ಬೆಂಗಳೂರು| ಹೆಬ್ಬಗೋಡಿಯ ಎಬಿನೈಜರ್​ ಶಾಲೆಗೆ ಮತ್ತೆ ಬಾಂಬ್ ಬೆದರಿಕೆ

Date:

Advertisements
  • ಹೆಬ್ಬಗೋಡಿ ಪೊಲೀಸ್‌ ಠಾಣೆಗೆ ಶಾಲಾ ಆಡಳಿತ ಮಂಡಳಿ ಮಾಹಿತಿ
  • ಕಳೆದ ಕೆಲ ತಿಂಗಳ‌ ಹಿಂದೆಯೂ ಶಾಲೆಗೆ ಬೆದರಿಕೆ ಸಂದೇಶ ಬಂದಿತ್ತು

ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೋಡಿ ಶಾಲೆಯೊಂದರಲ್ಲಿ ಬಾಂಬ್‌ ಇರುವುದಾಗಿ ಇ-ಮೇಲ್​​ ಮೂಲಕ ಸಂದೇಶ ಬಂದಿದೆ.

ಬೆಂಗಳೂರಿನ ಎಬಿನೈಜರ್​ ಶಾಲೆಯಲ್ಲಿ ಬಾಂಬ್ ಇರುವುದಾಗಿ ಶಾಲೆಯ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ್ ಬಂದಿದೆ. ಮುಂಜಾಗೃತ ಕ್ರಮವಾಗಿ ಶಾಲೆಯ ಆಡಳಿತ ಮಂಡಳಿ ಶಾಲಾ ಪ್ರವೇಶ ಪ್ರಕ್ರಿಯೆ ನಿರ್ಬಂಧಿಸಿದೆ.

ಘಟನೆಯ ಬಗ್ಗೆ ಹೆಬ್ಬಗೋಡಿ ಪೊಲೀಸ್‌ ಠಾಣೆಗೆ ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಶಾಲಾ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚುನಾವಣೆಗಾಗಿ 41 ಸಾವಿರ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಬೆದರಿಕೆ ಸಂದೇಶ ಎರಡನೇ ಬಾರಿ

ಎಬಿನೈಜರ್​ ಶಾಲೆಯಲ್ಲಿ ಬಾಂಬ್​ ಇರುವುದಾಗಿ ಕಳೆದ ಕೆಲ ತಿಂಗಳ‌ ಹಿಂದೆ ಶಾಲೆಯ ಮೇಲ್‌ಗೆ ಬೆದರಿಕೆ ಸಂದೇಶ ಬಂದಿತ್ತು. ಪೊಲೀಸ್ ತನಿಖೆ ವೇಳೆ ಇದು ಹುಸಿ ಬಾಂಬ್ ಬೆದರಿಕೆ ಎನ್ನುವುದು ತಿಳಿದುಬಂದಿದೆ. ಇದೀಗ ಮತ್ತೆ ಬಾಂಬ್ ಇರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣು ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯ: ಕ್ರೀಡಾಪಟು ಅಂಜು ಬಾಬಿ‌ ಜಾರ್ಜ್

ಹೆಣ್ಣು ಮಕ್ಕಳು ನಮ್ಮ ದೇಶದ ಮುಂದಿನ ಭವಿಷ್ಯ.‌ ಕ್ರೀಡೆ ಸೇರಿದಂತೆ ಹೆಣ್ಣು...

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ವತಿಯಿಂದ ಅ.2ರಿಂದ ರಾಜ್ಯಾದ್ಯಂತ ʼಅರಿವು-ಮಾನವೀಯತೆʼ ಜಾಗೃತಿ ಅಭಿಯಾನ

ಕರ್ನಾಟಕ ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ವತಿಯಿಂದ ಅ.2ರಿಂದ ರಾಜ್ಯಾದ್ಯಂತ...

ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಬೆಂಬಲಕ್ಕೆ ಬೃಹತ್ ಪ್ರತಿಭಟನೆ: ನರಮೇಧ ನಿಲ್ಲಿಸಿ ಎಂದು ಆಗ್ರಹ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ದೊಡ್ಡ ಸಂಖ್ಯೆಯ ಜನರು ಸೇರಿ, ಗಾಜಾದಲ್ಲಿ...

ರೈತರು ಸಹಕಾರ ಸಂಘಗಳಲ್ಲಿ ವ್ಯವಹರಿಸಿ ಸಂಘದ ಉನ್ನತಿಗೆ ಸಹಕರಿಸಿ

ದೇವನಹಳ್ಳಿ:ರೈತರು ಸಹಕಾರ ಸಂಘಗಳಲ್ಲಿ ವ್ಯವಹರಿಸಿ ಸಂಘದ ಉನ್ನತಿಗೆ ಸಹಕರಿಸಿ ಖಾಸಗಿ ಬ್ಯಾಂಕ್‌ಗಳಲ್ಲಿ...

Download Eedina App Android / iOS

X