ಬೀದರ್ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ 2026-27ನೇ ಶೈಕ್ಷಣಿಕ ಸಾಲಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಹೆಸರು, ಪೂರ್ಣ ವಿಳಾಸ (ದೂರವಾಣಿ/ಮೊಬೈಲ್ ಸಂಖ್ಯೆಯೊಂದಿಗೆ), ಜನ್ಮ ದಿನಾಂಕ, ವಿದ್ಯಾರ್ಹತೆ ಹಾಗೂ ವಾಸಸ್ಥಳದ ಮಾಹಿತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಜೊತೆಗೆ ಸ್ನಾತಕೋತ್ತರ ಪದವಿಯ ದೃಢೀಕೃತ ಅಂಕಪಟ್ಟಿಗಳು, ಬಿ.ಎಡ್. ಪದವಿಯ ದೃಢೀಕೃತ ಅಂಕಪಟ್ಟಿಗಳು ಹಾಗೂ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಎಸ್ಎಸ್ಎಲ್ಸಿ ಅಂಕಪಟ್ಟಿಯ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ 2026ರ ಜೂನ್ 3ರೊಳಗಾಗಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕು.
ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು. ನೇರ ನೇಮಕಾತಿ, ವರ್ಗಾವಣೆ ಅಥವಾ ನಿಯೋಜನೆ ಮೂಲಕ ಹುದ್ದೆ ಭರ್ತಿಯಾಗುವವರೆಗೆ ಅಥವಾ 2026-27ನೇ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ, ಇವುಗಳಲ್ಲಿ ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ಮಾತ್ರ ಈ ನೇಮಕಾತಿ ಜಾರಿಯಲ್ಲಿರುತ್ತದೆ.
ಎಲ್ಲೆಲ್ಲಿ ಖಾಲಿ :
ಕನ್ನಡ ವಿಷಯದ ಹುದ್ದೆ ಖಾಲಿ ಇರುವ ಕಾಲೇಜುಗಳು:
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಹುಮನಾಬಾದ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ, ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಳಮಡಗಿ (ತಾ. ಚಿಟಗುಪ್ಪಾ); ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಠಾಳ (ತಾ. ಬಸವಕಲ್ಯಾಣ); ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಡಬಿ (ತಾ. ಬಸವಕಲ್ಯಾಣ); ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ.
ಇತಿಹಾಸ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಲಹಳ್ಳಿ(ಕೆ) (ತಾ. ಭಾಲ್ಕಿ); ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾ; ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಳಮಡಗಿ (ತಾ. ಹುಮನಾಬಾದ); ಸರ್ಕಾರಿ ಪದವಿ ಪೂರ್ವ ಕಾಲೇಜು, ಔರಾದ(ಬಿ); ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿತ್ತೆಖಾನಾ.
ಅರ್ಥಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಡಬಿ (ತಾ. ಬಸವಕಲ್ಯಾಣ); ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಳಮಡಗಿ (ತಾ. ಚಿಟಗುಪ್ಪಾ); ಸರ್ಕಾರಿ ಪದವಿ ಪೂರ್ವ ಕಾಲೇಜು, ನಿರ್ಣಾ (ತಾ. ಹುಮನಾಬಾದ); ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಪದವಿ ಪೂರ್ವ ಕಾಲೇಜು, ದುಬಲಗುಂಡಿ (ತಾ. ಹುಮನಾಬಾದ); ಸರ್ಕಾರಿ ಪದವಿ ಪೂರ್ವ ಕಾಲೇಜು, ಹಳ್ಳಿಖೇಡ(ಕೆ) (ತಾ. ಹುಮನಾಬಾದ); ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಠಾಳ (ತಾ. ಬಸವಕಲ್ಯಾಣ); ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿತ್ತೆಖಾನಾ, ಬೀದರ; ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ.
ಸಮಾಜಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಠಾಳ (ತಾ. ಬಸವಕಲ್ಯಾಣ); ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾ.
ರಾಜ್ಯಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಪದವಿ ಪೂರ್ವ ಕಾಲೇಜು, ಬೇಮಳಖೇಡ (ತಾ. ಚಿಟಗುಪ್ಪಾ).
ಜೀವಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಠಾಣಾಕುಶನೂರ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾ.
ವಾಣಿಜ್ಯಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿತ್ತೆಖಾನಾ, ಬೀದರ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಚೌಬಾರಾ ರಸ್ತೆ, ಬೀದರ; ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಲ್ಕಿ; ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಲಹಳ್ಳಿ(ಕೆ) (ತಾ. ಭಾಲ್ಕಿ); ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಪದವಿ ಪೂರ್ವ ಕಾಲೇಜು, ನಿರ್ಣಾ.
ಗಣಿತಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಪದವಿ ಪೂರ್ವ ಕಾಲೇಜು, ಠಾಣಾಕುಶನೂರ; ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಲ್ಕಿ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಟಗುಪ್ಪಾ.
ರಸಾಯನಶಾಸ್ತ್ರ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ.
ಇಂಗ್ಲಿಷ್ ವಿಷಯದ ಹುದ್ದೆಗಳು ಖಾಲಿ ಇರುವ ಕಾಲೇಜುಗಳು:
ಸರ್ಕಾರಿ ಪದವಿ ಪೂರ್ವ ಕಾಲೇಜು, ದುಬಲಗುಂಡಿ (ತಾ. ಹುಮನಾಬಾದ); ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ತಾಳಮಡಗಿ (ತಾ. ಹುಮನಾಬಾದ).
ಹಿಂದಿ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಪದವಿ ಪೂರ್ವ ಕಾಲೇಜು, ಔರಾದ(ಬಿ); ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಡಬಿ (ತಾ. ಬಸವಕಲ್ಯಾಣ); ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಲ್ಕಿ.
ಉರ್ದು ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಪದವಿ ಪೂರ್ವ ಕಾಲೇಜು, ಮನ್ನಳ್ಳಿ, ಬೀದರ; ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಲ್ಕಿ; ಸರ್ಕಾರಿ ಪದವಿ ಪೂರ್ವ ಕಾಲೇಜು, ಔರಾದ(ಬಿ).
ಗಣಕ ವಿಜ್ಞಾನ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಹುಮನಾಬಾದ; ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಚೌಬಾರಾ ರಸ್ತೆ, ಬೀದರ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿತ್ತೆಖಾನಾ, ಬೀದರ; ಸರ್ಕಾರಿ ನೀಲಾಂಬಿಕಾ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವಕಲ್ಯಾಣ; ಸರ್ಕಾರಿ ಪದವಿ ಪೂರ್ವ ಕಾಲೇಜು, ಔರಾದ(ಬಿ).
ಮರಾಠಿ ವಿಷಯದ ಹುದ್ದೆ ಖಾಲಿ ಇರುವ ಕಾಲೇಜು:
ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಲ್ಕಿ.
ಹೆಚ್ಚಿನ ಮಾಹಿತಿಗಾಗಿ ಬೀದರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಚೇರಿ ಅಥವಾ ಸಂಬಂಧಪಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಬೀದರ್ | ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಗೆ ನೂತನ ಪದಾಧಿಕಾರಿಗಳ ನೇಮಕ





