ದೇಶ

ಪಶ್ಚಿಮ ಬಂಗಾಳ| ಮಾಜಿ ನ್ಯಾಯಾಧೀಶ ಸೇರಿ ನಾಲ್ವರು ಬಿಜೆಪಿ ನಾಯಕರಿಗೆ ವಿಐಪಿ ಭದ್ರತೆ

ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಮತ್ತು ಬಿಜೆಪಿ ನಾಯಕ ಅಭಿಜಿತ್ ಗಂಗೋಪಾಧ್ಯಾಯ, ಮಾಜಿ ಟಿಎಂಸಿ ಸಂಸದ ಅರ್ಜುನ್ ಸಿಂಗ್ ಸೇರಿದಂತೆ ಬಿಜೆಪಿಯ ನಾಲ್ವರು ನಾಯಕರಿಗೆ ಕೇಂದ್ರ ಪಡೆಗಳ ಭದ್ರತೆಯನ್ನು ವಿಸ್ತರಿಸಲು ಗೃಹ ಸಚಿವಾಲಯ...

ತೆಲಂಗಾಣ | ಔಷಧ ಘಟಕದಲ್ಲಿ ರಿಯಾಕ್ಟರ್ ಸ್ಫೋಟ; 7 ಮಂದಿ ಸಾವು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಎಸ್‌ಬಿ ಆರ್ಗಾನಿಕ್ಸ್‌ ಲಿಮಿಟೆಡ್‌ (ಔಷಧ ತಯಾರಿಕಾ ಘಟಕ) ನಲ್ಲಿ ಬುಧವಾರ ಮೂರು ರಿಯಾಕ್ಟರ್‌ಗಳು ಸ್ಪೋಟಗೊಂಡಿದೆ. ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಿಯಾಕ್ಟರ್‌ಗಳು...

ಷಹಜಹಾನ್‌ ಪ್ರಕರಣ | ಮೀನುಗಾರಿಕೆ ಸಂಸ್ಥೆ ಮೂಲಕ ಅಕ್ರಮ ಹಣ ವರ್ಗಾವಣೆ; ಇಡಿ ವಿವರ

ಭೂಕಬಳಿಕೆ, ಮೀನುಗಾರಿಕೆ ವ್ಯವಹಾರದ ಮೂಲಕ ಅಕ್ರಮ ಹಣ ವರ್ಗಾವಣೆ, ಭಯದ ವಾತಾವರಣ ಸೃಷ್ಟಿಸಿ ಜನರ ಮೇಲೆ ದಬ್ಬಾಳಿಕೆ ಆರೋಪ ಹೊತ್ತಿರುವ ಟಿಎಂಸಿಯಿಂದ ಅಮಾನತಾಗಿರುವ ಶೇಖ್ ಷಹಜಹಾನ್‌ ಅವರನ್ನು ತನ್ನ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯಕ್ಕೆ...

ಅಬಕಾರಿ ನೀತಿ ಹಗರಣ | ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಗೊಂಡ ಆಪ್ ಸಂಸದ ಸಂಜಯ್ ಸಿಂಗ್‌

ದೆಹಲಿ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ತಿಹಾರ್ ಜೈಲಿನಿಂದ...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಖಂಡಿತಾ ಖಾಯಂ ಸದಸ್ಯತ್ವ ಪಡೆಯುತ್ತದೆ: ಜೈಶಂಕರ್

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಬೇಕೆಂಬ ಭಾವನೆ ವಿಶ್ವದಲ್ಲಿದೆ. ಭಾರತವು ಖಂಡಿತವಾಗಿ ಖಾಯಂ ಸದಸ್ಯತ್ವ ಪಡೆಯಲಿದೆ. ಅದರೆ, ದೇಶವು ಅದಕ್ಕಾಗಿ ಈ ಬಾರಿ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ...

ಗುಜರಾತ್‌| ಕ್ಷತ್ರಿಯ ಸಮುದಾಯದ ಪ್ರತಿಭಟನೆ; ಬಿಜೆಪಿಯಲ್ಲಿ ಮುಂದುವರಿದ ತಿಕ್ಕಾಟ

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಗುಜರಾತ್ ಬಿಜೆಪಿಯಲ್ಲಿ ತಿಕ್ಕಾಟ ಮುಂದುವರಿದಿದೆ. ಗುಜರಾತ್‌ನಲ್ಲಿ ಕ್ಷತ್ರಿಯ ಸಮುದಾಯದ ಪ್ರತಿಭಟನೆಗಳ ನಡುವೆ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯ ಶಮನವಾಗದೆ,  ಪಕ್ಷದೊಳಗಿನ ಆಂತರಿಕ ಕಲಹ ಮುಂದುವರಿದಿದೆ. ಪ್ರಸ್ತುತ ಬಿಜೆಪಿ ಗುಜರಾತ್ ಘಟಕದ...

ಮೋದಿ ವೈಫಲ್ಯ-5 | ಮೋದಿ ಸರ್ಕಾರದಲ್ಲಿ ರೈತರ ಆದಾಯವೂ ದ್ವಿಗುಣಗೊಳ್ಳಲಿಲ್ಲ, ಆತ್ಮಹತ್ಯೆಗಳೂ ನಿಲ್ಲಲಿಲ್ಲ

2014ರಲ್ಲಿ ಮೋದಿ ಘೋಷಿಸಿದ್ದ ಭರವಸೆಗಳಲ್ಲಿ ರೈತರ ಆತ್ಮಹತ್ಯೆಗಳಿಗೆ ಅಂತ್ಯ ಹಾಡುತ್ತೇವೆ ಎಂಬುದು ಪ್ರಧಾನವಾಗಿತ್ತು. ಆದರೆ, 2014-2023ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಮಾರು 4,25,000 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆದಾಯ ದ್ವಿಗುಣಗೊಳ್ಳುತ್ತದೆ ಎಂದಿದ್ದರು,...

ಗೋವಾ | ಮಗುವನ್ನು ಕೊಂದಿದ್ದ ಬೆಂಗಳೂರಿನ ಸಿಇಓ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ತನ್ನ ನಾಲ್ಕು ವರ್ಷದ ಮಗನನ್ನು ಅಪಾರ್ಟ್‌ಮೆಂಟ್‌ನಲ್ಲಿ ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್‌ನ ಸಿಇಒ ವಿರುದ್ಧ ಗೋವಾ ಪೊಲೀಸರು ಸುಮಾರು 642 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಗೋವಾದಲ್ಲಿ ಮಗನನ್ನು ಹತ್ಯೆ...

ಕೆಲವರು ಜೈಲಿನಲ್ಲಿ, ಉಳಿದವರು ಬೇಲ್‌ನಲ್ಲಿ: ಇಂಡಿಯಾ ಒಕ್ಕೂಟದ ನಾಯಕರನ್ನು ಟೀಕಿಸಿದ ನಡ್ಡಾ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಕೆಲವರು ಜೈಲಿನಲ್ಲಿದ್ದಾರೆ, ಇನ್ನುಳಿದವರು ಬೇಲ್‌ನಲ್ಲಿದ್ದಾರೆ (ಜಾಮೀನಿನಲ್ಲಿದ್ದಾರೆ) ಎಂದು ಇಂಡಿಯಾ ಒಕ್ಕೂಟದ ನಾಯಕರನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದರು. ರಾಜಸ್ಥಾನದ ಜಲಾವರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ನಡ್ಡಾ ಅವರು,...

ಶೇ.62 ರಷ್ಟು ಹೊಸ ಸೈನಿಕ ಶಾಲೆಗಳನ್ನು ಸಂಘ ಪರಿವಾರ, ಬಿಜೆಪಿ ನಾಯಕರಿಗೆ ಹಸ್ತಾಂತರಿಸಿದ ಕೇಂದ್ರ!

ಕೇಂದ್ರ ಸರ್ಕಾರವು ಸುಮಾರು ಶೇ.62 ರಷ್ಟು ಹೊಸ ಸೈನಿಕ ಶಾಲೆಗಳನ್ನು ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಿಗೆ ಹಸ್ತಾಂತರಿಸಿದೆ ಎಂದು ರಿಪೋಟರ್ಸ್ ಕಲೆಕ್ಟಿವ್ ಬುಧವಾರ ವರದಿ ಮಾಡಿದೆ. "ಕೇಂದ್ರ ಸರ್ಕಾರದ ಪತ್ರಿಕಾ ಹೇಳಿಕೆ ಮತ್ತು...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ ಮಾಡುವ ಮೂಲಕ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ದೇಶದ ಜನರನ್ನು ತಪ್ಪು ದಾರಿಗೆಳೆದಿದೆ. ಘನತೆವೆತ್ತ ಸುಪ್ರೀಂ ಕೋರ್ಟ್ ಪತಂಜಲಿಯ ಬಾಬಾ...

ಮೋದಿಗೆ ಪರ್ಯಾಯ ಯಾರು?; ಶಶಿ ತರೂರ್ ಹೇಳುವುದು ಹೀಗೆ

'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಯಾರು' ಎಂಬ ಪ್ರಶ್ನೆ ಅಪ್ರಸ್ತುತ ಎಂದು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಹೇಳಿದ್ದಾರೆ. ಈ ಬಗ್ಗೆ ಶಶಿ ತರೂರ್ ಎಕ್ಸ್‌ (ಟ್ವೀಟ್) ಮಾಡಿದ್ದಾರೆ. "ನರೇಂದ್ರ ಮೋದಿಗೆ...

ಈ ಹೊತ್ತಿನ ಪ್ರಮುಖ ಸುದ್ದಿ