ದೇಶ

ಮೋದಿ ಯಾಕೆ ಮೀನು, ಮಾಂಸದ ಬಗ್ಗೆ ಮಾತನಾಡುತ್ತಾರೆ?; ಅವರ 10 ವರ್ಷಗಳ ಸಾಧನೆ ಏನು ಗೊತ್ತೇ?

ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಅಬ್ಬರ ಭಾಷಣ ಮಾಡುತ್ತಿದ್ದಾರೆ. 'ಅಬ್‌ ಕಿ ಬಾರ್ - ಚಾರ್ ಸೊ ಪಾರ್' ಎಂದು ಹೇಳುತ್ತಿದ್ದಾರೆ. ಅಲ್ಲದೆ, ತಮ್ಮ ಭಾಷಣಗಳಲ್ಲಿ ವಿಪಕ್ಷಗಳ ನಾಯಕರು ಮಾಂಸ...

ಮುಂಬೈ | ಬಾಂದ್ರಾದ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ

ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ಸ್ಥಳದಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಬಲರಾಮ ಕಟ್ಟಡದ ಬಳಿಯಿರುವ ಬಿಕೆಸಿಯಲ್ಲಿರುವ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೌಟುಂಬಿಕ ನ್ಯಾಯಾಲಯದ...

ಬಿಜೆಪಿ 370 ಸ್ಥಾನ ಗೆಲ್ಲುತ್ತದೆ ಎಂಬುದು ‘ಚಂದಮಾನನ ಕತೆ’; ವಾಸ್ತವಾಂಶ ಇಲ್ಲಿದೆ! 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆಂದು ಬಿಜೆಪಿ ಅಬ್ಬರ ಭಾಷಣ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಹೋದಲ್ಲೆಲ್ಲ 'ಅಬ್‌ ಕೀ ಬಾರ್ - ಚಾರ್‌ ಸೋ ಪಾರ್' ಎಂದು ಹೇಳುತ್ತಲೇ...

ಅಬಕಾರಿ ಪ್ರಕರಣ | ಇಡಿ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ; ಏ.15ರಂದು ವಿಚಾರಣೆ

ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಇಡಿ ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.15) ವಿಚಾರಣೆ ನಡೆಸಲಿದೆ. ದೆಹಲಿ ಅಬಕಾರಿ ನೀತಿ ಸಂಬಂಧ ಅಕ್ರಮ...

‘ಹೆಲ್ತ್ ಡ್ರಿಂಕ್ಸ್‌’ ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಆದೇಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಕ್ಕಳ ಪೇಯವಾಗಿ ಗುರುತಿಸಿಕೊಂಡಿದ್ದ ಕ್ಯಾಡ್‌ಬರಿ ಕಂಪನಿಯ ಬೋರ್ನ್‌ವಿಟಾ (Bourn Vita)ವನ್ನು 'ಹೆಲ್ತ್ ಡ್ರಿಂಕ್ಸ್‌' ಪಟ್ಟಿಯಿಂದ ತೆಗೆದು ಹಾಕುವಂತೆ ಆದೇಶ ಹೊರಡಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಈ...

ಲೋಕ ನೀತಿ – ಸಿಎಸ್‌ಡಿಎಸ್‌ ಚುನಾವಣಾ ಸಮೀಕ್ಷೆ 3: ಮೋದಿ ಆಡಳಿತ ಕುರಿತು ತೃಪ್ತಿಯೂ ಇದೆ, ಅತೃಪ್ತಿಯೂ ಇದೆ

ಲೋಕನೀತಿಯು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವೆಲ್ಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು...

ಮಾಂಸಾಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ಕಾಂಗ್ರೆಸ್, ಆರ್‌ಜೆಡಿ ತಿರುಗೇಟು

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಹಾಗೂ ಆರ್‌ಜೆಡಿ ತಿರುಗೇಟು ನೀಡಿವೆ. ಪ್ರಧಾನಿ ಮೋದಿ ಅವರು ಆರ್‌ಜೆಡಿಯ ಲಾಲು ಪ್ರಸಾದ್, ಅವರ ಪುತ್ರ...

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್‌ (ಎಂಐ) ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಹಣಾಹಣಿ ನಡೆಯಲಿದೆ. ಎರಡೂ ತಂಡಗಳು ತಲಾ ಐದು ಬಾರಿ ಐಪಿಎಲ್...

ಗೋವಾ| ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ, 15 ಮಂದಿ ವಶಕ್ಕೆ

ದಕ್ಷಿಣ ಗೋವಾದಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಕನಿಷ್ಠ 15 ಕಾರ್ಮಿಕರನ್ನು ಪೊಲೀಸರು...

ಲೋಕಸಭಾ ಚುನಾವಣೆ | ಅಮಿತ್ ಶಾ ವಿರುದ್ಧ ಸ್ಪರ್ಧೆಗೆ ಹಿಂಜರಿಕೆಯಿಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಸೋನಾಲ್ ಪಟೇಲ್

ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನಿಂದ ಸೋನಾಲ್ ಪಟೇಲ್ ಕಣಕ್ಕಿಳಿದಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕನ ವಿರುದ್ಧ ಹೋರಾಡಲು ಯಾವುದೇ ಹಿಂಜರಿಕೆಯಿಲ್ಲ ಎಂದು ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರಿಗೆ ಗಾಯ

ಸುಮಾರು ಒಂದು ತಿಂಗಳುಗಳ ಕಾಲ ಯಾವುದೇ ಹಿಂಸಾಚಾರ ವರದಿಯಾಗದ ಮಣಿಪುರದಲ್ಲಿ ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಎರಡು ಸಶಸ್ತ್ರ ಗುಂಪುಗಳ ನಡುವೆ ಹೊಸ ಗುಂಡಿನ ಚಕಮಕಿ ನಡೆದಿದ್ದು...

ಮಧ್ಯಪ್ರದೇಶ| ಬೋರ್‌ವೆಲ್‌ಗೆ ಬಿದ್ದ 6 ವರ್ಷದ ಬಾಲಕ, ರಕ್ಷಣಾ ಕಾರ್ಯ ಪ್ರಾರಂಭ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಆರು ವರ್ಷದ ಬಾಲಕ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರೇವಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್...

ಈ ಹೊತ್ತಿನ ಪ್ರಮುಖ ಸುದ್ದಿ