ಜನವರಿ 27ರ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ, ಸೆನ್ಸೆಕ್ಸ್ ಸೇರಿದಂತೆ ಇನ್ನೂಅನೇಕ ಬೆಂಚ್ ವಲಯಗಳಲ್ಲಿ ಭಾರೀ ಕುಸಿತ ಕಂಡಿವೆ. ಸೆನ್ಸೆಕ್ಸ್ 824(1.08%), ನಿಫ್ಟಿ 263% (1.14%)ನಷ್ಟು ಕುಸಿತ ಕಂಡು ಮಧ್ಯಮ ಮತ್ತು ಸಣ್ಣ ಕಂಪನಿಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ.
ತೀವ್ರವಾದ ಮಾರಾಟದ ಒತ್ತಡಕ್ಕೆ ಸಿಲುಕಿದ ಮಿಡ್ಕ್ಯಾಪ್(3.84%) ಸನಿಹ ಶೇ.4ರಷ್ಟು ಕುಸಿದು, ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿಯೂ 4% ನಷ್ಟು ನಷ್ಟಕಂಡಿತು.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಬಂಡವಾಳ ಮಾರುಕಟ್ಟೆಯಲ್ಲಿ ಬರೋಬ್ಬರಿ ₹410 ಲಕ್ಷ ಕೋಟಿಯಷ್ಟು ನಷ್ಟವನ್ನು ಅನುಭವಿಸಿ ಮತ್ತಷ್ಟು ಜಾರುವ ಸಂಭವವನ್ನು ತಜ್ಞರು ಅಂದಾಜಿಸುತ್ತಿದ್ದಾರೆ.
ಪ್ರಾಥಮಿಕವಾಗಿ ಮುಂಬರುವ ಕೇಂದ್ರ ಬಜೆಟನ್ನೇ ಮುಖ್ಯವಾಗಿಸಿಕೊಂಡಿರುವ ಹೂಡಿಕೆದಾರರು, ಸರ್ಕಾರದಿಂದ ಹೆಚ್ಚಾಗಿ ಜನಪ್ರಿಯ ಯೋಜನೆಗಳಿಗೆ ಅನುವಾಗುವಂತೆ ಟ್ಯಾಕ್ಸ್ನಲ್ಲಿ ಸಡಿಲತೆಯನ್ನು ಎದುರು ನೋಡುತ್ತಿದ್ದಾರೆಂದರೆ ತಪ್ಪಾಗಲಾರದು. ಏಕೆಂದರೆ ಹೆಚ್ಚಾಗಿ ವಿದೇಶಿ ಹೂಡಿಕೆದಾರರ ಜತೆಗೆ ಭಾರತದ ಸಣ್ಣ ಸಣ್ಣ ಹೂಡಿಕೆದಾರರು ಹೆಚ್ಚು ಹಣ ಹಿಂಪಡೆಯುತ್ತಿದ್ದು, ಮರುಹೂಡಿಕೆ ಮಾಡಬೇಕಾದರೆ ಅದಕ್ಕೆ ಸರ್ಕಾರದ ಬಜೆಟ್ನಲ್ಲಿ ಸಡಿಲತೆಯ ಅಗತ್ಯ ಹೆಚ್ಚಿದೆ ಎಂಬುದನ್ನು ಕಾಣಬೇಕಾಗುತ್ತದೆ.
ಗ್ರಾಹಕರ ಖರ್ಚಿಗೆ ಅನುಗುಣವಾಗುವ, ಹೆಚ್ಚೆಚ್ಚು ಉಳಿತಾಯದ ಜತೆಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸರ್ಕಾರದ ಬಜೆಟ್ ಸಹಕಾರ ಮಾಡದೇ ಇದ್ದಲ್ಲಿ, ಭಾರತೀಯ ಕಂಪನಿಗಳ ಲಾಭವೂ ಕಡಿಮೆಯಾಗುವ ಅಥವಾ ವೃದ್ದಿಸಲು ಸಾಧ್ಯವಿಲ್ಲ ಎಂಬುದನ್ನು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?
ಕಳೆದ ವರ್ಷದ ಅಕ್ಟೋಬರ್ನಿಂದ ಜನವರಿವರೆಗೆ ಸುಮಾರು ₹2 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದು, ವಿದೇಶಿ ಹೂಡಿಕೆದಾರು ಮತ್ತು ದೇಶೀಯ ಹೂಡಿಕೆದಾರರ ನಡುವೆ ಕಾದಾಟ ಏರ್ಪಟ್ಟಿದೆ.
ಯಾವ ಷೇರುಗಳು ಕುಸಿತ?
ನಿಫ್ಟಿಯಲ್ಲಿನ ICICI 1.55%, Britannia 1.46%, M&M 1.08% ಮಾತ್ರ ಮೇಲಕ್ಕೆ ಆಮೆಗತಿಯಲ್ಲಿ ಏರಿಕೆ ಕಂಡರೆ, HCL, Tech Market, Wipro ಷೇರುಗಳು ತಲಾ -4% ನಷ್ಟು ನಷ್ಟ ಕಂಡಿವೆ. Hindalco, Shriram Finance, Power Grid, TATA motors ಷೇರುಗಳೂ -3.50% ಗೂ ಹೆಚ್ಚು ಕುಸಿದಿವೆ.
ನಿಫ್ಟಿಯ ಮಿಟ್ ಕ್ಯಾಪ್ನ ಷೇರುಗಳಲ್ಲಿ ಫೆಡರಲ್ ಬ್ಯಾಂಕ್ 1.61%, ಯೆಸ್ ಬ್ಯಾಂಕ್ 1.37%, ಎಲ್ ಅಂಡ್ ಟಿ ಫೈನಾನ್ಸ್ 1.34% ಮಾತ್ರ ಏರಿಕೆ ಕಂಡರೆ ಉಳಿದ ಎಲ್ಲ ಷೇರುಗಳು ಗರಿಷ್ಟ ಕುಸಿದಿವೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ 9%, Supreme Ind -6.75%, ಟೆಲಿಕಾಂ ಕಂಪನಿಯಾದ VI 6%, ಕುಸಿದು ಗಣನೀಯ ನಷ್ಟಕಂಡಿವೆ.