ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ ಕಡಿಮೆಯಾಗಬಹುದು. ಪೆಂಬ್ರೊಲಿಜುಮಾಬ್, ನಿವೊಲುಮಾಬ್, ಒಸಿಮರ್ಟಿನಿಬ್ ಸೇರಿದಂತೆ ಹಲವು ಪ್ರಮುಖ ಔಷಧಗಳು ಈ ಪಟ್ಟಿಯಲ್ಲಿವೆ. ಯಾವ ಔಷಧಗಳು ಅಗ್ಗವಾಗಲಿವೆ, ರೋಗಿಗಳಿಗೆ ಎಷ್ಟು ಉಳಿತಾಯವಾಗಬಹುದು, ಪರಿಷ್ಕೃತ ಬೆಲೆಯನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೆಲ ವರ್ಷಗಳ ಹಿಂದೆ ʼಕ್ಯಾನ್ಸರ್ʼ ಎನ್ನುವುದೊಂದು ಅಪರೂಪದಲ್ಲೇ ಅಪರೂಪದ ರೋಗ, ಅದೂ ಎಲ್ಲೋ ದೂರದ ಊರಿನಲ್ಲಿ ಒಬ್ಬರಿಗೆ ಬಂದರೆ ಹೆಚ್ಚು. ಅದೇ ʼಟಾಕ್ ಆಫ್ ದಿ ಟೌನ್ʼ ಎನಿಸುತ್ತಿತ್ತು. ಈಗ ಹಾಗಿಲ್ಲ. ಮನೆಗೊಬ್ಬರಂತೆ ಕ್ಯಾನ್ಸರ್ ರೋಗಿಗಳನ್ನ ಪಟ್ಟಿ ಮಾಡಬಹುದು. ಈ ರೋಗ ಬಂದರೆ, ಆ ವ್ಯಕ್ತಿಯ ಆರೋಗ್ಯದ ಮೇಲಷ್ಟೇ ಅಲ್ಲ, ಇಡೀ ಕುಟುಂಬದ ಆರ್ಥಿಕ ಸ್ಥಿತಿಯನ್ನ ನುಂಗಿ ಹಾಕುವ ಬಿರುಗಾಳಿ. ಇಂತಹ ಕ್ಯಾನ್ಸರ್‌ಗೆ ದೀರ್ಘಕಾಲದ ಚಿಕಿತ್ಸೆ, ನಿರಂತರವಾಗಿ ಬೇಕಾಗುವ ದುಬಾರಿ ಔಷಧಗಳು, ಇಮ್ಯುನೊಥೆರಪಿ (Immunotherapy) ಮತ್ತು ಟಾರ್ಗೆಟೆಡ್ ಥೆರಪಿಯಂತಹ (Targeted Therapy) ಆಧುನಿಕ ಚಿಕಿತ್ಸಾ ವಿಧಾನಗಳು ರೋಗಿಯ ಕುಟುಂಬವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.
ಈ ಚಿಕಿತ್ಸೆಯ ದುಬಾರಿ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 137 ಔಷಧಿಗಳನ್ನು ‘ಟ್ರೇಡ್ ಮಾರ್ಜಿನ್ ರೇಷನಲೈಸೇಶನ್’ (TMR) ವ್ಯಾಪ್ತಿಗೆ ತರಲಾಗಿದ್ದು, ಇವುಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ಕೆಲವು ಔಷಧಗಳಿಗೆ ಶೇ.70ರವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಪ್ರಕಾರ, ಈ ಕ್ರಮವು ಔಷಧಗಳ ವಿತರಣಾ ವ್ಯವಸ್ಥೆಯಲ್ಲಿನ ವ್ಯಾಪಾರ ಮಾರ್ಜಿನ್ ನಿಯಂತ್ರಿಸುವ ಮೂಲಕ ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಗುರಿ ಹೊಂದಿದೆ. ಪೆಂಬ್ರೊಲಿಜುಮಾಬ್, ನಿವೊಲುಮಾಬ್ ಮತ್ತು ಒಸಿಮರ್ಟಿನಿಬ್ ಸೇರಿದಂತೆ ಹಲವು ಪ್ರಮುಖ ಕ್ಯಾನ್ಸರ್ ಔಷಧಗಳು ಈ ಪಟ್ಟಿಯಲ್ಲಿದ್ದು, ಪರಿಷ್ಕೃತ ಬೆಲೆಗಳು 2026ರ ನವೆಂಬರ್ 9ರಿಂದ ಜಾರಿಗೆ ಬರಲಿವೆ. ಆದರೆ, ಎಲ್ಲಾ ಔಷಧಗಳ ಬೆಲೆಯೂ ಶೇ.70ರಷ್ಟು ಇಳಿಕೆಯಾಗುವುದಿಲ್ಲ. ನಿಖರವಾದ ಉಳಿತಾಯವು ಔಷಧದ ಪರಿಷ್ಕೃತ ಬೆಲೆಯನ್ನು ಅವಲಂಬಿಸಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಮಾರುಕಟ್ಟೆಯಲ್ಲಿ ಔಷಧಗಳ ವಿತರಣೆ ಹಾಗೂ ಚಿಲ್ಲರೆ ಮಾರಾಟ ಹಂತದಲ್ಲಿ ಮಧ್ಯವರ್ತಿಗಳು ಮತ್ತು ಕಂಪನಿಗಳು ಮಾಡುತ್ತಿರುವ ಅತಿಯಾದ ಲಾಭಕೋರತನಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA), 2013ರ ಔಷಧಗಳ ಬೆಲೆ ನಿಯಂತ್ರಣ ಆದೇಶದ (DPCO) ಪ್ಯಾರಾಗ್ರಾಫ್ 19ರ ಅಡಿಯಲ್ಲಿ ಪ್ರತ್ಯೇಕ ಅಧಿಕಾರ ಚಲಾಯಿಸಿ ಈ ಬೃಹತ್ ದರ ಸಮರ ಸಾರಿದೆ.
ಸಾಮಾನ್ಯವಾಗಿ ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಲಾಭಾಂಶವು (Trade Margin) ಅಸಾಧಾರಣವಾಗಿರುತ್ತಿತ್ತು. ಆದರೆ ಇನ್ನು ಮುಂದೆ ಈ ಲಾಭಾಂಶಕ್ಕೆ ನಿರ್ದಿಷ್ಟ ಮಿತಿ ಹೇರಲಾಗುತ್ತಿದ್ದು, ಇದು ರೋಗಿಗಳಿಗೆ ನೇರ ಪ್ರಯೋಜನ ತಂದುಕೊಡಲಿದೆ. ಈ ಹಿಂದೆ 2019ರಲ್ಲಿ ಕೇಂದ್ರ ಸರ್ಕಾರವು ಇಂತಹದ್ದೇ ದಿಟ್ಟ ಹೆಜ್ಜೆಯಿಟ್ಟು, 42 ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಸಂದರ್ಭದಲ್ಲಿ ಕೆಲವು ಪ್ರಮುಖ ಔಷಧಗಳ ಬೆಲೆಯು ಬರೋಬ್ಬರಿ ಶೇ. 90ರವರೆಗೆ ಕುಸಿದು, ಅಸಂಖ್ಯಾತ ರೋಗಿಗಳಿಗೆ ದೊಡ್ಡ ಪ್ರಮಾಣದ ಆರ್ಥಿಕ ನಿರಾಳತೆಯನ್ನು ನೀಡಿತ್ತು. ಈಗ ಮತ್ತೊಮ್ಮೆ ಆ ಕ್ರಮವನ್ನು ವಿಸ್ತರಿಸಿ, ಒಟ್ಟು 137 ಔಷಧಗಳಿಗೆ ಇದನ್ನು ಅನ್ವಯಿಸುತ್ತಿರುವುದು ಕ್ಯಾನ್ಸರ್ ಪೀಡಿತರಿಗೆ ದೊಡ್ಡ ಆಸರೆಯಾಗಲಿದೆ.
ಯಾವ ಔಷಧಗಳು ಅಗ್ಗವಾಗಲಿವೆ?
ಹೊಸ ಪಟ್ಟಿಯಲ್ಲಿ ಒಟ್ಟು 137 ಔಷಧಗಳು ಮತ್ತು ಔಷಧ ಸಂಯೋಜನೆಗಳು ಸೇರಿವೆ. ಇವು ವಿವಿಧ ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತವೆ.
| ಔಷಧದ ಹೆಸರು | ಪ್ರಮುಖ ಬಳಕೆ |
| Pembrolizumab | ವಿವಿಧ ಕ್ಯಾನ್ಸರ್‌ಗಳಲ್ಲಿ ಇಮ್ಯುನೊಥೆರಪಿ |
| Nivolumab | ವಿವಿಧ ಕ್ಯಾನ್ಸರ್‌ಗಳ ಚಿಕಿತ್ಸೆ |
| Durvalumab | ಕೆಲವು ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್‌ಗಳು |
| Osimertinib | ನಿರ್ದಿಷ್ಟ ವಿಧದ ಶ್ವಾಸಕೋಶದ ಕ್ಯಾನ್ಸರ್ |
| Bevacizumab | ಕೊಲೊನ್, ಅಂಡಾಶಯ ಮತ್ತು ಗರ್ಭಕಂಠದ ಕೆಲವು ಕ್ಯಾನ್ಸರ್‌ಗಳು |
| Denosumab | ಕೆಲವು ಕ್ಯಾನ್ಸರ್ ರೋಗಿಗಳಲ್ಲಿ ಮೂಳೆ ಸಂಬಂಧಿತ ಸಮಸ್ಯೆಗಳ ನಿರ್ವಹಣೆ |
| Pegfilgrastim | ಕೀಮೋಥೆರಪಿಯಿಂದ ಉಂಟಾಗಬಹುದಾದ ನ್ಯೂಟ್ರೋಪೀನಿಯಾ ಅಪಾಯವನ್ನು ಕಡಿಮೆ ಮಾಡಲು |
| Palbociclib | ನಿರ್ದಿಷ್ಟ ವಿಧದ ಸ್ತನ ಕ್ಯಾನ್ಸರ್ |
| Abiraterone acetate | ಪ್ರಾಸ್ಟೇಟ್ ಕ್ಯಾನ್ಸರ್ |
| Lenvatinib | ಕೆಲವು ವಿಧದ ಕ್ಯಾನ್ಸರ್‌ಗಳ ಚಿಕಿತ್ಸೆ |
| Olaparib | ನಿರ್ದಿಷ್ಟ ಸಂದರ್ಭಗಳಲ್ಲಿ ಕೆಲವು ಕ್ಯಾನ್ಸರ್‌ಗಳ ಚಿಕಿತ್ಸೆ |
| Ribociclib | ನಿರ್ದಿಷ್ಟ ವಿಧದ ಸ್ತನ ಕ್ಯಾನ್ಸರ್ |
ಔಷಧದ ಬೆಲೆ ಎಷ್ಟು ಕಡಿಮೆಯಾಗಬಹುದು?
ಸರ್ಕಾರದ ಲೆಕ್ಕಾಚಾರದ ಉದಾಹರಣೆಯ ಪ್ರಕಾರ, ಒಂದು ಔಷಧದ ಪ್ರಸ್ತುತ ಬೆಲೆ ₹300 ಇದ್ದು, ಪರಿಷ್ಕೃತ ಬೆಲೆ ₹100 ಆದರೆ, ಪ್ರತಿ ಔಷಧಕ್ಕೆ ₹200 ಉಳಿತಾಯವಾಗಬಹುದು. ಅಂದರೆ ಬೆಲೆಯಲ್ಲಿ ಸುಮಾರು ಶೇ.66.7ರಷ್ಟು ಇಳಿಕೆಯಾಗುತ್ತದೆ. ಆದರೆ ಇದು ಉದಾಹರಣೆಯ ಲೆಕ್ಕಾಚಾರ ಮಾತ್ರ. ನಿಜವಾದ ಬೆಲೆ ಇಳಿಕೆ ಔಷಧದಿಂದ ಔಷಧಕ್ಕೆ ಬದಲಾಗುತ್ತದೆ. ಅನ್ವಯಿಸುವ GST ಕೂಡ ಹೆಚ್ಚುವರಿಯಾಗಿರಬಹುದು ಎಂಬುದನ್ನು ಗಮನದಲ್ಲಿಡಬೇಕು.
ಟ್ರೇಡ್ ಮಾರ್ಜಿನ್ (Trade Margin) ಎಂದರೇನು?
ಔಷಧ ತಯಾರಕರಿಂದ ಹಿಡಿದು ವಿತರಕರು (Stockists/Distributors), ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ಔಷಧ ಮಾರಾಟಗಾರರ (Retailers/Hospitals) ಮೂಲಕ ಗ್ರಾಹಕರು ಅಥವಾ ರೋಗಿಗಳನ್ನು ತಲುಪುವವರೆಗಿನ ಸರಪಳಿಯಲ್ಲಿ ಉಂಟಾಗುವ ಲಾಭದ ಅಂತರವನ್ನೇ ‘ಟ್ರೇಡ್ ಮಾರ್ಜಿನ್’ (ವ್ಯಾಪಾರ ಮಾರ್ಜಿನ್) ಎಂದು ಕರೆಯಲಾಗುತ್ತದೆ. ಅಂದರೆ, ಕಂಪನಿಯು ತಯಾರಿಸಿದ ಔಷಧದ ಮೂಲ ಬೆಲೆಗೂ ಮತ್ತು ರೋಗಿಗೆ ಮಾರಾಟ ಮಾಡುವ ಗರಿಷ್ಠ ಚಿಲ್ಲರೆ ಬೆಲೆಗೂ (MRP) ಇರುವ ವ್ಯತ್ಯಾಸವೇ ಈ ಮಾರ್ಜಿನ್. ಹಿಂದೆ ಈ ವಿತರಣಾ ಹಂತಗಳಲ್ಲಿ ಕೆಲವೊಮ್ಮೆ ಅತಿಯಾದ ಮತ್ತು ಮನಸ್ಸಿಗೆ ಬಂದಷ್ಟು ಲಾಭಾಂಶವನ್ನು ವಿಧಿಸಲಾಗುತ್ತಿತ್ತು, ಇದರಿಂದಾಗಿ ರೋಗಿಗಳಿಗೆ ಔಷಧಗಳು ಅತ್ಯಂತ ದುಬಾರಿ ದರದಲ್ಲಿ ಸಿಗುತ್ತಿದ್ದವು. ಈ ಹೊಸ ಕ್ರಮದ ಪ್ರಕಾರ, ಗುರುತಿಸಲಾದ 137 ಕ್ಯಾನ್ಸರ್ ನಿರೋಧಕ ಔಷಧಗಳಿಗೆ ಅನ್ವಯಿಸುವ ಟ್ರೇಡ್ ಮಾರ್ಜಿನ್ ಅನ್ನು ಗರಿಷ್ಠ ಚಿಲ್ಲರೆ ಬೆಲೆಯ ಶೇ. 30ಕ್ಕೆ ಮಿತಿಗೊಳಿಸಲಾಗಿದೆ.
ಔಷಧಗಳ ವಿತರಣೆ ಮತ್ತು ಚಿಲ್ಲರೆ ಮಾರಾಟ ಹಂತಗಳಲ್ಲಿ ಮಧ್ಯವರ್ತಿಗಳು ಮಾಡುವ ಅತಿಯಾದ ಲಾಭಕೋರತನವನ್ನು ನಿಯಂತ್ರಿಸುವುದು, ಔಷಧ ತಯಾರಕರಿಗೆ ಅವರ ಉತ್ಪಾದನೆಗೆ ತಕ್ಕಂತೆ ನ್ಯಾಯಸಮ್ಮತ ಆದಾಯ ದೊರೆಯುವಂತೆ ನೋಡಿಕೊಳ್ಳುವುದು ಹಾಗೂ ಮಾರುಕಟ್ಟೆಯಲ್ಲಿ ಔಷಧಗಳ ಯಾವುದೇ ರೀತಿಯ ಕೃತಕ ಕೊರತೆ ಉಂಟಾಗದಂತೆ ಮತ್ತು ಸರಬರಾಜು ಸರಾಗವಾಗಿ ಮುಂದುವರಿಯುವಂತೆ ಎಚ್ಚರಿಕೆ ವಹಿಸುವುದು ಈ ನಿಯಂತ್ರಣ ಕ್ರಮದ ಮುಖ್ಯ ಉದ್ದೇಶವಾಗಿದೆ.
ಔಷಧಗಳ ಪಟ್ಟಿ
ಸಚಿವಾಲಯದ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಔಷಧಗಳ ಪಟ್ಟಿಯನ್ನು ನೀಡಲಾಗಿದೆ. ಕೆಲವು ಹೆಸರುಗಳನ್ನು ಮೂಲ ಪಟ್ಟಿಯಲ್ಲಿರುವ ಇಂಗ್ಲಿಷ್ ರೂಪದಲ್ಲಿಯೇ ಉಳಿಸಲಾಗಿದೆ. ಔಷಧದ ಹೆಸರನ್ನು ಸರಿಯಾಗಿ ಗುರುತಿಸಲು ಇದು ಸಹಾಯಕವಾಗುತ್ತದೆ.
- Abemaciclib
- Abiraterone acetate
- Acalabrutinib
- Afatinib
- Alectinib
- Alpelisib
- Amivantamab
- Anastrozole (ಮೂಲ ಪಟ್ಟಿಯಲ್ಲಿ Anastrazole)
- Apalutamide
- Asciminib
- Atezolizumab
- Avelumab
- Axitinib
- Azacitidine
- Belantamab Mafodotin
- Bevacizumab
- Bosutinib
- Brentuximab Vedotin
- Brigatinib
- Busulfan
- Cabazitaxel
- Cabozantinib (S) – Maleate
- Capmatinib
- Carfilzomib
- Carmustine
- Ceritinib
- Cetuximab
- Cladribine
- Clofarabine
- Crizotinib
- Cytarabine
- Dabrafenib
- Dacomitinib
- Daratumumab
- Darolutamide
- Dasatinib
- Datopotamab Deruxtecan
- Decitabine
- Degarelix
- Denosumab
- Dostarlimab
- Durvalumab
- Elranatamab
- Enfortumab vedotin
- Entrectinib
- Enzalutamide
- Epirubicin
- Erdafitinib
- Eribulin mesylate
- Erlotinib
- Estramustine
- Everolimus
- Exemestane
- Fludarabine
- Fulvestrant
- Gilteritinib
- Goserelin acetate
- Ibritumomab
- Ibrutinib
- Idelalisib
- Ifosfamide & Mesna
- Nivolumab and Relatlimab (ಮೂಲ ಪಟ್ಟಿಯಲ್ಲಿ Relatimab)
- Pegylated Liposomal Irinotecan
- Inotuzumab Ozogamicin
- Interferon Alpha 2B
- Ipilimumab
- Ivosidenib
- Lapatinib (ಮೂಲ ಪಟ್ಟಿಯಲ್ಲಿ Lapatanib)
- Lazertinib
- Lenvatinib
- Lomustine
- Lorlatinib
- Lymphoseek kit
- Megestrol
- Midostaurin (ಮೂಲ ಪಟ್ಟಿಯಲ್ಲಿ Midostrurin)
- Mirvetuximab soravtansine
- Mitomycin
- Mitoxantrone
- Nelarabine
- Netupitant
- Nilotinib
- Nimotuzumab
- Nintedanib
- Niraparib
- Nivolumab
- Obinutuzumab
- Ofatumumab
- Olaparib
- Osimertinib
- Palbociclib
- Panitumumab (Vectibix)
- Pazopanib (as Hydrochloride)
- Pegasparginase
- Pegfilgrastim
- Pegylated interferon Alpha 2B
- Pembrolizumab
- Pemetrexed
- Pertuzumab
- Pertuzumab + Trastuzumab
- Plerixafor
- Polatuzumab Vedotin
- Pomalidomide
- Ramucirumab
- Regorafenib
- Relugolix
- Ribociclib
- Rucaparib
- Ruxolitinib
- Selpercatinib
- Selumetinib
- Serplulimab
- Sotorasib
- Sunitinib
- Talquetamab
- Teclistamab
- Tegafur + Uracil
- Tegafur, Gimeracil and Oteracil
- Temsirolimus
- Tepotinib (ಮೂಲ ಪಟ್ಟಿಯಲ್ಲಿ Tepotinibe)
- Thiotepa
- Tislelizumab
- Tocilizumab
- Topotecan
- Toripalimab
- Trabectedin
- Trametinib
- Tremelimumab
- Treosulfan
- Trifluridine + Tipiracil
- Triptorelin
- Tucatinib
- Vemurafenib
- Venetoclax
- Vinorelbine tartrate
- Vorasidenib
- Zanubrutinib
- Zolbetuximab
ಇದನ್ನೂ ಓದಿ:
ಔಷಧ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
- ಅಧಿಸೂಚನೆ ಪ್ರಕಟವಾದ ಏಳು ದಿನಗಳೊಳಗೆ ತಯಾರಕರು ಪರಿಷ್ಕೃತ ಬೆಲೆಗಳನ್ನು NPPAಗೆ ತಿಳಿಸಬೇಕು.
- ಔಷಧ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪರಿಷ್ಕೃತ ಬೆಲೆಪಟ್ಟಿಯನ್ನು ಪ್ರಕಟಿಸಬೇಕು ಮತ್ತು ಚಿಲ್ಲರೆ ವ್ಯಾಪಾರಿಗಳು ಹಾಗೂ ಆಸ್ಪತ್ರೆಗಳಿಗೆ ಮಾಹಿತಿ ನೀಡಬೇಕು.
- ಔಷಧ ಮಾರಾಟಗಾರರು ಮತ್ತು ಆಸ್ಪತ್ರೆಗಳು ನವೆಂಬರ್ 9, 2026ರಿಂದ ಅನ್ವಯಿಸುವ ಕಡಿಮೆ ಬೆಲೆಯಲ್ಲಿಯೇ ಔಷಧಗಳನ್ನು ಮಾರಾಟ ಮಾಡಬೇಕು.
- ಆಸ್ಪತ್ರೆಗಳು ತಮ್ಮ ಔಷಧಾಲಯಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಪರಿಷ್ಕೃತ ಬೆಲೆಗಳನ್ನು ಪ್ರದರ್ಶಿಸಬೇಕು.
- ಗ್ರಾಹಕರು Pharma Sahi Daam ಆ್ಯಪ್ ಮತ್ತು NPPA ವೆಬ್‌ಸೈಟ್ ಮೂಲಕ ಔಷಧಗಳ ಅಧಿಕೃತ ಬೆಲೆಗಳನ್ನು ಪರಿಶೀಲಿಸಬಹುದು.
ರೋಗಿಗಳು ಬೆಲೆ ಇಳಿಕೆಯನ್ನು ಹೇಗೆ ಖಚಿತಪಡಿಸಿಕೊಳ್ಳಬೇಕು?
- ಔಷಧದ ಹೆಸರು ಮಾತ್ರವಲ್ಲದೆ ಅದರ ಪ್ರಮಾಣ, ಬ್ರ್ಯಾಂಡ್ ಮತ್ತು ಪ್ಯಾಕ್ ಗಾತ್ರವನ್ನೂ ಪರಿಶೀಲಿಸಿ.
- ಹಿಂದಿನ ಬಿಲ್‌ನಲ್ಲಿರುವ ಬೆಲೆಯನ್ನು ಹೊಸ ಅಧಿಕೃತ MRPಯೊಂದಿಗೆ ಹೋಲಿಸಿ.
- Pharma Sahi Daam ಆ್ಯಪ್ ಅಥವಾ NPPA ವೆಬ್‌ಸೈಟ್‌ನಲ್ಲಿ ಬೆಲೆ ಪರಿಶೀಲಿಸಿ.
- ಆಸ್ಪತ್ರೆಯ ಔಷಧಾಲಯದಲ್ಲಿ ಪರಿಷ್ಕೃತ ಬೆಲೆಪಟ್ಟಿಯನ್ನು ಕೇಳಿ.
- ಅಧಿಕೃತ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಬಿಲ್‌ನ್ನು ಉಳಿಸಿಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ.
- ವೈದ್ಯರ ಸಲಹೆಯಿಲ್ಲದೆ ಔಷಧವನ್ನು ಬದಲಾಯಿಸಬೇಡಿ ಅಥವಾ ಚಿಕಿತ್ಸೆಯನ್ನು ನಿಲ್ಲಿಸಬೇಡಿ.
ಇದನ್ನ ಹೊರತುಪಡಿಸಿ ಔಷಧ ತಯಾರಿಕಾ ಕಂಪನಿಗಳು ತಮ್ಮ ಪ್ರಸ್ತುತ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣವನ್ನು ಯಥಾವತ್ತಾಗಿ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಎಲ್ಲಾ ಆಸ್ಪತ್ರೆಗಳು, ಫಾರ್ಮಸಿಗಳು ಮತ್ತು ಕಂಪನಿಗಳು ತಮ್ಮ ಪರಿಷ್ಕೃತ ದರಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹಾಗೂ ಪ್ರದರ್ಶನ ಫಲಕಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕಾಗಿದೆ. ಸಾರ್ವಜನಿಕರು ಹಾಗೂ ರೋಗಿಗಳ ಅನುಕೂಲಕ್ಕಾಗಿ ‘Pharma Sahi Daam’ ಮೊಬೈಲ್ ಆ್ಯಪ್ ಮತ್ತು NPPA ವೆಬ್‌ಸೈಟ್ ಮೂಲಕ ಬೆಲೆಗಳನ್ನು ಸರಳವಾಗಿ ಪರಿಶೀಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರದ ಈ ಮಹತ್ವದ ತೀರ್ಮಾನವು ಕ್ಯಾನ್ಸರ್ ಚಿಕಿತ್ಸೆಗೆ ತಗುಲುವ ಭಾರಿ ವೆಚ್ಚದಿಂದ ಕಂಗೆಟ್ಟಿದ್ದ ಲಕ್ಷಾಂತರ ಕುಟುಂಬಗಳಿಗೆ ಹೊಸ ಭರವಸೆ ನೀಡಿದೆ.





