ಶಿವಮೊಗ್ಗ

ಭದ್ರಾವತಿ | ಹೊಸಮನೆ ಪೊಲೀಸರಿಂದ ರೌಡಿಶೀಟರ್‌ ಕಾಲಿಗೆ ಗುಂಡೇಟು

‌ರವಿ ಅಲಿಯಾಸ್‌ ಗುಂಡ ಎಂಬ ರೌಡಿಶೀಟರ್‌ ಮೇಲೆ ಭದ್ರಾವತಿಯ ಹೊಸಮನೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣವೊಂದರಲ್ಲಿ ರವಿಯನ್ನು ಬಂಧಿಸಲು ಮುಂದಾದಾಗ ಆರೋಪಿಯೇ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೊಸಮನೆ...

ಶಿವಮೊಗ್ಗ | ಇನ್ಶೂರೆನ್ಸ್ ಪಾವತಿಸದೆ ಓಡಿಸುತ್ತಿದ್ದ ಖಾಸಗಿ ಬಸ್ ಮಾಲೀಕನಿಗೆ ದಂಡ

ಪುಟ್ಟ ಮಕ್ಕಳನ್ನು ಬೈಕ್‌ನಲ್ಲಿ ಕರದೊಯ್ಯುವಾಗ ಹೆಲ್ಮೆಟ್‌ ಬಳಸಿ ಎನ್ನುವ ಅಭಿಯಾನವನ್ನು ಆರಂಭಿಸಿರುವ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಇನ್ನೊಂದೆಡೆ ಇನ್ಶೂರೆನ್ಸ್ ಇಲ್ಲದೆ ಬಸ್‌ ಓಡಿಸುತ್ತಿರುವುದನ್ನು ಪತ್ತೆ ಮಾಡಿ ₹4500 ಫೈನ್‌ ಹಾಕಿದ್ದಾರೆ. ಫೆ.19ರಂದು ಪಶ್ಚಿಮ ಸಂಚಾರಿ...

ಭದ್ರಾವತಿ | ಫೆ.21 ರಂದು ಬೃಹತ್ ಪ್ರತಿಭಟನೆ: ರೈತ ಮುಖಂಡ ಬಸವರಾಜಪ್ಪ ಕರೆ

ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಬಗರ್ ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತಾರಕ್ಷಣಾ ಸಮಿತಿ ವತಿಯಿಂದ ನಾಳೆ (ಫೆ.21) ಭದ್ರಾವತಿಯಲ್ಲಿ ಬೃಹತ್...

ಶಿವಮೊಗ್ಗ | ಪುಟಾಣಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ಟ್ರಾಫಿಕ್ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

ವಯಸ್ಕರಂತೆ ಪುಟಾಣಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯಗೊಳಿಸುವ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ಅಪಘಾತಗಳನ್ನು ತಡೆಗಟ್ಟುವ ಹಾಗೂ ಅಪಘಾತದಿಂದ ಚಿಕ್ಕ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಂಚಾರಿ ಪೊಲೀಸರು ಇಟ್ಟಿರುವ...

ಶಿವಮೊಗ್ಗ | ಫೆ.22ರಿಂದ ʼಶ್ರೀಕಾಂತಣ್ಣ ಕಪ್ʼ ಕ್ರಿಕೆಟ್‌ ಪಂದ್ಯಾವಳಿ

ಶಿವಮೊಗ್ಗ ನಗರದ ಎಟಿಎನ್‌ಸಿ ಕಾಲೇಜು ಕ್ರೀಡಾಂಗಣದಲ್ಲಿ ಈ ಬಾರಿ ʼಶ್ರೀಕಾಂತಣ್ಣ ಕಪ್ ಸೀಸನ್-2ʼ ಕ್ರಿಕೆಟ್‌ ಪಂದ್ಯಾವಳಿಯನ್ನು ಇದೇ ಫೆ.22 ಶನಿವಾರ ಹಾಗೂ ಫೆ.23ರ ಭಾನುವಾರದಂದು ಆಯೋಜಿಸಲಾಗಿದೆ. ಪಂದ್ಯಾವಳಿ ಅಂಗವಾಗಿ ನಗರದ ಬಿ ಎಚ್ ರಸ್ತೆಯ...

ಸಾಗರ | ಅಧಿಕಾರ ಕೊಟ್ಟ ಜನರ ಋಣ ತೀರಿಸುತ್ತೇನೆ: ಶಾಸಕ ಗೋಪಾಲಕೃಷ್ಣ ಬೇಳೂರು

ನನಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುತ್ತೇನೆ, ಅದು ನನ್ನ ಕರ್ತವ್ಯ ಕೂಡ ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು....

ಎನ್‌ಎಸ್‌ಯುಐ ಸಾಗರ ತಾಲೂಕು ಘಟಕದ ಅಧ್ಯಕ್ಷರಾಗಿ ಸಿ ಎಂ ಚಿನ್ಮಯ್ ನೇಮಕ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಘಟಕದ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಸಿ ಎಂ ಚಿನ್ಮಯ್ ಆಯ್ಕೆಯಾಗಿದ್ದಾರೆ. ಸಾಗರ ತಾಲೂಕಿನ ಶಾಸಕ ಗೋಪಾಲ್ ಕೃಷ್ಣ ಬೇಳೂರು ಶಿಫಾರಸಿನ ಮೇರೆಗೆ ಸಿ ಎಂ ಚಿನ್ಮಯ್ ಅವರಿಗೆ...

ಶಿವಮೊಗ್ಗ | ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನ

ಶಿವಮೊಗ್ಗ ನಗರದ ಹೋಟೆಲ್‌ವೊಂದರಲ್ಲಿ ಪರಿಚಯಸ್ಥ ಹುಡುಗಿಯೊಂದಿಗೆ ಊಟ ಮಾಡುವ ವೇಳೆ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಪಡ್ಡೆ ಹುಡುಗರ ಗುಂಪೊಂದು ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನವಾಗಿದೆ. ಹೋಟೆಲ್‌ನಲ್ಲಿ ಕುಳಿತಿದ್ದ ಯುವಕ-ಯುವತಿಯ...

ತೀರ್ಥಹಳ್ಳಿ | ಭೀಕರ ಅಪಘಾತ; ಕಾರಿನಡಿ ಸಿಲುಕಿ ಮಹಿಳೆ ಸಾವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಸಂಕದ ಹೊಳೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಕಾರಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮೃತ ಮಹಿಳೆ ತೀರ್ಥಹಳ್ಳಿ ಸ್ಟಾರ್...

ಶಿವಮೊಗ್ಗ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ,...

ಭದ್ರಾವತಿ | ಹಾಡಹಗಲೇ ಲಾಂಗು ಮಚ್ಚಿನಿಂದ ಹೊಡೆದಾಟದ; ವಿಡಿಯೊ ವೈರಲ್

ಭದ್ರಾವತಿಯಲ್ಲಿ ಹಾಡಹಗಲೇ ಲಾಂಗು ಮಚ್ಚಿನಿಂದ ಹೊಡೆದಾಡಿದ ವಿಡಿಯೊ ವೈರಲ್ ಆಗಿದೆ. ಇತ್ತೀಚೆಗೆ ಭದ್ರಾವತಿ ನಗರದ ಭದ್ರಾ ನದಿಯಲ್ಲಿ ನಡೆಯುತ್ತಿದ್ದ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಗೆ, ದಂಧೆಕೋರರು ಜೀವ ಬೆದರಿಕೆ...

ಶಿವಮೊಗ್ಗ | ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ; ಥಳಿತ

ಶಿವಮೊಗ್ಗದ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದಾಗ ಈ ಘಟನೆ...

ಈ ಹೊತ್ತಿನ ಪ್ರಮುಖ ಸುದ್ದಿ