ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ 50 ಸಾವಿರ ರೂ. ಬಹುಮಾನ ನೀಡಿದ ಜಮೀರ್ ಅಹಮದ್ ಖಾನ್

Date:

Advertisements
  • ಇಂಡೋನೆಷ್ಯಾ ಜಕಾರ್ತಾದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ
  • ವಿಶೇಷ ಚೇತನರ ಪರ ಕೆಲಸ ಮಾಡುವ ಗ್ಲೋಬಲ್ ಆರ್ಗನೈಜೇಶನ್ ಸಂಸ್ಥೆಗೆ 2 ಲಕ್ಷ ನೆರವು

ಇಂಡೋನೆಷ್ಯಾ ಜಕಾರ್ತಾದಲ್ಲಿ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಮೊಹಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ 50 ಸಾವಿರ ರೂ. ಬಹುಮಾನ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಪದಕ ಗೆದ್ದ ಮೊಹಮದ್ ತಾಹೀರ್‌ಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.

ಕಳೆದ ತಿಂಗಳು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರೊಂದಿಗೆ ಬಂದಿದ್ದ ತಾಹೀರ್, “ನಾನು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದು ಪಾಲ್ಗೊಳ್ಳಲು ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ತಂದೆ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು ಅಷ್ಟು ಹಣ ಹೊಂದಿಸಲು ಆಗುತ್ತಿಲ್ಲ” ಎಂದು ಹೇಳಿದ್ದ. ಆಗ ಈ ವಿದ್ಯಾರ್ಥಿಗೆ ಸಚಿವರು 65 ಸಾವಿರ ರೂ. ವಿಮಾನಯಾನ ಟಿಕೆಟ್ ಮಾಡಿಸಿಕೊಟ್ಟಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಬ್ಬಾಳದ ಕ್ರೆಸೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಹೀರ್ ಚಿನ್ನದ ಪದಕ ಗೆದ್ದು ಬಂದಿದ್ದಾನೆ.

ಇಂದು ಸಚಿವರ ಬಳಿ ಬಂದಿದ್ದ ತಾಹೀರ್ ಪೋಷಕರು, ನೀವು ಸಹಾಯ ಮಾಡಿದ್ದಕ್ಕೆ ನಮ್ಮ ಮಗ ಸ್ಪರ್ಧೆಯಲ್ಲಿ ಭಾಗಿಯಾಗಿ ಬಂಗಾರ ಪದಕ ಗೆಲ್ಲುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದರು. 50 ಸಾವಿರ ನಗದು ಬಹುಮಾನ ನೀಡಿದ ಸಚಿವರು, ನಿಮ್ಮ ಮಗನ ಸಾಧನೆ ಹೆಮ್ಮೆಯ ವಿಷಯ ಎಂದು ಹೇಳಿದರು.

ವಿಶೇಷ ಚೇತನರ ಪರ ಕೆಲಸ ಮಾಡುವ ಗ್ಲೋಬಲ್ ಆರ್ಗನೈಜೇಶನ್ ಸಂಸ್ಥೆಗೆ ಸಚಿವರು ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವನ್ನು ಇದೇ ಸಂದರ್ಭದಲ್ಲಿ ನೀಡಿದರು.

ಮಾಜಿ ಸಂಸದ ಚಂದ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ, ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೇಖರ್, ಮುಖಂಡರಾದ ಜಿ. ಎ. ಬಾವಾ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಒತ್ತುವರಿ ಅರಣ್ಯ ಭೂಮಿ ವಶಕ್ಕೆ ವಿಶೇಷ ಕಾರ್ಯಪಡೆ ರಚನೆ; ಅರಣ್ಯ ಸಚಿವರ ಆದೇಶ

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮರುಪಡೆಯಲು, ಕರ್ನಾಟಕ ಅರಣ್ಯ...

ನಮ್ಮ ಸಚಿವರು | ಕರ್ನಾಟಕ – ಕೇರಳಕ್ಕೂ ಇದೆ ಹಲವು ರಾಜಕೀಯ ನಂಟು; ಅದು ಕೆ ಜೆ ಜಾರ್ಜ್‌ಗೂ ಉಂಟು

ಇಂದಿರಾಗಾಂಧಿಯವರ ಕಾಲದಿಂದಲೂ ಕೆ ಜೆ ಜಾರ್ಜ್ ಕಾಂಗ್ರೆಸ್‌ನ ಯುವ ನಾಯಕರಾಗಿದ್ದಾರೆ. 1989...

ನಮ್ಮ ಸಚಿವರು | ಅಂದು ಗೌಡರ ಶಿಷ್ಯ, ಇಂದು ಸಿದ್ದು ಬಂಟ; ಪ್ರಭಾವಿ ರಾಜಕೀಯ ನಾಯಕನಾದ ಟ್ರಾವೆಲ್ಸ್ ಮಾಲೀಕ

ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಕೂಡ ಪ್ರಭಾವಿಯಾಗಿದ್ದಾರೆ. 2015ರಲ್ಲಿ ನಡೆದ...

ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು

ಮುಖ್ಯಮಂತ್ರಿಗಳಾಗಿದ್ದ ತಂದೆ ಆರ್. ಗುಂಡೂರಾವ್ ನೆರಳಿನಲ್ಲಿ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡ...

Download Eedina App Android / iOS

X