ಈ ದಿನ ಸಂಪಾದಕೀಯ | ಡಿಜೆ ಬ್ಯಾನ್‌ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ

Date:

Advertisements
ಡಿಜೆಗಳ ಕುರಿತು ಬರುವ ಆಕ್ಷೇಪಗಳಲ್ಲಿ ಶಬ್ದ ಮಾಲಿನ್ಯದ ಬಗ್ಗೆಯಷ್ಟೇ ಎಚ್ಚರಿಕೆ ಇರುವುದಿಲ್ಲ. ಭಾರೀ ಶಬ್ದದೊಂದಿಗೆ ಪಸರಿಸುವ ಕೋಮು ತರಂಗಾಂತರಗಳ ಕುರಿತೂ ಆತಂಕಗಳಿರುತ್ತವೆ.

ಇಂದು ಸಾರ್ವಜನಿಕವಾಗಿ ಆಚರಿಸುವ ಬಹುತೇಕ ಹಬ್ಬಗಳು ಸಾಂಸ್ಕೃತಿಕ ಉತ್ಸವಗಳಾಗಿ ಉಳಿದುಕೊಂಡಿಲ್ಲ. ಅವು ರಾಜಕೀಯ ಸ್ವರೂಪ ಪಡೆದು ಇನ್ನೊಬ್ಬರನ್ನು ಪ್ರಚೋದಿಸುವ ಸರಕುಗಳಾಗಿ ಮಾರ್ಪಟ್ಟಿವೆ. ಹಬ್ಬಗಳು ಭಕ್ತಿ, ಧಾರ್ಮಿಕತೆ, ಸೌಹಾರ್ದತೆ ಮತ್ತು ಪ್ರೀತಿಯ ಸಂಕೇತಗಳಾಗಿ ಹೊಮ್ಮುವ ಬದಲು ಕೋಮು ಉದ್ವಿಗ್ನತೆಗೆ ಕಾರಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗಣೇಶ ಮತ್ತು ಈದ್ ಮೆರವಣಿಗೆಗಳು ಹೆಚ್ಚಾಗಿ ರಾಜಕೀಯ ಲೇಪನ ಪಡೆದುಕೊಳ್ಳತೊಡಗಿವೆ. ಧಾರ್ಮಿಕ ಮೆರವಣಿಗೆಗಳು ಸಂಭ್ರಮದ ಸೋಗಿನಲ್ಲಿ ಉನ್ಮಾದ ಮತ್ತು ಉದ್ವಿಗ್ನತೆಯ ಅಸ್ತ್ರಗಳಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಚೋದನೆಗಳಿಗೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಆಧುನಿಕ ಸಂಗೀತ ಸಲಕರಣೆಗಳು ಬಳಕೆಯಾಗಿವೆ. ಡಿಜೆಗಳ ಕುರಿತು ಬರುವ ಆಕ್ಷೇಪಗಳಲ್ಲಿ ಶಬ್ದ ಮಾಲಿನ್ಯದ ಬಗ್ಗೆಯಷ್ಟೇ ಎಚ್ಚರಿಕೆ ಇರುವುದಿಲ್ಲ. ಭಾರೀ ಶಬ್ದದೊಂದಿಗೆ ಪಸರಿಸುವ ಕೋಮು ತರಂಗಾಂತರಗಳ ಕುರಿತೂ ಆತಂಕಗಳಿರುತ್ತವೆ.

ಸುಮಾರು ಐದು ವರ್ಷಗಳ ಕಾಲ, ಹಲವು ರಾಜ್ಯಗಳಲ್ಲಿ ಸುತ್ತಾಡಿ, ಸತತ ಅಧ್ಯಯನಗಳನ್ನು ನಡೆಸಿದ ಸ್ವತಂತ್ರ ಪತ್ರಕರ್ತ ಕುನಾಲ್ ಪುರೋಹಿತ್ ಅವರು ‘H-Pop’ (ಹಿಂದುತ್ವ ಪೊಪ್) ಎಂಬ ಪುಸ್ತಕವನ್ನು ಬರೆದಿದ್ದಾರೆ. ಧಾರ್ಮಿಕ ಮೆರವಣಿಗೆಗಳಲ್ಲಿ ಬಳಸಲಾಗುವ ಸಂಗೀತ, ಸಾಹಿತ್ಯವು ಹೇಗೆ ದ್ವೇಷ ರಾಜಕಾರಣದ ಟೂಲ್‌ಗಳಾಗಿವೆ ಎಂಬುದನ್ನು ಆ ಪುಸ್ತಕದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಸಾಮಾಜಿಕ ಮಾಧ್ಯಮಗಳ ಬಳಕೆ, ಪುಸ್ತಕ ಮುದ್ರಣ, ಸಂಗೀತ ಮತ್ತು ಸಾಹಿತ್ಯದ ಮುಖೇನ ಯುವ ಜನರನ್ನು ಹಿಂದುತ್ವ ಗುಂಪುಗಳು ಜನಪ್ರಿಯ ಮಾದರಿಯಲ್ಲಿ ಸೆಳೆಯುತ್ತಿರುವ ರೀತಿಯನ್ನು ಕುನಾಲ್ ವಿಶ್ಲೇಷಿಸಿದ್ದಾರೆ. ಉನ್ಮಾದಗೊಳಿಸುವಂತೆ ಡಿಜೆ ಬಳಸುವುದು ಕೂಡ ಇಂತಹ ‘ಎಚ್- ಪೊಪ್’ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಹೀಗಾಗಿ ಆಳುವ ಸರ್ಕಾರಗಳಿಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ.

ಶಾಂತಿ, ನೆಮ್ಮದಿಯಲ್ಲಿ ಧಾರ್ಮಿಕ ಮೆರವಣಿಗೆಗಳು ನಡೆಯಬೇಕಾದರೆ ಕೆಲವು ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಹಲವೆಡೆ ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿಯೂ ಗಣೇಶ ಮತ್ತು ಈದ್ ಮೆರವಣಿಗೆ ಸಂದರ್ಭದಲ್ಲಿ ಡಿಜೆಯನ್ನು ಬ್ಯಾನ್ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಕಾರಣಕ್ಕೆ ಹಾಗೂ ಭಾರೀ ಶಬ್ದ ಮಾಲಿನ್ಯವನ್ನು ತಡೆಗಟ್ಟುವುದಕ್ಕೆ ಈ ಕ್ರಮ ಅತ್ಯಗತ್ಯವಾಗಿತ್ತು. ಪ್ರಾಣಿ-ಪಕ್ಷಿಗಳ ಹಿತಕ್ಕೂ ಮನುಷ್ಯರ ಮಾನಸಿಕ ನೆಮ್ಮದಿಗೂ ಡಿಜೆ ಬ್ಯಾನ್ ಮಾಡುವ ಕ್ರಮ ಅನುಕರಣೀಯ. ಹೀಗಾಗಿ ಸ್ಥಳೀಯ ಜಿಲ್ಲಾಡಳಿತಗಳನ್ನು ಸಾರ್ವಜನಿಕರು ಅಭಿನಂದಿಸಬೇಕಾಗುತ್ತದೆ. ದುರದೃಷ್ಟವಶಾತ್ ಡಿಜೆ ಬ್ಯಾನ್‌ನ್ನು ಮುಕ್ತವಾಗಿ ನೋಡದೆ, ”ನಮಗೆ ಡಿಜೆ ಬೇಕೇ ಬೇಕು” ಎಂದು ಆಗ್ರಹಿಸುತ್ತಿರುವವರ ಉದ್ದೇಶವಾದರೂ ಏನು?

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ದಿಕ್ಕು ತಪ್ಪಿಸುವ ದೃಶ್ಯಮಾಧ್ಯಮಗಳು ಮತ್ತು ಧರ್ಮಯಾತ್ರೆಗಳು

ಡಿಜೆಗೆ ಅನುಮತಿ ನೀಡಬೇಕೆಂದು ಕೆಲವು ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆಯೂ ನಡೆದಿದೆ. ಡಿಜೆಯನ್ನು ನಿಷೇಧಿಸುವ ಸರ್ಕಾರವು ಹಿಂದೂ ವಿರೋಧಿ ಎನ್ನುವಂತಹ ಅತಿರೇಕದ ಟೀಕೆಗಳು ಬಂದಿವೆ. ಆದರೆ ಡಿಜೆ ಬ್ಯಾನ್‌ನಿಂದ ಆಗಿರುವ ಇತರ ಅನುಕೂಲತೆಗಳನ್ನು ಟೀಕಾಕಾರರು ಗಮನಿಸಿದಂತೆ ಕಾಣುತ್ತಿಲ್ಲ.

ಡಿಜೆ ಬಂದ ಮೇಲೆ ಧಾರ್ಮಿಕ ಉತ್ಸವಗಳಲ್ಲಿ ಕಣ್ಮರೆಯಾಗಿದ್ದ ಕಲಾ ತಂಡಗಳು ಈಗ ಮತ್ತೆ ಗಣಪತಿ ಉತ್ಸವಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಡೊಳ್ಳು ಕುಣಿತ, ಪೂಜಾ ಕುಣಿತ, ಬೊಂಬೆಯಾಟ, ವಾದ್ಯಗಳ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರಕುತ್ತಿವೆ. ಹಿಂದೂ ಜನ ಸಮುದಾಯದ ಕಲಾವರ್ಗಕ್ಕೆ ಜೀವಕೊಟ್ಟಂತಾಗಿದೆ. ”ಕಲೆಯನ್ನು ನಂಬಿ ಬದುಕು ಸಾಗಿಸಲು ಸಾಧ್ಯವಿಲ್ಲ” ಎಂದು ಪರ್ಯಾಯ ದಾರಿಗಳನ್ನು ಕಂಡುಕೊಂಡಿದ್ದ ಕಲಾವಿದರು ಗಣಪತಿ ಮೆರವಣಿಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲಿತ ಕಲೆಗಳು ಹಬ್ಬಗಳ ಸಂದರ್ಭದಲ್ಲಾದರೂ ಬಳಕೆಯಾಗುತ್ತಿವೆ. ಹಲವೆಡೆ ಕಲಾವಿದರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಡಿಜೆ ಪರವಾದಿಗಳು ಗಮನಿಸಬೇಕು. ಜನರನ್ನು ಉನ್ಮಾದಗೊಳಿಸುವ ಡಿಜೆ ಸಂಸ್ಕೃತಿಗಿಂತ ಜಾನಪದ ಕಲೆಗಳನ್ನು ಮೇಳೈಸುವ ಮೆರವಣಿಗೆಗಳು ಅರ್ಥಪೂರ್ಣವೂ ಆಗುತ್ತದೆ. ಡಿಜೆ ಬ್ಯಾನ್‌ನಿಂದ ಆಗಿರುವ ಈ ಆಶಾದಾಯಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಸದ್ಯದ ಅಗತ್ಯವೂ ಹೌದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X