ಶಿವಮೊಗ್ಗ | ಕೌಟುಂಬಿಕ ಕಲಹ: 3 ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ, ಇಬ್ಬರು ಮಕ್ಕಳು ನೀರು ಪಾಲು

Date:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

- Advertisement -

ಶಿವಮೊಗ್ಗದ ಅರಕೆರೆಯ ದೇವಾಲಯ ಪಕ್ಕದ ರೈಲ್ವೆ ಸೇತುವೆ ಬಳಿ ತಾಯಿ ತನ್ನ ಮೂವರು ಮಕ್ಕಳೂಂದಿಗೆ ನದಿಗೆ ಹಾರಿದ್ದು, ಇದನ್ನು ಗಮನಿಸಿದ ನವೀನ್ ಮತ್ತು ದಾದಪೀರ್ ಎಂಬ ಯುವಕರು ತಮ್ಮ‌ ಜೀವದ ಹಂಗು ತೊರೆದು ನದಿಗೆ ಹಾರಿ, ತಾಯಿ ಹಾಗೂ 11 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ‌. ಆದರೆ, 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿಯಲ್ಲಿ ತೇಲಿ ಹೋಗಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸ್ಥಳಕ್ಕೆ ಕೋಟೆ ಪೊಲೀಸರು, ಅಗ್ನಿಶಾಮಕ ದಳದವರು ಆಗಮಿಸಿ ಶೋಧ ನಡೆಸಲು ಮುಂದಾದರು. ನದಿಯಲ್ಲಿ‌ ನೀರಿನ ಹರಿವು ಹೆಚ್ಚಾದ ಕಾರಣದಿಂದ ಶೋಧ ಕಾರ್ಯ ನಡೆಸಲಾಗದೇ ವಾಪಸಾಗಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ನದಿಗೆ ಹಾರಿದ್ದು, ತಾಯಿ ಹಾಗೂ ಒಂದು ಮಗುವನ್ನು ರಕ್ಷಿಸಲಾಗಿದೆ. ರಕ್ಷಣೆಗೆ ಒಳಗಾದ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಹಾಲಿ ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನೆಲೆಸಿದ್ದರು ಎಂಬುವುದು ಪ್ರಾಥಮಿಕ‌ ಮಾಹಿತಿಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಎಸ್‌ಪಿ ಕಾರ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

”ರೈಲ್ವೆ ಬ್ರಿಡ್ಜ್​ನಿಂದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಹಿಡಿದುಕೊಂಡು ನದಿಗೆ ಹಾರಿದ ದೃಶ್ಯ ಕಂಡ ಕೂಡಲೇ ನಾವೂ ಕೂಡ ನದಿಗೆ ಹಾರಿ ತಾಯಿ ಮತ್ತು ಒಂದು ಮಗುವನ್ನು ಕಾಪಾಡಿದ್ದೇವೆ. ಆದರೆ, ಇಬ್ಬರು ಮಕ್ಕಳನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಏಕೆ ನದಿಗೆ ಹಾರಿದರೆಂಬ ಕಾರಣ ತಿಳಿದಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ. ತಾಯಿ-ಮಗುವನ್ನು ಸೇಫ್ ಮಾಡಿದ್ದೇವೆ. ಮಹಿಳೆ ಚಿತ್ರದುರ್ಗದವರು ಎಂಬ ಮಾಹಿತಿ ಇದೆ” ಎಂದು ತಾಯಿ ಮತ್ತು ಮಗವನ್ನು ರಕ್ಷಿಸಿದ ದಾದಾಪೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ‌

ಕೌಟುಂಬಿಕ ಕಲಹಗಳು ಕೇವಲ ಎರಡು ವ್ಯಕ್ತಿಗಳ ನಡುವಿನ ವೈಯಕ್ತಿಕ ಸಮಸ್ಯೆಯಲ್ಲ; ಅವು ಸಮಾಜದ ಮೂಲ ಘಟಕವಾದ ಕುಟುಂಬವನ್ನು ನಾಶಮಾಡುವ, ಮಕ್ಕಳು ಮತ್ತು ಮಹಿಳೆಯರನ್ನು ದೈಹಿಕವಾಗಿ ಮಾನಸಿಕವಾಗಿ ಘಾಸಿಗೊಳಿಸುವ ಗಂಭೀರ ಸಾಮಾಜಿಕ ಕಿರುಕುಳ. ಮನೆಯೊಳಗೆ ನಡೆಯುವ ಜಗಳ, ಹಿಂಸೆ, ಅವಮಾನ ಮತ್ತು ನಿರ್ಲಕ್ಷ್ಯಗಳಿಂದ ಮಕ್ಕಳು ಭಯ, ಅಸುರಕ್ಷತೆ ಹಾಗೂ ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ. ಮಹಿಳೆಯರು ದೈಹಿಕ, ಮಾನಸಿಕ, ಆರ್ಥಿಕ ಹಿಂಸೆಗೆ ಬಲಿಯಾಗಿ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಪರಿಸ್ಥಿತಿ ಮುಂದಿನ ಪೀಳಿಗೆಯನ್ನೂ ಕೂಡ ದುರ್ಬಲಗೊಳಿಸುತ್ತದೆ.

ಇದನ್ನೂ ಓದಿದ್ದೀರಾ? ತುಂಗಭದ್ರಾ | ಆಂಧ್ರ ರೈತರೊಂದಿಗೆ ನೀರಿಗಾಗಿ ಎಂದಿಗೂ ಜಗಳವಾಡಿಲ್ಲ: ಬಳ್ಳಾರಿ ರೈತರು

ಆದ್ದರಿಂದ, ಕುಟುಂಬದಲ್ಲಿ ಪರಸ್ಪರ ಗೌರವ, ಸಂವಾದ ಹಾಗೂ ಸಹಾನುಭೂತಿ ಬೆಳೆಸುವುದು ಅತ್ಯಗತ್ಯ. ಸಮಾಜ, ಸರ್ಕಾರ, ಶಾಲೆಗಳು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕು. ಕಾನೂನು ರಕ್ಷಣೆ, ಸಮಾಲೋಚನೆ, ಜಾಗೃತಿ ಅಭಿಯಾನಗಳು, ಆರ್ಥಿಕ ಸ್ವಾವಲಂಬನೆಗಳ ಮೂಲಕ ಕೌಟುಂಬಿಕ ಕಲಹಗಳನ್ನು ಕಡಿಮೆ ಮಾಡಬಹುದು.

ಪ್ರತಿಯೊಬ್ಬರೂ ನೆನಪಿಡಬೇಕಾದ ಸತ್ಯವೆಂದರೆ ಮನೆಯಲ್ಲಿ ಶಾಂತಿಯಿದ್ದರೆ ಮಾತ್ರ ಸಮಾಜ ಶಾಂತವಾಗಿರುತ್ತದೆ. ಮಕ್ಕಳು ಮತ್ತು ಮಹಿಳೆಯರು ಬಲಿಯಾಗದಂತೆ ಕುಟುಂಬಗಳನ್ನು ಬಲಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಆಗ ಮಾತ್ರ ನಾವು ನಿಜವಾದ ಸುಸಂಸ್ಕೃತ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಬಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು 

ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...