಡಪಲ್ಲಕ್ಕಿ, ಸೋಮವಾರ ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ

ರಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಕರಿಸಿದ್ದೇಶ್ವರ ಜಾತ್ರೆ ಭಕ್ತರ ಸಂಭ್ರಮದಿಂದ ಕಂಗೊಳಿಸುತ್ತಿದೆ. ರವಿವಾರ ಜಾತ್ರೆಯ ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ....

ಶಿರಸಿ | ಅಘನಾಶಿನಿ-ವೇದಾವತಿ ನದಿ ಜೋಡಣೆ: ಪಶ್ಚಿಮ ಘಟ್ಟ ರಕ್ಷಣೆಗೆ ಮಾರ್ಗಸೂಚಿ ಪಾಲಿಸಲು ಯುನೆಸ್ಕೋ ಸೂಚನೆ

ಶಿರಸಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ರಸ್ತಾವಿತ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದ ಮಹತ್ವದ ಬೆಳವಣಿಗೆಯಾಗಿದೆ. ವಿಶ್ವ ಪರಂಪರೆಯ ಸಮಾವೇಶದ ನಿಬಂಧನೆ ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ...

ಈ ಹೊತ್ತಿನ ಪ್ರಮುಖ ಸುದ್ದಿ