ಶಾಂತಿ ಮಾತುಕತೆ ಬೆನ್ನಲ್ಲೇ ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; 2 ಸಾವು, 34 ಮಂದಿಗೆ ಗಾಯ

Date:

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಕುರಿತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಕೆಲವೇ ಗಂಟೆಗಳಲ್ಲಿ ಉಕ್ರೇನ್‌ ರಾಜಧಾನಿ ಕೀವ್ ಮೇಲೆ ರಷ್ಯಾ ತೀವ್ರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ರಷ್ಯಾ ಮೂರು ಅಲೆಗಳಲ್ಲಿ 21 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕೀವ್‌ನತ್ತ ಉಡಾಯಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಕೀವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 34 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ವಸತಿ ಕಟ್ಟಡಗಳು, ಇಂಧನ ಮೂಲಸೌಕರ್ಯ, ರೈಲು ನಿಲ್ದಾಣ, ಮೆಟ್ರೋ ವ್ಯವಸ್ಥೆ, ಶಾಪಿಂಗ್ ಮಾಲ್‌ಗಳು ಹಾಗೂ ಹಲವು ಉದ್ಯಮಗಳಿಗೆ ಹಾನಿಯಾಗಿದೆ. ಮಠವೊಂದಕ್ಕೂ ಹಾನಿಯಾಗಿರುವುದಾಗಿ ಝೆಲೆನ್ಸ್ಕಿ ಟೆಲಿಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಉಕ್ರೇನ್ ವಾಯುಪಡೆಯ ಪ್ರಕಾರ, ರಷ್ಯಾ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಮಿಶ್ರಣವನ್ನು ಬಳಸಿ ದಾಳಿ ನಡೆಸಿದೆ. ಈ ಕ್ಷಿಪಣಿಗಳ ಪೈಕಿ ಯಾವುದನ್ನೂ ತಡೆಯಲು ಸಾಧ್ಯವಾಗಿಲ್ಲ ಎಂದು ವಾಯುಪಡೆ ಹೇಳಿದೆ. ಇದರೊಂದಿಗೆ 210 ಡ್ರೋನ್‌ಗಳನ್ನು ಉಡಾಯಿಸಲಾಗಿದ್ದು, ಅವುಗಳಲ್ಲಿ 181 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟು 32 ಸ್ಥಳಗಳಲ್ಲಿ ದಾಳಿಯ ಪರಿಣಾಮ ದಾಖಲಾಗಿದೆ.

ಕೀವ್ ಮೇಲೆ ದಾಳಿ ತೀವ್ರಗೊಂಡಿರುವ ನಡುವೆಯೇ, ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಖಾರ್ಕಿವ್ ಪ್ರದೇಶದ ಮಾರುಕಟ್ಟೆಯೊಂದರ ಮೇಲೆ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಅವರು ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲು ನಾರ್ವೆಯ ರಾಜಧಾನಿ ಓಸ್ಲೋಗೆ ತೆರಳಿದ್ದರು. ಬಳಿಕ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಅಧ್ಯಕ್ಷ ರಷ್ಯಾ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಗಳು ರಚನಾತ್ಮಕವಾಗಿದ್ದವು. ಅಮೆರಿಕ, ರಷ್ಯಾ ಮತ್ತು ಉಕ್ರೇನ್ ನಡುವೆ ತಾಂತ್ರಿಕ ಮಟ್ಟದಲ್ಲಿ ತ್ರಿಪಕ್ಷೀಯ ಮಾತುಕತೆಗಳು ಮುಂದುವರಿಯಲಿವೆ ಎಂದು ವಿಟ್ಕಾಫ್ ತಿಳಿಸಿದ್ದರು. ಆದರೆ, ಮಾತುಕತೆಗಳ ಕೆಲವೇ ಗಂಟೆಗಳಲ್ಲಿ ನಡೆದ ದಾಳಿಯನ್ನು ಝೆಲೆನ್ಸ್ಕಿ ತೀವ್ರವಾಗಿ ಟೀಕಿಸಿದ್ದಾರೆ. ರಷ್ಯಾದ ಧೋರಣೆಯಲ್ಲಿ ಯಾವುದೇ ನೈಜ ಬದಲಾವಣೆ ಕಂಡುಬಂದಿಲ್ಲ ಎಂಬುದನ್ನು ಈ ದಾಳಿಗಳು ತೋರಿಸುತ್ತವೆ ಎಂದು ಅವರು ಹೇಳಿದ್ದಾರೆ.

“ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮಾತುಕತೆಗಳಿಗೆ ನೀಡುವ ಪ್ರತಿಕ್ರಿಯೆಯಾಗಿದ್ದರೆ, ಅದರ ಕ್ರಮಗಳನ್ನು ಬದಲಾಯಿಸಲು ರಷ್ಯಾದ ಮೇಲೆ ನೈಜ ಒತ್ತಡ ಹೇರಬೇಕು” ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನ ವಾಯುರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು, ಕ್ಷಿಪಣಿಗಳ ತ್ವರಿತ ಪೂರೈಕೆ, ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳನ್ನು ನಾಶಪಡಿಸುವ ಸಾಮರ್ಥ್ಯ ಹೆಚ್ಚಿಸುವುದು ಮತ್ತು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಬಿಗಿಗೊಳಿಸುವುದು ಅಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ, ರಷ್ಯಾದೊಳಗಿನ ಗುರಿಗಳ ಮೇಲೆ ಉಕ್ರೇನ್ ತನ್ನ ದೂರಗಾಮಿ ಡ್ರೋನ್ ದಾಳಿಗಳನ್ನು ಮುಂದುವರಿಸಿದೆ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಅವರ ಪ್ರಕಾರ, ರಷ್ಯಾದ ರಾಜಧಾನಿಯ ಮೇಲೆ ಕನಿಷ್ಠ 630 ಉಕ್ರೇನ್ ಡ್ರೋನ್‌ಗಳು ದಾಳಿ ನಡೆಸಿವೆ. ಈ ವರ್ಷದ ಅತಿದೊಡ್ಡ ಡ್ರೋನ್ ದಾಳಿಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ. ದಾಳಿಗಳಿಂದ ವಸತಿ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು, ಮಾಸ್ಕೋದಲ್ಲಿ ಕನಿಷ್ಠ ಇಬ್ಬರು ಹಾಗೂ ಇತರ ಪಟ್ಟಣಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೊಬ್ಯಾನಿನ್ ತಿಳಿಸಿದ್ದಾರೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಜಗತ್ತು ಬಯಸುತ್ತಿರುವುದು ಯುದ್ಧವನ್ನಲ್ಲ; ಶಾಂತಿ-ನೆಮ್ಮದಿಯನ್ನು

ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ರಾತ್ರಿಯಿಡೀ ಕನಿಷ್ಠ 808 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ರಷ್ಯಾದ 17 ಪ್ರದೇಶಗಳು, ಆಕ್ರಮಿತ ಕ್ರಿಮಿಯಾ ಮತ್ತು ಕಪ್ಪು ಸಮುದ್ರದ ಮೇಲೆ ಡ್ರೋನ್‌ಗಳನ್ನು ತಡೆದಿರುವುದಾಗಿ ಸಚಿವಾಲಯ ಹೇಳಿದೆ.

ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಮಾಸ್ಕೋದ ವ್ನುಕೋವೊ, ಡೊಮೊಡೆಡೊವೊ, ಝುಕೋವ್ಸ್ಕಿ ಮತ್ತು ಶೆರೆಮೆಟಿಯೆವೊ ಸೇರಿದಂತೆ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಾತ್ಕಾಲಿಕ ವಿಮಾನ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದಲ್ಲದೆ, ಪ್ಸ್ಕೋವ್, ಟಾಂಬೋವ್, ಸೋಚಿ, ಗೆಲೆಂಡ್ಝಿಕ್, ಕಲುಗಾ ಮತ್ತು ಯಾರೋಸ್ಲಾವ್ಲ್ ವಿಮಾನ ನಿಲ್ದಾಣಗಳಲ್ಲಿಯೂ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ರಷ್ಯಾದ ಫೆಡರಲ್ ವಾಯು ಸಾರಿಗೆ ಸಂಸ್ಥೆ ತಿಳಿಸಿದೆ.

ಒಟ್ಟಾರೆ, ಶಾಂತಿ ಮಾತುಕತೆಗಳ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಮುಂದುವರಿದಿದ್ದರೂ, ರಷ್ಯಾ ಮತ್ತು ಉಕ್ರೇನ್ ನಡುವಿನ ಪರಸ್ಪರ ದಾಳಿಗಳು ತೀವ್ರಗೊಂಡಿರುವುದು ಕದನ ವಿರಾಮದ ಪ್ರಯತ್ನಗಳಿಗೆ ಸವಾಲಾಗಿ ಪರಿಣಮಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಸಾವು, ನೂರಾರು ಮನೆಗಳು ನೆಲಸಮ

ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಭೂಕಂಪ ಸಂಭವಿಸಿದೆ.‌...

ಚುನಾವಣಾ ಆಯೋಗದಲ್ಲಿ ಭಿನ್ನಮತ? ಅಧಿಕಾರಿ ವಿರುದ್ಧ ಕ್ರಮಕ್ಕೆ ಇಬ್ಬರು ಆಯುಕ್ತರ ಆಗ್ರಹ; ‘ಹಸ್ತಕ್ಷೇಪ’ ಎಂದಿದ್ದ ಕೇಂದ್ರ

ಕೇಂದ್ರ ಚುನಾವಣಾ ಆಯೋಗದೊಳಗೆ ಎಲ್ಲವೂ ಸರಿಯಿಲ್ಲವೇ? ಇಬ್ಬರು ಚುನಾವಣಾ ಆಯುಕ್ತರು ಹಿರಿಯ...

ಬಸವಕಲ್ಯಾಣ | ಪ್ರತಾಪೂರ ಗ್ರಾ.ಪಂ.ನಲ್ಲಿ ₹25.34 ಲಕ್ಷ ಅಕ್ರಮದ ಆರೋಪ, ತನಿಖೆಗೆ ಆದೇಶವಿದ್ದರೂ ವಿಳಂಬ!

ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ...

ವಿಜಯಪುರ | ಜಿಪಂನಿಂದ ಉಚಿತ ಕಂಪ್ಯೂಟರ್ ತರಬೇತಿ: ಅಭ್ಯರ್ಥಿಗಳಿಗೆ ₹1,500 ಸಹಾಯಧನ

ನಿರುದ್ಯೋಗಿ ಯುವಜನರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯ...